Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 15:17 - ಕನ್ನಡ ಸತ್ಯವೇದವು J.V. (BSI)

17 ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರ ಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬವರನ್ನಲ್ಲದೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಆಗ ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬುವರನ್ನಲ್ಲದೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17-21 ಗಾಯಕರ ಮಂಡಳಿಯಿಂದ ಕಂಚಿನ ತಾಳಗಳನ್ನು ಬಾರಿಸಲು ಆಯ್ಕೆಹೊಂದಿದವರು: ಯೋವೇಲನ ಮಗ ಹೇಮಾನ್, ಅವನ ಬಂಧು ಬೆರೆಕ್ಯನ ಮಗ ಆಸಾಫ್, ಮೆರಾರೀ ಕುಟುಂಬಕ್ಕೆ ಸೇರಿದ ಕೂಷಾಯನ ಮಗ ಏತಾನ್ ಎಂಬವರು. ತಮಗೆ ಸಹಾಯ ಮಾಡಲು ತಾರಸ್ಥಾಯಿಯ ತಂತಿವಾದ್ಯಗಳನ್ನು ಬಾರಿಸಲು ಜೆಕರ್ಯ, ಬೇನ್, ಯಾಜೀಯೇಲ್, ಶಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ ಹಾಗು ಮಸೇಯ ಎಂಬವರನ್ನು ಆರಿಸಿಕೊಂಡರು. ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸಲು ಮತಿತ್ಯ, ಎಲೀಫೆಲೇಹು, ಮಿಕ್ನೇಯ, ದೇವಾಲಯದ ದ್ವಾರಪಾಲಕರಾದ ಓಬೇದೆದೋಮ್ ಮತ್ತು ಯೆಗೀಯೇಲರನ್ನೂ ನೇಮಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಲೇವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಆಸಾಫನನ್ನೂ ಏತಾನನನ್ನೂ ಕರೆತಂದರು. ಹೇಮಾನನು ಯೋವೇಲನ ಮಗ. ಆಸಾಫನು ಬೆರೆಕ್ಯನ ಮಗ. ಏತಾನನು ಕೂಷಾಯನ ಮಗ. ಇವರೆಲ್ಲಾ ಮೆರಾರೀಯ ಸಂತತಿಯವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಹಾಗೆಯೇ ಲೇವಿಯರು ಯೋಯೇಲನ ಮಗನಾದ ಹೇಮಾನನನ್ನೂ, ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ, ಮೆರಾರೀಯ ಪುತ್ರರ ಸಂಬಂಧಿಕರಲ್ಲಿ ಕೂಷಾಯನ ಮಗ ಏತಾನನನ್ನೂ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 15:17
15 ತಿಳಿವುಗಳ ಹೋಲಿಕೆ  

ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ ಮೆರಾರೀಯನೂ ಆದ ಏತಾನನು [ಮೂರನೆಯವನು]. ಇವನು ಕೀಷೀಯ ಮಗನು; ಇವನು ಅಬ್ದೀಯ ಮಗನು; ಇವನು ಮಲ್ಲೂಕನ ಮಗನು;


ಇವನ ಬಲಗಡೆಯಲ್ಲಿ ನಿಲುತ್ತಿದ್ದ ಇವನ ಸಹೋದರನಾದ ಆಸಾಫನು [ಎರಡನೆಯವನು].


ದೇವಾಲಯಸೇವಕರೂ ಅವರ ವಂಶಾವಳಿಯೂ - ಕೆಹಾತ್ಯನಾದ ಹೇಮಾನನು [ಮೊದಲನೆಯವನು].


ದೇವರೇ, ಸುಮ್ಮನಿರಬೇಡ; ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ.


ದೇವರು ನಿರ್ಮಲಚಿತ್ತರಾದ ಇಸ್ರಾಯೇಲ್ಯರಿಗೆ ದಯಾಪರನೇ ಹೌದು.


ಗಾಯಕರಾದ ಹೇಮಾನ್ ಆಸಾಫ್ ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಹೊಡೆಯುವವರು.


ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಮರಚಲ ಮಗನ ಹೆಸರು ಅಬೀಯ.


ತಮ್ಮ ಸಹೋದರರೊಳಗೆ ಎರಡನೆಯ ತರಗತಿಯವರಾದ ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ವಿುಕ್ನೇಯ, ದ್ವಾರಪಾಲಕರಾದ ಓಬೇದೆದೋಮ್ ಯೆಗೀಯೇಲರು ಇವರನ್ನು ನೇವಿುಸಿದರು.


ದೇವದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಆಜ್ಞಾಪಿಸುತ್ತಾನೆ.


ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಇವರೇ.


ಇವನ ಮಗನು ತಹತ್; ಇವನ ಮಗನು ಊರೀಯೇಲ್; ಇವನ ಮಗನು ಉಜ್ಜೀಯ; ಇವನ ಮಗನು ಸೌಲ್.


ಮೆರಾರೀ ಸಂತಾನದವರು - ಇವನ ಮಗನು ಮಹ್ಲೀ; ಇವನ ಮಗನು ಲಿಬ್ನೀ; ಇವನ ಮಗನು ಶಿಮ್ಮೀ;


ಅವರ ಬಳಿಯಲ್ಲಿ ಯೆಹೋವನನ್ನು ಆತನ ಶಾಶ್ವತವಾದ ಕೃಪೆಗೋಸ್ಕರ ಸ್ತುತಿಸುವದಕ್ಕೆ ಹೇಮಾನ್ ಯೆದುತೂನರೂ ಹೆಸರು ಹೆಸರಾಗಿ ನೇವಿುಸಲ್ಪಟ್ಟ ಬೇರೆ ಜನರೂ ಇದ್ದರು.


ಹೇಮಾನ್‍ಯೆದುತೂನರ ಹತ್ತಿರ ವಾದ್ಯಗಾರರಿಗೋಸ್ಕರ ತುತೂರಿ ತಾಳ ಮೊದಲಾದ ದೇವಕೀರ್ತನಾಸಾಹಿತ್ಯಗಳಿದ್ದವು. ಯೆದುತೂನನ ಮಕ್ಕಳೂ ದ್ವಾರಪಾಲಕರಾಗಿ ನೇವಿುಸಲ್ಪಟ್ಟರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು