Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:29 - ಕನ್ನಡ ಸತ್ಯವೇದವು J.V. (BSI)

29 ಈ ಎರಡು ಸೈನ್ಯಗಳೂ ಏಳು ದಿನಗಳವರೆಗೆ ಎದುರುಬದುರಾಗಿ ಪಾಳೆಯಮಾಡಿಕೊಂಡಿದ್ದವು. ಏಳನೆಯ ದಿನದಲ್ಲಿ ಯುದ್ಧ ಪ್ರಾರಂಭವಾಗಲು ಇಸ್ರಾಯೇಲ್ಯರು ಆ ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಕಾಲಾಳುಗಳನ್ನು ವಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಈ ಎರಡು ಸೈನ್ಯಗಳು ಏಳು ದಿನಗಳ ವರೆಗೆ ಎದುರುಬದುರಾಗಿ ಪಾಳೆಯ ಮಾಡಿಕೊಂಡಿದ್ದವು. ಏಳನೆಯ ದಿನದಲ್ಲಿ ಯುದ್ಧ ಪ್ರಾರಂಭವಾಗಲು ಇಸ್ರಾಯೇಲರು ಆ ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಕಾಲಾಳುಗಳನ್ನು ವಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 ಈ ಎರಡು ಸೈನ್ಯಗಳೂ ಏಳುದಿನಗಳವರೆಗೆ ಎದುರುಬದುರಾಗಿ ಪಾಳೆಯಮಾಡಿಕೊಂಡಿದ್ದವು; ಏಳನೆಯ ದಿನದಲ್ಲಿ ಯುದ್ಧಪ್ರಾರಂಭವಾಯಿತು. ಇಸ್ರಯೇಲರು ಆ ಒಂದೇ ದಿನದಲ್ಲಿ ಸಿರಿಯಾದವರ ಒಂದು ಲಕ್ಷಮಂದಿ ಕಾಲಾಳುಗಳನ್ನು ವಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಈ ಎರಡು ಸೈನ್ಯಗಳೂ ಎದುರುಬದುರಾಗಿ ಏಳು ದಿನಗಳ ಕಾಲ ಪಾಳೆಯವನ್ನು ಹೂಡಿದವು. ಏಳನೆಯ ದಿನ ಯುದ್ಧವು ಆರಂಭವಾಯಿತು. ಇಸ್ರೇಲರು ಒಂದೇ ದಿನದಲ್ಲಿ ಅರಾಮ್ಯರ ಒಂದು ಲಕ್ಷ ಮಂದಿ ಸೈನಿಕರನ್ನು ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಏಳು ದಿವಸ ಎರಡು ಸೈನ್ಯಗಳೂ ಎದುರುಬದುರಾಗಿ ದಂಡಿಳಿದಿದ್ದರು. ಆದರೆ ಏಳನೆಯ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ, ಇಸ್ರಾಯೇಲರು ಅರಾಮ್ಯರಲ್ಲಿ ಲಕ್ಷಮಂದಿ ಕಾಲಾಳುಗಳನ್ನು ಒಂದೇ ದಿವಸದಲ್ಲಿ ಸಂಹರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:29
13 ತಿಳಿವುಗಳ ಹೋಲಿಕೆ  

ಆಗ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲಾ ಹೆಣಗಳಾಗಿದ್ದರು.


ಯೆಹೋವನು ಯುಗಯುಗಾಂತರಗಳಲ್ಲಿಯೂ ಅರಸನಾಗಿರುವನು; ಆತನ ದೇಶದಲ್ಲಿ ಅನ್ಯಜನಗಳು ನಿಶ್ಶೇಷರಾದರು.


ರೆಮಲ್ಯನ ಮಗನಾದ ಪೆಕಹ ಎಂಬವನು ಒಂದೇ ದಿವಸ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರೂ ರಣವೀರರು. ಯೆಹೂದ್ಯರು ತಮ್ಮ ಪಿತೃಗಳ ದೇವರಾದ ಯೆಹೋವನನ್ನು ಬಿಟ್ಟದ್ದೇ ಇದಕ್ಕೆ ಕಾರಣ.


ಅಬೀಯನೂ ಅವನ ಜನರೂ ಅವರಲ್ಲಿ ಅನೇಕಾನೇಕರನ್ನು ಸಂಹರಿಸಿಬಿಟ್ಟರು. ಇಸ್ರಾಯೇಲ್ ಭಟರಲ್ಲಿ ಹತರಾಗಿ ಬಿದ್ದವರು ಐದು ಲಕ್ಷ ಮಂದಿ.


ಇಸ್ರಾಯೇಲ್ಯರ ಮುಂದೆ ಸೋತು ಓಡಿಹೋದರು; ದಾವೀದನು ಅರಾಮ್ಯರ ಏಳುನೂರು ರಥಗಳನ್ನು ಹಾಳುಮಾಡಿ ನಾಲ್ವತ್ತು ಸಾವಿರ ಮಂದಿ ರಾಹುತರನ್ನು ಹತಿಸಿಬಿಟ್ಟನು; ಸೇನಾಪತಿಯಾದ ಶೋಬಕನು ಗಾಯಹೊಂದಿ ಅಲ್ಲೇ ಸತ್ತನು.


ಆ ಫಿಲಿಷ್ಟಿಯನು ನಾಲ್ವತ್ತು ದಿವಸ ಹೊತ್ತಾರೆಯಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ಬಂದು ಅದೇ ಪ್ರಕಾರ ಕೂಗುತ್ತಾ ನಿಲ್ಲುತ್ತಿದ್ದನು.


ಆರು ದಿವಸ ಈ ಪ್ರಕಾರ ಮಾಡಿದರು. ಏಳನೆಯ ದಿನದಲ್ಲಿ ಅವರು ಸೂರ್ಯೋದಯವಾಗುತ್ತಲೇ ಎದ್ದು ಅದೇ ಕ್ರಮದಲ್ಲಿ ಪಟ್ಟಣವನ್ನು ಏಳು ಸಾರಿ ಸುತ್ತಿದರು. ಈ ದಿವಸದಲ್ಲಿ ಮಾತ್ರ ಅದನ್ನು ಏಳು ಸಾರಿ ಸುತ್ತಿದರು.


ಇಸಾಕನು ನಾಲ್ವತ್ತು ವರುಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳಾಗಿಯೂ ಅರಾಮ್ಯನಾದ ಲಾಬಾನನ ತಂಗಿಯಾಗಿಯೂ ಇದ್ದ ರೆಬೆಕ್ಕಳನ್ನು ಪದ್ದನ್ ಅರಾವಿುನಿಂದ ತರಿಸಿ ಹೆಂಡತಿಯಾಗಿ ಮಾಡಿಕೊಂಡನು.


ಆಗ ದೇವರ ಮನುಷ್ಯನು ಇಸ್ರಾಯೇಲ್ಯರ ಅರಸನ ಬಳಿಗೆ ಬಂದು ಅವನಿಗೆ - ಯೆಹೋವನು ಹೀಗನ್ನುತ್ತಾನೆ - ಯೆಹೋವನು ತಗ್ಗುಗಳ ದೇವರಲ್ಲ, ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು; ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವದು ಎಂದು ಹೇಳಿದನು.


ಉಳಿದ ಇಪ್ಪತ್ತೇಳು ಸಾವಿರ ಮಂದಿ ಸೈನಿಕರು ಅಫೇಕ ಪಟ್ಟಣವನ್ನು ಹೊಕ್ಕರು; ಆದರೆ ಆ ಪಟ್ಟಣದ ಗೋಡೆಯು ಅವರ ಮೇಲೆ ಬಿದ್ದದರಿಂದ ಅವರೂ ಸತ್ತರು. ಬೆನ್ಹದದನೂ ಆ ಪಟ್ಟಣವನ್ನು ಹೊಕ್ಕು ಒಂದು ಮನೆಯ ಒಳಕೋಣೆಯಲ್ಲಿ ಅಡಗಿಕೊಂಡನು.


ಮೂಡಣ ದಿಕ್ಕಿಗಿರುವ ಕಿಟಕಿಯನ್ನು ತೆರೆ ಎಂದನು. ಅವನು ತೆರೆದನು. ಅನಂತರ - ಬಾಣವನ್ನೆಸೆ ಎಂದು ಆಜ್ಞಾಪಿಸಿದನು. ಅವನು ಎಸೆಯಲು - ಇದು ಜಯಪ್ರದವಾದ ಯೆಹೋವನ ಬಾಣ; ಅರಾಮ್ಯರನ್ನು ಜಯಿಸುವ ಬಾಣ. ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವಿ ಎಂದು ಹೇಳಿದನು.


ಯೆಹೋವಾಹಾಜನ ಮಗನಾದ ಯೋವಾಷನು ತನ್ನ ತಂದೆಯ ಕಾಲದಲ್ಲಿ ಹಜಾಯೇಲನು ಯುದ್ಧಮಾಡಿ ಕಿತ್ತುಕೊಂಡಿದ್ದ ಪಟ್ಟಣಗಳನ್ನು ಬೆನ್ಹದದನಿಂದ ತಿರಿಗಿ ತೆಗೆದುಕೊಂಡನು. ಅವನನ್ನು ಮೂರು ಸಾರಿ ಸೋಲಿಸಿ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳನ್ನು ಹಿಂದಕ್ಕೆ ತೆಗೆದುಕೊಂಡನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು