Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 7:29 - ಕನ್ನಡ ಸತ್ಯವೇದವು J.V. (BSI)

29 ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ, ಕೆರೂಬಿ ಇವುಗಳ ಚಿತ್ರಗಳಿದ್ದವು; ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು; ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ ಮತ್ತು ಕೆರೂಬಿ ಇವುಗಳ ಚಿತ್ರಗಳಿದ್ದವು. ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು. ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣ ಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ, ಕೆರೂಬಿ, ಇವುಗಳ ಚಿತ್ರಗಳಿದ್ದವು; ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು; ಸಿಂಹ, ಹೋರಿ, ಇವುಗಳ ಮೇಲೂ ಕೆಳಗೂ ತೋರಣಚಿತ್ರಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಅಂಕಣದ ಮತ್ತು ಚೌಕಟ್ಟಿನ ಮೇಲೆ ಹಿತ್ತಾಳೆಯ ಸಿಂಹಗಳು, ಹೋರಿಗಳು ಮತ್ತು ಕೆರೂಬಿಗಳಿದ್ದವು. ಸಿಂಹಗಳ, ಹೋರಿಗಳ ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೂವಿನಾಕಾರದಲ್ಲಿ ಹಿತ್ತಾಳೆಯ ಮೇಲೆ ಕೆತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 7:29
15 ತಿಳಿವುಗಳ ಹೋಲಿಕೆ  

ಅಳಬೇಡ; ಅಗೋ, ಯೂದಾ ಕುಲದಲ್ಲಿ ಜನಿಸಿದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಜಯಹೊಂದಿದನು; ಆತನು ಆ ಸುರುಳಿಯನ್ನೂ ಅದರ ಏಳು ಮುದ್ರೆಗಳನ್ನೂ ಬಿಚ್ಚುವನು ಎಂದು ಹೇಳಿದನು.


ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗದವರಾಗಿದ್ದೀರಿ.


ಅದರ ಮೇಲೆ ದೇವರ ಪ್ರಭಾವವನ್ನು ಸೂಚಿಸುವ ಕೆರೂಬಿಗಳು ಕೃಪಾಸನವನ್ನು ಆಚ್ಫಾದಿಸಿಕೊಂಡಿದ್ದವು. ಸದ್ಯಕ್ಕೆ ಈ ವಿಷಯಗಳನ್ನು ಒಂದೊಂದಾಗಿ ವಿವರಿಸುವದಕ್ಕೆ ಆಗುವದಿಲ್ಲ.


ನಾನು ಎಫ್ರಾಯೀವಿುಗೆ ಸಿಂಹವೂ ಯೆಹೂದಕುಲಕ್ಕೆ ಪ್ರಾಯದ ಸಿಂಹವೂ ಆಗುವೆನು; ನಾನೇ ಸೀಳಿಬಿಟ್ಟು ಹೋಗುವೆನು, ಎತ್ತಿಕೊಂಡು ಒಯ್ಯಲು ಯಾರೂ ಬಿಡಿಸರು.


ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೇದು ಕೆರೂಬಿಯದು, ಎರಡನೇದು ಮನುಷ್ಯನದು, ಮೂರನೇದು ಸಿಂಹನದು, ನಾಲ್ಕನೇದು ಗರುಡಪಕ್ಷಿಯದು.


ಮುಖಗಳು ಎಂಥವುಗಳಂದರೆ ಒಂದೊಂದರ [ಮುಂದಿನ] ಮುಖವು ಮನುಷ್ಯನದು, ಬಲಗಡೆಯ ಮುಖವು ಸಿಂಹನದು, ಎಡಗಡೆಯ ಮುಖವು ಹೋರಿಯದು, [ಹಿಂದಿನ] ಮುಖವು ಗರುಡಪಕ್ಷಿಯದು.


ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರದಿಕ್ಕಿಗೂ ಮೂರು ಪಶ್ಚಿಮದಿಕ್ಕಿಗೂ ಮೂರು ದಕ್ಷಿಣದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು; ಅವುಗಳ ಹಿಂಭಾಗವು ಒಳಗಡೆ ಇತ್ತು.


ಅವನು ಅವುಗಳನ್ನು ದೇವಾಲಯದ ಗರ್ಭಗೃಹದಲ್ಲಿಡಿಸಿದನು. ಅವುಗಳ ರೆಕ್ಕೆಗಳು ಚಾಚಿದವುಗಳಾಗಿದ್ದದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಈಚೆಯ ಗೋಡೆಗೂ ಎರಡನೆಯ ಕೆರೂಬಿಯ ಒಂದು ರೆಕ್ಕೆಯು ಆಚೆಯ ಗೋಡೆಗೂ ತಗುಲಿದ್ದವು; ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿದ್ದವು.


ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿದನು.


ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿಕೆಲಸದಿಂದ ಮಾಡಿಸಬೇಕು.


ಅದಲ್ಲದೆ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಆತನು ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.


ಅವುಗಳನ್ನು ಮಾಡಿದ ವಿಧಾನವು ಹೇಗಂದರೆ - ಅವುಗಳಲ್ಲಿ ನಿಲುವುಪಟ್ಟಿಗಳಿಂದ ಕೂಡಿದ ಅಡ್ಡಪಟ್ಟಿಗಳಿದ್ದವು.


ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕಹೊಯ್ದ ತಾಮ್ರದ ಹಿಡಿಗಳಿದ್ದವು; ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣಚಿತ್ರಗಳಿದ್ದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು