Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 20:13 - ಕನ್ನಡ ಸತ್ಯವೇದವು J.V. (BSI)

13 ಆಗ ಒಬ್ಬ ಪ್ರವಾದಿಯು ಇಸ್ರಾಯೇಲ್ಯರ ಅರಸನಾದ ಅಹಾಬನ ಬಳಿಗೆ ಬಂದು ಅವನಿಗೆ - ಈ ಮಹಾ ಸಮೂಹವನ್ನು ನೋಡಿದಿಯಾ; ನಾನು ಯೆಹೋವನೇ ಎಂಬದು ನಿನಗೆ ಗೊತ್ತಾಗುವಂತೆ ಈಹೊತ್ತೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು ಎಂಬದಾಗಿ ಯೆಹೋವನು ಅನ್ನುತ್ತಾನೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ ಒಬ್ಬ ಪ್ರವಾದಿಯು ಇಸ್ರಾಯೇಲರ ಅರಸನಾದ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾ ಸಮೂಹವನ್ನು ನೋಡಿದೆಯಾ, ನಾನು ಯೆಹೋವನೇ ಎಂಬುದು ನಿನಗೆ ಗೊತ್ತಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೆ ಒಪ್ಪಿಸುವೆನು ಎಂದು ಯೆಹೋವನು ಅನ್ನುತ್ತಾನೆ” ಎಂಬುದಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆಗ ಒಬ್ಬ ಪ್ರವಾದಿ ಇಸ್ರಯೇಲರ ಅರಸ ಅಹಾಬನ ಬಳಿಗೆ ಬಂದು ಅವನಿಗೆ, “ಈ ಮಹಾಸಮೂಹವನ್ನು ನೋಡಿದಿಯೋ? ‘ನಾನೇ ಸರ್ವೇಶ್ವರ’ ಎಂಬುದು ನಿನಗೆ ಮನದಟ್ಟಾಗುವಂತೆ ಈ ದಿನವೇ ಇವರನ್ನೆಲ್ಲಾ ನಿನ್ನ ಕೈಗೊಪ್ಪಿಸುವೆನು, ಎನ್ನುತ್ತಾರೆ ಸರ್ವೇಶ್ವರ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅದೇ ಸಮಯಕ್ಕೆ ಒಬ್ಬ ಪ್ರವಾದಿಯು ರಾಜನಾದ ಅಹಾಬನ ಬಳಿಗೆ ಹೋಗಿ, “ರಾಜನಾದ ಅಹಾಬನೇ, ಯೆಹೋವನು ನಿನಗೆ ಹೀಗೆನ್ನುತ್ತಾನೆ. ‘ಆ ಮಹಾಸೇನೆಯನ್ನು ನೀನು ನೋಡಿದೆಯಾ! ಯೆಹೋವನಾದ ನಾನು, ಈ ದಿನ ಆ ಸೇನೆಯನ್ನು ಸೋಲಿಸುವಂತೆ ನಿನಗೆ ಅವಕಾಶ ಮಾಡುತ್ತೇನೆ. ಅನಂತರ ನಾನೇ ಯೆಹೋವನೆಂಬುದು ನಿನಗೆ ತಿಳಿಯುತ್ತದೆ’” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆಗ, ಒಬ್ಬ ಪ್ರವಾದಿಯು ಇಸ್ರಾಯೇಲಿನ ಅರಸನಾದ ಅಹಾಬನ ಬಳಿಗೆ ಬಂದು, “ಈ ದೊಡ್ಡ ಗುಂಪನ್ನು ನೋಡಿದೆಯೋ? ನಾನೇ ಯೆಹೋವ ದೇವರೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿ ಕೊಡುವೆನೆಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 20:13
22 ತಿಳಿವುಗಳ ಹೋಲಿಕೆ  

ಆಗ ದೇವರ ಮನುಷ್ಯನು ಇಸ್ರಾಯೇಲ್ಯರ ಅರಸನ ಬಳಿಗೆ ಬಂದು ಅವನಿಗೆ - ಯೆಹೋವನು ಹೀಗನ್ನುತ್ತಾನೆ - ಯೆಹೋವನು ತಗ್ಗುಗಳ ದೇವರಲ್ಲ, ಬೆಟ್ಟಗಳ ದೇವರಾಗಿರುತ್ತಾನೆ ಅಂದುಕೊಂಡು ಬಂದಿರುವ ಈ ಅರಾಮ್ಯರ ಮಹಾಸಮೂಹವನ್ನು ನಿನ್ನ ಕೈಗೆ ಒಪ್ಪಿಸುವೆನು; ಇದರಿಂದ ನಾನು ಯೆಹೋವನೇ ಎಂದು ನಿನಗೆ ಗೊತ್ತಾಗುವದು ಎಂದು ಹೇಳಿದನು.


