1 ಕೊರಿಂಥದವರಿಗೆ 9:25 - ಕನ್ನಡ ಸತ್ಯವೇದವು J.V. (BSI)25 ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ವಿುತವಾಗಿರುತ್ತಾರೆ. ಅವರು ಬಾಡಿಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201925 ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)25 ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್25 ಪಂದ್ಯಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳು ಪದಕಗಳಿಸಲು ಕಟ್ಟುನಿಟ್ಟಾದ ತರಬೇತಿಯಲ್ಲಿರುತ್ತಾರೆ. ಆದರೆ ಈ ಲೋಕದ ಆ ಪದಕವು ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ನಮ್ಮ ಪದಕವು ಶಾಶ್ವತವಾದದ್ದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ25 ಆಟಗಳಲ್ಲಿ ಪಂದ್ಯಕ್ಕೆ ಭಾಗವಹಿಸುವವರೆಲ್ಲರೂ, ಕಠಿಣವಾದ ತರಬೇತಿಯನ್ನು ಹೊಂದುತ್ತಾರೆ. ಅವರು ಬಹುದಿನ ಉಳಿಯದೇ ಇರುವ ಕಿರೀಟವನ್ನು ಪಡೆಯುವುದಕ್ಕೆ ಇದನ್ನು ಮಾಡುತ್ತಾರೆ. ಆದರೆ ನಾವು ಎಂದೆಂದಿಗೂ ಉಳಿಯುವ ಕಿರೀಟ ಹೊಂದಲು ಹೋರಾಡುವವರಾಗಿದ್ದೇವೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್25 ಖೆಳಾತ್ ಭಾಗ್ ಘೆತಲೊ ಹರ್ ಎಕ್ಲೊ ಖೆಳ್ಗಾಡಿ ಸಗ್ಳ್ಯಾ ವಿಶಯಾತ್ ಮಿತ್ ಸಂಬಾಳ್ತಾ. ಸರುನ್ ಜಾತಲೆ ಎಕ್ ಭೊಮಾನ್ ಕಮ್ವುಸಾಟಿ ತೊ ಎವ್ಡೊ ತರಾಸ್ ಘೆತಾ; ಖರೆ ಅಮಿ ಕನ್ನಾಚ್ ಸರಿ ನಸಲ್ಲೆ ಭೊಮಾನ್ ಘೆವ್ಕ್ ಸಾಟ್ನಿ ಅಶೆ ಕರ್ತಾಂವ್. ಅಧ್ಯಾಯವನ್ನು ನೋಡಿ |