Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಕೊರಿಂಥದವರಿಗೆ 16:7 - ಕನ್ನಡ ಸತ್ಯವೇದವು J.V. (BSI)

7 ಈ ಸಮಯದಲ್ಲಿ ಹೋಗುಹೋಗುತ್ತಾ ನಿಮ್ಮನ್ನು ನೋಡುವದಕ್ಕೆ ನನಗೆ ಇಷ್ಟವಿಲ್ಲ; ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಾನು ಹಾದುಹೋಗುವ ಈ ಸ್ವಲ್ಪ ಸಮಯದಲ್ಲಿ ನಿಮ್ಮನ್ನು ನೋಡಲು ಬಯಸುವುದಿಲ್ಲ. ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ತಂಗಲು ಬಯಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಪ್ರಯಾಣದ ನಡುವೆ ನಿಮ್ಮನ್ನು ನೋಡಿ ಹೋಗಲು ನನಗೆ ಇಷ್ಟವಿಲ್ಲ. ಪ್ರಭುವಿನ ಚಿತ್ತವಾದರೆ, ಕೊಂಚಕಾಲವಾದರೂ ನಿಮ್ಮೊಡನೆ ಕಾಲಕಳೆಯಬೇಕೆಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಈಗ ನಿಮ್ಮ ಬಳಿಗೆ ಬರಲು ನನಗೆ ಇಷ್ಟವಿಲ್ಲ. ಏಕೆಂದರೆ ನಾನು ಬೇರೆ ಸ್ಥಳಗಳಿಗೆ ಹೋಗಬೇಕಾಗಿರುವುದರಿಂದ ನಿಮ್ಮೊಂದಿಗೆ ಬಹಳ ಕಾಲವಿರಲು ಸಾಧ್ಯವಿಲ್ಲ. ಪ್ರಭುವು ಅವಕಾಶಕೊಡುವುದಾದರೆ, ನಾನು ನಿಮ್ಮೊಂದಿಗೆ ದೀರ್ಘಕಾಲ ತಂಗುವ ನಿರೀಕ್ಷೆಯಿಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನಾನು ಹಾದುಹೋಗುವಾಗ, ನಿಮ್ಮನ್ನು ಸ್ವಲ್ಪ ಸಮಯ ಮಾತ್ರ ಸಂದರ್ಶಿಸುವುದಕ್ಕೆ ನನಗೆ ಇಷ್ಟವಿಲ್ಲ. ಕರ್ತನು ಅನುಮತಿಸಿದರೆ, ನಿಮ್ಮ ಬಳಿಯಲ್ಲಿ ಬಂದು ಹೆಚ್ಚುಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಅತ್ತಾ ಮಿಯಾ ವಾಟೆರ್ ಜಾವ್ನಗೆತ್ ಹಾಂವ್ ಮನ್ತಾನಾ ತುಮ್ಕಾ ಭೆಟುಕ್ ಮಾಕಾ ಮನ್ ನಾ. ಧನಿಯಾಚಿ ಕುಶಿ ರ್‍ಹಾಲ್ಯಾರ್ ಎಕ್ ಉಲ್ಲೊ ಎಳ್ ತುಮ್ಚ್ಯಾ ವಾಂಗ್ಡಾ ರ್‍ಹಾವ್ಚೆ ಮನ್ತಲಿ ಮಾಜಿ ಆಶಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಕೊರಿಂಥದವರಿಗೆ 16:7
8 ತಿಳಿವುಗಳ ಹೋಲಿಕೆ  

ದೇವರ ಚಿತ್ತವಾದರೆ ತಿರಿಗಿ ನಿಮ್ಮ ಬಳಿಗೆ ಬರುತ್ತೇನೆಂದು ಹೇಳಿ ಅವರ ಅಪ್ಪಣೆ ತೆಗೆದುಕೊಂಡು ಹೋದನು. ಆಮೇಲೆ ಎಫೆಸದಿಂದ ಸಮುದ್ರಪ್ರಯಾಣ ಮಾಡಿ


ಆದದರಿಂದ ನೀವು ಅಂಥ ಮಾತನ್ನು ಬಿಟ್ಟು ದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ ಆ ಕೆಲಸವನ್ನಾಗಲಿ ಮಾಡುವೆವು ಎಂದು ಹೇಳಬೇಕು.


ಆದರೆ ಕರ್ತನ ಚಿತ್ತವಿದ್ದರೆ ನಾನು ಬೇಗ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನಲ್ಲ ಅವರ ಶಕ್ತಿಯನ್ನೇ ಗೊತ್ತುಮಾಡಿಕೊಳ್ಳುವೆನು.


ನಾನು ಇಂಥ ಭರವಸವುಳ್ಳವನಾಗಿದ್ದು ನಿಮಗೆ ಎರಡು ಸಾರಿ ನಮ್ಮ ಮೂಲಕ ಕೃಪಾವರ ಉಂಟಾಗಬೇಕೆಂದು ಯೋಚಿಸಿದ್ದೆನು.


ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.


ಮನುಷ್ಯನ ಮನಸ್ಸಿನಲ್ಲಿ ಅನೇಕ ಸಂಕಲ್ಪಗಳಿವೆ; ಯೆಹೋವನ ಸಂಕಲ್ಪವೇ ಈಡೇರುವದು.


ಆದರೆ ಯೇಸು ಅವನಿಗೆ - ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು