1 ಥೆಸಲೋನಿಕದವರಿಗೆ 2:9 - ಕನ್ನಡ ಸತ್ಯವೇದವು J.V. (BSI)9 ಸಹೋದರರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಜೀವನ ಮಾಡಿಕೊಳ್ಳುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು; ಆ ನಮ್ಮ ಕಷ್ಟವೂ ಪ್ರಯಾಸವೂ ನಿಮ್ಮ ನೆನಪಿನಲ್ಲಿರುವದಷ್ಟೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಸಹೋದರರೇ, ನಾವು ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳು ದುಡಿಯುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು. ಆ ನಮ್ಮ ಕಷ್ಟವೂ ಪ್ರಯಾಸಗಳು ನಿಮ್ಮ ನೆನಪಿನಲ್ಲಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)9 ಸಹೋದರರೇ, ನಮ್ಮ ಶ್ರಮೆ ಹಾಗೂ ದುಡಿಮೆಗಳನ್ನು ನೀವು ಮರೆಯುವಂತಿಲ್ಲ. ನಿಮ್ಮಲ್ಲಿ ಯಾರಿಗೂ ನಾವು ಹೊರೆಯಾಗಬಾರದೆಂದು, ಬದುಕಿಗಾಗಿ ಹಗಲಿರುಳೂ ದುಡಿಯುತ್ತಾ ದೇವರ ಶುಭಸಂದೇಶವನ್ನು ಸಾರಿದೆವು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಪ್ರಿಯರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಕಷ್ಟ ಪ್ರಯಾಸದಿಂದ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವೆಂಬುದು ನಿಮ್ಮ ನೆನಪಿನಲ್ಲಿರುವುದಷ್ಟೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್9 ಅಮ್ಚ್ಯಾ ಭಾವಾನು ಅನಿ ಭೆನಿಯಾನು, ಅಮಿ ತುಮ್ಚ್ಯಾ ಮದ್ದಿ ಕಶೆ ಕಾಯ್-ಕಾಯ್ ಕರ್ಲಾಂವ್ ಅನಿ ಕವ್ಡೆ ರಾಬ್ಲಾಂವ್ ಮನ್ತಲೆ ತುಮ್ಕಾಚ್ ಗೊತ್ತ್ ಹಾಯ್. ದೆವಾಕ್ನಾ ಯೆಲ್ಲಿ ಬರಿ ಖಬರ್ ಅಮಿ ತುಮ್ಕಾ ದಿಲ್ಲ್ಯಾ ಬಾಸೆನ್, ತುಮ್ಕಾ ಅಮ್ಚ್ಯಾ ವೈನಾ ಕಾಯ್ಬಿ ಸಮಸ್ಯೆ ಹೊವ್ಚೆ ನ್ಹಯ್ ಮನ್ತಲ್ಯಾ ಸಾಟ್ನಿ ಅಮಿ ರಾತ್-ದಿಸ್ ಬರಿ ಖಬರ್ ಸಾಂಗಟ್ಲಾವ್. ಅಧ್ಯಾಯವನ್ನು ನೋಡಿ |