Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 13:1 - ಕನ್ನಡ ಸತ್ಯವೇದವು J.V. (BSI)

1 ದಾವೀದನು ಸಹಸ್ರಾಧಿಪತಿ ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಮಾತಾಡಿದನಂತರ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ದಾವೀದನು ಸಹಸ್ರಾಧಿಪತಿ, ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಸಮಾಲೋಚನೆ ಮಾಡಿದ ನಂತರ ಇಸ್ರಾಯೇಲ್ಯರ ಸಮಸ್ತ ಸಮೂಹದವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಅರಸ ದಾವೀದನು ಸರ್ವಸಹಸ್ರಾಧಿಪತಿಗಳೊಂದಿಗೂ ಶತಾಧಿಪತಿಗಳೊಂದಿಗೂ ಸಮಾಲೋಚನೆ ನಡೆಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ದಾವೀದನು ತನ್ನ ಎಲ್ಲಾ ಸೇನಾಧಿಪತಿಗಳೊಂದಿಗೆ ಮಾತನಾಡಿದನು. ಅವನು ಸಹಸ್ರಾಧಿಪತಿಗಳೊಂದಿಗೆ, ಶತಾಧಿಪತಿಗಳೊಂದಿಗೆ ಮತ್ತು ಪ್ರತಿಯೊಬ್ಬ ನಾಯಕನೊಂದಿಗೆ ಚರ್ಚಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ದಾವೀದನು ಸಾವಿರ ಮಂದಿಗೂ, ನೂರು ಮಂದಿಗೂ ಪ್ರಧಾನರಾದವರ ಸಂಗಡ, ಎಲ್ಲಾ ನಾಯಕರ ಸಂಗಡ ಆಲೋಚನೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 13:1
12 ತಿಳಿವುಗಳ ಹೋಲಿಕೆ  

ಅರಸನಾದ ಹಿಜ್ಕೀಯನು [ಮರುದಿನ] ಬೆಳಗಿನ ಜಾವದಲ್ಲೆದ್ದು ಪಟ್ಟಣದ ಮುಖಂಡರನ್ನು ಕೂಡಿಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು.


ಅವನು ಹಿಂದಿರುಗಿ ಚಿಕ್ಲಗಿಗೆ ಹೋಗುವಾಗ ಮನಸ್ಸೆಕುಲದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು.


ಅನಂತರ ಅರಸನು ದೂತರ ಮುಖಾಂತರವಾಗಿ ಯೆರೂಸಲೇವಿುನ ಮತ್ತು ಯೆಹೂದ ಪ್ರಾಂತದ ಬೇರೆ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರಿಸಿ


ಇಸ್ಸಾಕಾರ್ಯರಿಂದ ಇನ್ನೂರು ಮಂದಿ ಮುಖ್ಯಸ್ಥರು; ಇವರು ಸಮಯೋಚಿತ ಜ್ಞಾನವುಳ್ಳವರಾಗಿ ಇಸ್ರಾಯೇಲ್ಯರು ಮಾಡತಕ್ಕದ್ದನ್ನು ಅರಿತವರು; ಇವರ ಸಹೋದರರೆಲ್ಲರೂ ಇವರ ಆಜ್ಞೆಗೆ ಒಳಗಾಗಿದ್ದರು;


ಗಾದ್ಯರಾದ ಇವರು ಸೈನ್ಯಾಧಿಪತಿಗಳಾಗಿದ್ದರು; ಇವರಲ್ಲಿ ಕನಿಷ್ಠನಾದವನು ನೂರು ಮಂದಿಗೆ ಸಮನು; ಶ್ರೇಷ್ಠ ನಾದವನು ಸಾವಿರ ಮಂದಿಗೆ ಸಮಬಲನು.


ಅನಂತರ ದಾವೀದನು ಇಸ್ರಾಯೇಲ್ಯರಲ್ಲಿ ಮೂವತ್ತುಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು


ಇದಲ್ಲದೆ ಇಸ್ಸಾಕಾರ್ ಜೆಬುಲೂನ್ ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತಗಳವರು ಎತ್ತು, ಕತ್ತೆ, ಹೇಸರಕತ್ತೆ, ಒಂಟೆ ಇವುಗಳ ಮೇಲೆ ಆಹಾರಪದಾರ್ಥಗಳನ್ನು ಹೇರಿಕೊಂಡು ಬಂದರು. ಅವರು ತಂದವುಗಳಾವವಂದರೆ - ತರತರದ ರೊಟ್ಟಿ, ಅಂಜೂರ ಹಣ್ಣಿನ ಉಂಡೆ, ಒಣಗಿದ ದ್ರಾಕ್ಷೇಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವೇ. ಇಸ್ರಾಯೇಲ್ಯರೊಳಗೆ ಮಹಾ ಸಂತೋಷವಿತ್ತಷ್ಟೆ.


ಇಸ್ರಾಯೇಲ್ ಸಮಸ್ತಸಮೂಹದವರಿಗೆ - ನಿಮ್ಮ ಸಮ್ಮತಿಯೂ ನಮ್ಮ ದೇವರಾದ ಯೆಹೋವನ ಚಿತ್ತವೂ ಇರುವದಾದರೆ ನಾವು ಎಲ್ಲಾ ಇಸ್ರಾಯೇಲ್‍ಪ್ರಾಂತಗಳಲ್ಲಿರುವ ನಮ್ಮ ಸಹೋದರರನ್ನೂ ಗೋಮಾಳಸಹಿತವಾದ ತಮ್ಮ ಪಟ್ಟಣಗಳಲ್ಲಿರುವ ಯಾಜಕ ಲೇವಿಯರನ್ನೂ ಶೀಘ್ರವಾಗಿ ಕರೇಕಳುಹಿಸೋಣ.


ಅವನು ಎಲ್ಲಾ ಇಸ್ರಾಯೇಲ್ಯರನ್ನು ಅಂದರೆ ಅವರ ಶತಾಧಿಪತಿ ಸಹಸ್ರಾಧಿಪತಿಗಳನ್ನೂ ನ್ಯಾಯಾಧಿಪತಿಗಳನ್ನೂ ಗೋತ್ರಪ್ರಧಾನರಾದ ಇಸ್ರಾಯೇಲ್ ಪ್ರಭುಗಳನ್ನೂ ಕರಿಸಿಕೊಂಡು


ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹುಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.


ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು