ನಾನು ನಿಮ್ಮ ದೇವರಾಗಿದ್ದು ಹಾಲೂ ಜೇನೂ ಹರಿಯುವ ದೇಶವನ್ನು ಕೊಡುವದಾಗಿ ನಿಮ್ಮ ಮೂಲಪಿತೃಗಳಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು ಎಂದು ಹೇಳಿದೆನಷ್ಟೆ; ಆ ನನ್ನ ಮಾತು ಈಗ ಕೈಗೂಡಿದೆ. ನಾನು ಅವರಿಗೆ ವಿಧಿಸಿದ ನಿಬಂಧನವಾಕ್ಯಗಳಿಗೆ ಕಿವಿಗೊಡದವನು ಶಾಪಗ್ರಸ್ತನಾಗಲಿ ಎಂಬದಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ನುಡಿಯುತ್ತಾನೆಂದೇ ಸಾರಬೇಕು. ಆಗ ನಾನು - ಅಪ್ಪಣೆಯಂತಾಗಲಿ, ಯೆಹೋವನೇ, ಎಂದು ಉತ್ತರಕೊಟ್ಟೆನು.