Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 9:2 - ಕನ್ನಡ ಸತ್ಯವೇದವು J.V. (BSI)

2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೂ ಅಪೊಸ್ತಲನಾಗಿದ್ದೇನೆ. ನಾನು ಅಪೊಸ್ತಲನಾಗಿದ್ದೇನೆಂಬದಕ್ಕೆ ಕರ್ತನಿಗೆ ಸೇರಿದವರಾದ ನೀವೇ ಪ್ರಮಾಣವಾಗಿದ್ದೀರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಇತರರಿಗೆ ನಾನು ಪ್ರೇಷಿತನಲ್ಲದಿದ್ದರೂ ನಿಮಗಂತೂ ನಾನು ಪ್ರೇಷಿತನೇ. ನಾನು ಪ್ರೇಷಿತನು ಎಂಬುದಕ್ಕೆ ಪ್ರಭುವಿಗೆ ಸೇರಿದವರಾದ ನೀವೇ ಜೀವಂತ ಸಾಕ್ಷಿಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಇತರ ಜನರು ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳದಿರಬಹುದು. ಆದರೆ ನೀವಂತೂ ಖಂಡಿತವಾಗಿ ನನ್ನನ್ನು ಅಪೊಸ್ತಲನನ್ನಾಗಿ ಸ್ವೀಕರಿಸಿಕೊಳ್ಳುವಿರಿ. ನಾನು ಪ್ರಭುವಿನಲ್ಲಿ ಅಪೊಸ್ತಲನಾಗಿದ್ದೇನೆ ಎಂಬುದಕ್ಕೆ ನೀವೇ ಆಧಾರವಾಗಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗೆ ನಾನು ಅಪೊಸ್ತಲನಾಗಿದ್ದೇನೆ! ನನ್ನ ಅಪೊಸ್ತಲ ಸೇವೆಯ ಮುದ್ರೆಯು ಕರ್ತ ದೇವರಲ್ಲಿ ನೀವೇ ಆಗಿದ್ದೀರಷ್ಟೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

2 ದುಸ್ರ್ಯಾಕ್ನಿ ಮಿಯಾ ಅಪೊಸ್ತಲ್ ನ್ಹಯ್, ಜಾಲ್ಯಾರ್‌ಬಿ ತುಮ್ಕಾ ತರ್‌ಬಿ ಮಿಯಾ ಎಕ್ ಅಪೊಸ್ತಲ್, ಕಶ್ಯಾಕ್ ಮಟ್ಲ್ಯಾರ್ ಧನಿಯಾಕ್ ಮಾಜ್ಯಾ ಅಪೊಸ್ತಲ್ ಪಾನಾಚೊ ಛಪ್ಪೊ ತುಮಿಚ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 9:2
6 ತಿಳಿವುಗಳ ಹೋಲಿಕೆ  

ನಾನು ಹಿಂಸೆಯನ್ನು ಸ್ಥಿರಚಿತ್ತದಿಂದ ತಾಳಿಕೊಳ್ಳುವದರಲ್ಲಿಯೂ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ ನಡಿಸಿದ್ದರಲ್ಲಿಯೂ ಅಪೊಸ್ತಲನಿಗೆ ಇರತಕ್ಕ ಲಕ್ಷಣಗಳು ನಿಮ್ಮ ಮಧ್ಯದಲ್ಲಿ ತೋರಿದವು.


ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ; ಇಂಥ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ಇದಕ್ಕಾಗಿ ತಂದೆಯಾದ ದೇವರು ಆತನನ್ನು ನೇವಿುಸಿ ಮುದ್ರೆಹಾಕಿದ್ದಾನೆ ಅಂದನು.


ಆತನ ಸಾಕ್ಷಿಯನ್ನು ಒಪ್ಪಿದವನು ದೇವರು ಸತ್ಯವಂತನೆಂಬ ಮಾತಿಗೆ ಮುದ್ರೆ ಹಾಕಿದವನಾಗಿದ್ದಾನೆ.


ನನ್ನನ್ನು ವಿಚಾರಿಸುವವರಿಗೆ ಇದೇ ನನ್ನ ಉತ್ತರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು