Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:3 - ಕನ್ನಡ ಸತ್ಯವೇದವು J.V. (BSI)

3 ನಿನ್ನ ಬೆಳ್ಳಿಬಂಗಾರವು ನನ್ನದು; ನಿನ್ನ ಪ್ರಿಯ ಸತಿಸುತರೂ ನನ್ನವರೇ ಎಂದು ತಿಳಿದುಕೋ ಎಂಬದಾಗಿ ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 “ನಿನ್ನ ಬೆಳ್ಳಿಬಂಗಾರ ನನ್ನದು. ನಿನ್ನ ಪ್ರಿಯ ಹೆಂಡತಿ ಮಕ್ಕಳು ನನ್ನವರೇ ಎಂದು ತಿಳಿದುಕೋ” ಎಂಬುದಾಗಿ ತಿಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 “ನಿನ್ನ ಬೆಳ್ಳಿಬಂಗಾರವು ನನ್ನದು; ನಿನ್ನ ಪ್ರಿಯ ಸತಿಸುತರರೂ ನನ್ನವರೇ ಎಂದು ತಿಳಿದುಕೋ,” ಎಂಬುದಾಗಿ ಆ ದೂತರಿಂದ ಹೇಳಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಅವನ ಸಂದೇಶವು ಹೀಗಿತ್ತು: “ಬೆನ್ಹದದನು ಹೀಗೆನ್ನುವನು, ‘ನೀವು ನನಗೆ ನಿಮ್ಮಲ್ಲಿರುವ ಬೆಳ್ಳಿಬಂಗಾರಗಳನ್ನು ಒಪ್ಪಿಸಬೇಕು. ನಿಮ್ಮ ಪತ್ನಿಯರನ್ನು ಮತ್ತು ಮಕ್ಕಳನ್ನು ನನಗೆ ಒಪ್ಪಿಸಲೇಬೇಕು.’”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ‘ನಿನ್ನ ಬೆಳ್ಳಿಯೂ, ನಿನ್ನ ಬಂಗಾರವೂ ನನ್ನವು. ನಿನ್ನ ಪತ್ನಿಯರೂ, ನಿನ್ನ ಮಕ್ಕಳೆಲ್ಲರೂ ನನ್ನವರು,’ ” ಎಂಬುದಾಗಿ ಅವನಿಗೆ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:3
5 ತಿಳಿವುಗಳ ಹೋಲಿಕೆ  

ನಾವು ಇವರನ್ನು ಹಿಂದಟ್ಟಿ ಹಿಡಿಯುವೆವು, ಅವರ ಸೊತ್ತನ್ನು ಅಪಹರಿಸಿ ಹಂಚಿಕೊಳ್ಳುವೆವು, ಅವರಲ್ಲಿ ನಮ್ಮ ಕೋರಿಕೆಯನ್ನು ತೀರಿಸಿಕೊಳ್ಳುವೆವು, ನಾವು ಕತ್ತಿಯನ್ನು ಹಿರಿದು ಭುಜಬಲದಿಂದ ಅವರನ್ನು ಸಂಹಾರ ಮಾಡುವೆವು ಎಂಬದಾಗಿ ನಮ್ಮ ಶತ್ರುಗಳು ಮಾತಾಡಿಕೊಳ್ಳುತ್ತಿದ್ದರು.


ಅವನು ಆ ಪಟ್ಟಣದಲ್ಲಿದ್ದ ಇಸ್ರಾಯೇಲ್ಯರ ಅರಸನಾದ ಅಹಾಬನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ -


ಅದಕ್ಕೆ ಇಸ್ರಾಯೇಲ್ಯರ ಅರಸನು - ನನ್ನ ಒಡೆಯನಾದ ಅರಸನೇ, ನೀನು ಹೇಳಿದಂತೆ ನಾನು ನಿನ್ನವನೇ; ನನಗಿರುವದೆಲ್ಲವೂ ನಿನ್ನದೇ ಎಂದು ಉತ್ತರಕೊಟ್ಟು ಕಳುಹಿಸಿದನು.


ಅವರು ಸೊಂಟಕ್ಕೆ ಗೋಣೀತಟ್ಟು ಕಟ್ಟಿಕೊಂಡು ತಲೆಯ ಮೇಲೆ ಹಗ್ಗವನ್ನಿಟ್ಟುಕೊಂಡು ಇಸ್ರಾಯೇಲ್ಯರ ಅರಸನ ಬಳಿಗೆ ಬಂದು ಅವನಿಗೆ - ನನಗೆ ಜೀವದಾನಮಾಡಬೇಕೆಂದು ನಿನ್ನ ಸೇವಕನಾದ ಬೆನ್ಹದದನು ವಿಜ್ಞಾಪಿಸುತ್ತಾನೆ ಅಂದರು. ಆಗ ಅವನು - ಬೆನ್ಹದದನು ಇನ್ನೂ ಜೀವದಿಂದಿರುತ್ತಾನೋ? ಅವನು ನನ್ನ ಸಹೋದರನು ಎಂದು ಉತ್ತರಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು