Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 1:34 - ಕನ್ನಡ ಸತ್ಯವೇದವು J.V. (BSI)

34 ಅಬ್ರಹಾಮನು ಇಸಾಕನನ್ನು ಪಡೆದನು; ಏಸಾವ ಇಸ್ರಾಯೇಲರು ಇಸಾಕನ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಅಬ್ರಹಾಮನ ಮಗ ಇಸಾಕನಿಗೆ ಇಬ್ಬರು ಮಕ್ಕಳು - ಏಸಾವ ಮತ್ತು ಯಕೋಬ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಅಬ್ರಹಾಮನು ಇಸಾಕನ ತಂದೆ. ಇಸಾಕನ ಗಂಡುಮಕ್ಕಳು ಯಾರೆಂದರೆ: ಏಸಾವ ಮತ್ತು ಇಸ್ರೇಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಇಸಾಕನಿಗೆ ಇಬ್ಬರು ಮಕ್ಕಳು ಏಸಾವ ಮತ್ತು ಯಾಕೋಬ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 1:34
12 ತಿಳಿವುಗಳ ಹೋಲಿಕೆ  

ಅವನು ಯಾಕೋಬನಿಗೆ - ಇನ್ನು ಮೇಲೆ ನೀನು ಯಾಕೋಬನೆನ್ನಿಸಿಕೊಳ್ಳುವದಿಲ್ಲ; ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲೆಂದು ಹೆಸರುಂಟಾಗುವದು ಎಂದು ಹೇಳಿದನು.


ಇದಲ್ಲದೆ ದೇವರು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ನೇವಿುಸಿದನು. ಅದಕ್ಕನುಸಾರವಾಗಿ ಅಬ್ರಹಾಮನು ಇಸಾಕನನ್ನು ಪಡೆದು ಎಂಟನೆಯ ದಿವಸದಲ್ಲಿ ಅವನಿಗೆ ಸುನ್ನತಿಮಾಡಿದನು. ಮುಂದೆ ಇಸಾಕನು ಯಾಕೋಬನನ್ನು ಪಡೆದನು, ಯಾಕೋಬನು ಹನ್ನೆರಡು ಮಂದಿ ಮೂಲಪಿತೃಗಳನ್ನು ಪಡೆದನು.


ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು;


ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ಯಾಕೋಬನನ್ನು ಪಡೆದನು. ಯಾಕೋಬನು ಯೆಹೂದನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು.


ಅಬ್ರಹಾಮನ ಮಕ್ಕಳು - ಇಸಾಕ್, ಇಷ್ಮಾಯೇಲ್ ಇವರೇ.


ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬಿವರು ವಿುದ್ಯಾನನಿಂದ ಹುಟ್ಟಿದರು. ಇವರೆಲ್ಲರೂ ಕೆಟೂರಳ ಸಂತತಿಯವರು.


ಅಬ್ರಹಾಮನ ಮಗನಾದ ಇಸಾಕನ ಚರಿತ್ರೆ. ಅಬ್ರಹಾಮನು ಇಸಾಕನನ್ನು ಪಡೆದನು.


ಯಾಕೋಬನು - ನಿನ್ನ ಹೆಸರನ್ನು ನನಗೆ ತಿಳಿಸಬೇಕು ಸ್ವಾಮೀ ಅಂದಾಗ ಆ ಪುರುಷನು - ನನ್ನ ಹೆಸರನ್ನು ವಿಚಾರಿಸುವದೇಕೆ ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು