1 ತಿಮೊಥೆಯನಿಗೆ 1:4 - ಕನ್ನಡ ಸತ್ಯವೇದವು J.V. (BSI)4 ಕಲ್ಪನಾಕಥೆಗಳಿಗೂ ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯಕೊಡಬಾರದೆಂತಲೂ ಆಜ್ಞಾಪಿಸಬೇಕೆಂಬದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ದೇವರು ನಿರ್ವಹಿಸುವ ಕೆಲಸಕ್ಕೆ ಅನುಕೂಲವಾಗಿಲ್ಲ; ಇದರಲ್ಲಿ ನಂಬಿಕೆಯೇ ಮುಖ್ಯವಾದದ್ದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಕಲ್ಪಿತಕಥೆಗಳಿಗೂ, ಕೊನೆಮೊದಲಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ, ಆಜ್ಞಾಪಿಸಬೇಕೆಂಬುದಾಗಿ ನಿನಗೆ ಖಂಡಿತವಾಗಿ ಹೇಳಿದ ಪ್ರಕಾರ ಈಗಲೂ ಹೇಳುತ್ತಿದೇನೆ. ಅಂತಹ ಕಥೆಗಳೂ, ವಂಶಾವಳಿಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತದೆಯೇ ಹೊರತು ದೇವರ ಯೋಜನೆಗಳಿಗೆ ಅನುಕೂಲವಾಗಿರುವುದಿಲ್ಲ. ನಂಬಿಕೆಯಿಂದ ಮಾತ್ರ ಅದು ಸಾಧ್ಯವಾಗುತ್ತದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಕಟ್ಟುಕತೆಗಳಲ್ಲೂ ಕೊನೆಮೊದಲಿಲ್ಲದ ವಂಶಾವಳಿಗಳ ನಿರೂಪಣೆಗಳಲ್ಲೂ ಕಾಲಹರಣ ಮಾಡಬಾರದೆಂದು ಅವರಿಗೆ ಆಜ್ಞಾಪಿಸಬೇಕು. ಅಂಥ ಕತೆಗಳು, ವಂಶಾವಳಿಗಳು ಅನಗತ್ಯವಾದ ವಾದವಿವಾದಗಳಿಗೆ ಎಡೆಮಾಡುತ್ತವೆಯೇ ಹೊರತು ದೇವರ ಯೋಜನೆ ಕೈಗೂಡಲು ಅವು ಅನುಕೂಲವಾಗಿಲ್ಲ; ವಿಶ್ವಾಸದಿಂದ ಮಾತ್ರ ಅದು ಸಾಧ್ಯ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಕಲ್ಪನಾಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಗಮನಕೊಡಬಾರದೆಂದು ಅವರಿಗೆ ಆಜ್ಞಾಪಿಸು. ಆ ಸಂಗತಿಗಳು ವಾದವಿವಾದಗಳನ್ನು ಮಾತ್ರ ತರುತ್ತವೆ. ಅವುಗಳಿಂದ ದೇವರ ಕಾರ್ಯಕ್ಕೆ ಪ್ರಯೋಜನವೇನೂ ಇಲ್ಲ. ದೇವರ ಕಾರ್ಯವನ್ನು ನಂಬಿಕೆಯಿಂದ ಮಾಡಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಕಟ್ಟುಕಥೆಗಳಿಗೂ ಕೊನೆಯಿಲ್ಲದ ವಂಶಾವಳಿಗಳಿಗೂ ಲಕ್ಷ್ಯ ಕೊಡಬಾರದೆಂತಲೂ ಕೆಲವರಿಗೆ ಆಜ್ಞಾಪಿಸಬೇಕೆಂದು ನಾನು ನಿನಗೆ ಖಂಡಿತವಾಗಿ ಹೇಳಿದಂತೆ ಈಗಲೂ ಹೇಳುತ್ತೇನೆ. ಅಂಥ ಕಥೆಗಳೂ ವಂಶಾವಳಿಗಳೂ ವಿವಾದಕ್ಕೆ ಆಸ್ಪದವಾಗಿವೆಯೇ ಹೊರತು ನಂಬಿಕೆಯಿಂದುಂಟಾಗುವ ದೇವರ ಕಾರ್ಯಭಾರವನ್ನು ವೃದ್ಧಿ ಮಾಡುವುದೇ ಇಲ್ಲ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್4 ಚಿಂತುನ್ ಘೆತಲಿ ಅನಿ ತುಮ್ಚ್ಯಾ ಪುರ್ವಜಾಂಚಿ ನಾವಾ ಹೊತ್ತಿ ಪಟ್ಟಿ ಹೆ ಸಗ್ಳೆ ಪಾಯ್ದ್ಯಾಕ್ ಪಡಿ ನಸಲ್ಲೊ ವಾದ್-ವಿವಾದ್ ಉಟಿ ಸಾರ್ಕೆ ಕರ್‍ತಾ. ತೆನಿ ವಿಶ್ವಾಸಾ ವರ್‍ತಿ ಠೆಕುನ್ ಹೊತ್ತ್ಯಾ ದೆವಾಚ್ಯಾ ಯವ್ಜನಿ ಸರ್ಕೆ ಕರಿನಾ ಹೊಲ್ಯಾತ್.ಮನುನ್ ತೆಂಕಾ ಸಾಂಗ್. ಅಧ್ಯಾಯವನ್ನು ನೋಡಿ |
ದೇವರ ದಾಸನೂ ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು ನಮ್ಮೆಲ್ಲರಿಗೆ ಹುದುವಾಗಿರುವ ನಂಬಿಕೆಯ ಸಂಬಂಧದಲ್ಲಿ ನನ್ನ ನಿಜಕುಮಾರನಾದ ತೀತನಿಗೆ ಬರೆಯುವದೇನಂದರೆ - ತಂದೆಯಾದ ದೇವರಿಂದಲೂ ನಮ್ಮ ರಕ್ಷಕನಾದ ಕ್ರಿಸ್ತ ಯೇಸುವಿನಿಂದಲೂ ನಿನಗೆ ಕೃಪೆಯೂ ಶಾಂತಿಯೂ ಆಗಲಿ. ದೇವರಾದುಕೊಂಡವರ ನಂಬಿಕೆಯೂ ಭಕ್ತಿಯನ್ನುಂಟುಮಾಡುವ ಸತ್ಯದ ಪರಿಜ್ಞಾನವೂ ವೃದ್ಧಿಯಾಗುವದಕ್ಕೋಸ್ಕರವೇ ಅಪೊಸ್ತಲನಾಗಿದ್ದೇನೆ. ಆ ನಂಬಿಕೆಗೂ ಸತ್ಯದ ಪರಿಜ್ಞಾನಕ್ಕೂ ನಿತ್ಯಜೀವದ ನಿರೀಕ್ಷೆಯೇ ಆಧಾರವಾಗಿದೆ. ಸುಳ್ಳಾಡದ ದೇವರು ಆ ನಿತ್ಯಜೀವವನ್ನು ಕೊಡುತ್ತೇನೆಂದು ಅನಾದಿಕಾಲದಲ್ಲಿ ವಾಗ್ದಾನಮಾಡಿ ತನ್ನ ಕ್ಲುಪ್ತ ಸಮಯದಲ್ಲಿ ವಾಗ್ದಾನ ನೆರವೇರಿಸಿ ಪ್ರಸಂಗದ ಮೂಲಕ ಪ್ರಕಟಿಸಿದನು. ಆ ಪ್ರಸಂಗೋದ್ಯೋಗವು ನಮ್ಮ ರಕ್ಷಕನಾದ ದೇವರ ಅಪ್ಪಣೆಯ ಪ್ರಕಾರ ನನಗೆ ಒಪ್ಪಿಸಲ್ಪಟ್ಟದೆ.