ಆದರೂ ನಾನು ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿವಿುತ್ತವೇ ಸಹಿಸಿಕೊಂಡು ಕೈಯನ್ನು ಹಿಂದಕ್ಕೆ ತೆಗೆದುಕೊಂಡೆನು.


ಹೀಗೆ ನಾನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನಲ್ಲಿ ನೆಲೆಯಾಗಿ ನಿಮ್ಮ ದೇವರಾದ ಯೆಹೋವನಾಗಿದ್ದೇನೆ ಎಂದು ನಿಮಗೆ ದೃಢವಾಗುವದು; ಆಗ ಯೆರೂಸಲೇಮು ಪವಿತ್ರವಾಗಿರುವದು; ಮ್ಲೇಚ್ಫರು ಇನ್ನು ಅದನ್ನು ಹಾದುಹೋಗರು.


ಆದರೂ ಯಾವ ಜನಾಂಗಗಳ ಮುಂದೆ ಅವರನ್ನು ಪಾರುಮಾಡಿದೆನೋ ಆ ಜನಾಂಗಗಳ ಮುಂದೆ ನನ್ನ ಹೆಸರು ಅಪಕೀರ್ತಿಗೆ ಗುರಿಯಾಗಬಾರದೆಂದು ನನ್ನ ಹೆಸರಿನ ನಿವಿುತ್ತವೇ ಸಹಿಸಿಕೊಂಡೆನು.


ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.


ಆಗ ಎಲೀಷನು ಅವನಿಗೆ - ಯೆಹೋವನ ವಾಕ್ಯವನ್ನು ಕೇಳು; ಆತನು - ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವವು ಅನ್ನುತ್ತಾನೆ ಎಂದು ಹೇಳಿದನು.


ಇಸ್ರಾಯೇಲ್ಯರ ಗುಣುಗುಟ್ಟುವಿಕೆಯು ನನಗೆ ಕೇಳಿಸಿತು. ನೀನು ಅವರಿಗೆ - ಸಾಯಂಕಾಲದಲ್ಲಿ ಮಾಂಸವನ್ನೂ ಹೊತ್ತಾರೆಯಲ್ಲಿ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ; ಇದರಿಂದ ನಾನು ನಿಮ್ಮ ದೇವರಾದ ಯೆಹೋವನೆಂಬದು ನಿಮಗೆ ಗೊತ್ತಾಗುವದೆಂದು ಹೇಳಬೇಕು ಎಂಬದೇ.


ನಾನು ಫರೋಹನಲ್ಲಿಯೂ ಅವನ ರಥಗಳಲ್ಲಿಯೂ ಕುದುರೆಗಳಲ್ಲಿಯೂ ಪ್ರಖ್ಯಾತಿಹೊಂದಿದ ನಂತರ ನಾನು ಯೆಹೋವನು ಎಂಬದನ್ನು ಐಗುಪ್ತ್ಯರು ತಿಳುಕೊಳ್ಳುವರು ಅಂದನು.


ಹತರಾದವರು ನಿಮ್ಮ ಮಧ್ಯದಲ್ಲಿ ಬೀಳುವರು; ಆಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.


ಆದರೂ ಯೆಹೋವನು ಅವರನ್ನು ಸಂಪೂರ್ಣವಾಗಿ ಹಾಳುಮಾಡಗೊಡಲಿಲ್ಲ. ಅವರನ್ನು ಈ ಕಾಲದಲ್ಲಿಯೂ ತನ್ನ ಸನ್ನಿಧಿಯಿಂದ ತಳ್ಳಿಬಿಡಲಿಲ್ಲ. ತಾನು ಅಬ್ರಹಾಮ್ ಇಸಾಕ್ ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಸಿ ಅವರಿಗೆ ದಯೆತೋರಿಸಿದನು; ಕರುಳು ಮರುಗಿದವನಾಗಿ ಅವರಿಗೆ ಪ್ರಸನ್ನನಾದನು.


ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು.


ಅಹಾಬನು ಅವನನ್ನು - ಇದು ಯಾರ ಮುಖಾಂತರವಾಗಿ ಆಗುವದು ಎಂದು ಕೇಳಿದ್ದಕ್ಕೆ ಅವನು - ಪ್ರದೇಶಾಧಿಪತಿಗಳ ಸೇವಕರ ಮುಖಾಂತರವಾಗಿ ಆಗುವದೆಂದು ಯೆಹೋವನು ಅನ್ನುತ್ತಾನೆ ಎಂದು ಉತ್ತರಕೊಟ್ಟನು. ಅಹಾಬನು ತಿರಿಗಿ ಅವನನ್ನು - ಯುದ್ಧಪ್ರಾರಂಭಮಾಡತಕ್ಕವರಾರು ಎಂದು ಕೇಳಲು ಅವನು - ನೀನೇ ಎಂದು ಹೇಳಿದನು.


ಆಗ ಪ್ರವಾದಿಯು ತಿರಿಗಿ ಇಸ್ರಾಯೇಲ್ಯರ ಅರಸನ ಬಳಿಗೆ ಬಂದು ಅವನಿಗೆ - ಅರಾಮ್ಯರ ಅರಸನು ಮುಂದಿನ ವರುಷದಲ್ಲಿ ಇನ್ನೊಮ್ಮೆ ನಿನಗೆ ವಿರೋಧವಾಗಿ ಬರುತ್ತಾನೆ; ಆದದರಿಂದ ನೀನು ಹೋಗಿ ನಿನ್ನನ್ನು ಬಲಪಡಿಸಿಕೋ; ಜಾಗರೂಕನಾಗಿದ್ದು ನೀನು ಮಾಡತಕ್ಕದ್ದೇನೆಂಬದನ್ನು ಪರ್ಯಾಲೋಚಿಸು ಅಂದನು.


ಯೆಹೋವನು ಯೆಹೋಶುವನಿಗೆ - ಅವರಿಗೆ ಹೆದರಬೇಡ; ಅವರನ್ನು ನಿನ್ನ ಕೈಗೆ ಒಪ್ಪಿಸಿದ್ದೇನೆ. ಅವರಲ್ಲಿ ಒಬ್ಬನೂ ನಿನ್ನ ಮುಂದೆ ನಿಲ್ಲುವದಿಲ್ಲ ಎಂದು ಹೇಳಿದನು.


ಜನರೆಲ್ಲರೂ ಅದನ್ನು ಕಂಡು ಬೋರ್ಲಬಿದ್ದು - ಯೆಹೋವನೇ ದೇವರು, ಯೆಹೋವನೇ ದೇವರು ಎಂದು ಕೂಗಿದರು.


ಆತನು ತನ್ನ ದೃಷ್ಟಿಯಲ್ಲಿ ಅಲ್ಪವಾಗಿರುವ ಈ ಕಾರ್ಯದ ಹೊರತಾಗಿ ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವನು.


ಅವನು - ಎಲ್ಲಾ ಯೆಹೂದ್ಯರೇ, ಯೆರೂಸಲೇವಿುನವರೇ, ಅರಸನಾದ ಯೆಹೋಷಾಫಾಟನೇ, ಯೆಹೋವನು ಹೇಳುವದನ್ನು ಕೇಳಿರಿ! ಈ ಮಹಾಸಮೂಹದ ನಿವಿುತ್ತವಾಗಿ ಕಳವಳಗೊಳ್ಳಬೇಡಿರಿ, ಹೆದರಬೇಡಿರಿ, ಯುದ್ಧವು ನಿಮ್ಮದಲ್ಲ, ದೇವರದೇ.


ಈ ಸಾರಿ ನೀವು ಯುದ್ಧಮಾಡುವದು ಅವಶ್ಯವಿಲ್ಲ. ಯೆಹೂದ್ಯರೇ, ಯೆರೂಸಲೇವಿುನವರೇ, ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿರಿ, ಕಳವಳಗೊಳ್ಳಬೇಡಿರಿ. ನಾಳೆ ಅವರೆದುರಿಗೆ ಹೊರಡಿರಿ, ಯೆಹೋವನು ನಿಮ್ಮ ಸಂಗಡ ಇರುವನು ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು