4 ಯೆಹೋಷಾಫಾಟನನ್ನು - ಯುದ್ಧಮಾಡುವದಕ್ಕಾಗಿ ನೀನೂ ನಮ್ಮ ಜೊತೆಯಲ್ಲಿ ರಾಮೋತ್‍ಗಿಲ್ಯಾದಿಗೆ ಬರುತ್ತೀಯೋ ಎಂದು ಕೇಳಲು ಅವನು - ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇಯಲ್ಲವೋ ಎಂದು ಉತ್ತರಕೊಟ್ಟು
4 ಅವನು ಯೆಹೋಷಾಫಾಟನಿಗೆ, “ಯುದ್ಧಮಾಡುವುದಕ್ಕಾಗಿ ನೀನು ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ?” ಎಂದು ಕೇಳಲು ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
4 ಯೆಹೋಷಾಫಾಟನನ್ನು, “ಯುದ್ಧಮಾಡುವುದಕ್ಕೆ ನೀನೂ ನಮ್ಮ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತಿಯೋ?’ ಎಂದು ಕೇಳಿದನು. ಅವನು, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದು ಉತ್ತರಕೊಟ್ಟನು.
4 ಆದ್ದರಿಂದ ಅಹಾಬನು ರಾಜನಾದ ಯೆಹೋಷಾಫಾಟನನ್ನು, “ಅರಾಮ್ಯರ ವಿರುದ್ಧವಾಗಿ ರಾಮೋತಿನಲ್ಲಿ ಹೋರಾಟ ಮಾಡುವುದಕ್ಕೆ ನೀನು ನಮ್ಮೊಂದಿಗೆ ಸೇರಿಕೊಳ್ಳುವೆಯಾ?” ಎಂದು ಕೇಳಿದನು. ಯೆಹೋಷಾಫಾಟನು, “ಆಗಲಿ, ನಾನು ನಿನ್ನ ಜೊತೆ ಸೇರಿಕೊಳ್ಳುತ್ತೇನೆ. ನನ್ನ ಸೈನ್ಯಗಳು ಮತ್ತು ನನ್ನ ಕುದುರೆಗಳು ನಿನ್ನ ಸೈನ್ಯದ ಜೊತೆ ಸೇರಲು ಸಿದ್ಧವಾಗಿವೆ.
4 ಆಗ ಅವನು ಯೆಹೋಷಾಫಾಟನಿಗೆ, “ನೀನು ಗಿಲ್ಯಾದಿನ ರಾಮೋತಿನ ಮೇಲೆ ಯುದ್ಧಮಾಡಲು ನನ್ನ ಸಂಗಡ ಬರುತ್ತೀಯಾ?” ಎಂದನು. ಯೆಹೋಷಾಫಾಟನು ಇಸ್ರಾಯೇಲಿನ ಅರಸನಿಗೆ, “ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ಲವೇ?” ಎಂದನು.
ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರವಾಗಿ - ಮೋವಾಬ್ಯರ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದಿದ್ದಾನೆ; ಮೋವಾಬ್ಯರೊಡನೆ ಯುದ್ಧಮಾಡುವದಕ್ಕೆ ನೀನು ನನ್ನ ಜೊತೆಯಲ್ಲಿ ಬರುತ್ತೀಯೋ ಎಂದು ಹೇಳಿಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು - ಬರುತ್ತೇನೆ; ನಾನೂ ನೀನೂ, ನನ್ನ ಜನರೂ ನಿನ್ನ ಜನರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇಯಲ್ಲವೋ ಎಂದು ಉತ್ತರಕೊಟ್ಟು
ಯಾವನು ಜಯಶಾಲಿಯಾಗಿದ್ದು ನನಗೆ ಮೆಚ್ಚಿಕೆಯಾದ ಕೃತ್ಯಗಳನ್ನು ಕಡೇವರೆಗೂ ನಡಿಸುತ್ತಾನೋ ಅವನಿಗೆ ನಾನು ನನ್ನ ತಂದೆಯಿಂದ ಹೊಂದಿದ ಅಧಿಕಾರದಂತೆ ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು.
ಅವನು ಯೆರೂಸಲೇವಿುಗೆ ಬರಲು ಹನಾನೀಯನ ಮಗನಾದ ಯೇಹೂ ಎಂಬ ದರ್ಶಿಯು ಅವನನ್ನು ಎದುರುಗೊಂಡು ಅವನಿಗೆ - ನೀನು ಕೆಟ್ಟವನಿಗೆ ಸಹಾಯಮಾಡತಕ್ಕದ್ದೋ? ಯೆಹೋವನ ಹಗೆಗಾರರನ್ನು ಪ್ರೀತಿಸುವದೋ! ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.
ಇಸ್ರಾಯೇಲ್ಯರ ಅರಸನಾದ ಅಹಾಬನು ಯೆಹೂದ್ಯರ ಅರಸನಾದ ಯೆಹೋಷಾಫಾಟನನ್ನು - ನನ್ನ ಜೊತೆಯಲ್ಲಿ ರಾಮೋತ್ ಗಿಲ್ಯಾದಿಗೆ ಬರುತ್ತೀಯೋ ಎಂದು ಕೇಳಲು ಅವನು - ನಾನೂ ನೀನೂ ನನ್ನ ಜನರೂ ನಿನ್ನ ಜನರೂ ಒಂದೇಯಲ್ಲವೋ. ನಿನ್ನ ಜೊತೆಯಲ್ಲಿ ಯುದ್ಧಕ್ಕೆ ಬರುವೆನು ಎಂದು ಉತ್ತರಕೊಟ್ಟು