Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 16:24 - ಕನ್ನಡ ಸತ್ಯವೇದವು J.V. (BSI)

24 ಅನಂತರ ಶೆಮೆರ್ ಎಂಬವನಿಗೆ ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಅವನಿಂದ ಸಮಾರ್ಯವೆಂಬ ಗುಡ್ಡವನ್ನು ಕೊಂಡುಕೊಂಡು ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಆ ಭೂವಿುಯ ಒಡೆಯನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ಸಮಾರ್ಯವೆಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅನಂತರ ಶೆಮೆರ್ ಎಂಬವನಿಗೆ ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಅವನಿಂದ ಸಮಾರ್ಯವೆಂಬ ಗುಡ್ಡವನ್ನು ಕೊಂಡುಕೊಂಡು, ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ಸಮಾರ್ಯ ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅನಂತರ ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿನಾಣ್ಯಗಳನ್ನು ಕೊಟ್ಟು ಅವನಿಂದ ಸಮಾರಿಯ ಎಂಬ ಗುಡ್ಡವನ್ನು ಕೊಂಡುಕೊಂಡನು. ಅದರ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಆ ಭೂಮಿಯ ಒಡೆಯನಾಗಿದ್ದ ಶೆಮೆರಿನ ಜ್ಞಾಪಕಾರ್ಥವಾಗಿ ಸಮಾರಿಯ ಎಂಬ ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವನು ಶೆಮೆರ್ ಎಂಬವನಿಗೆ ಆರು ಸಾವಿರ ಬೆಳ್ಳಿ ನಾಣ್ಯಗಳನ್ನು ಕೊಟ್ಟು ಸಮಾರಿಯ ಎಂಬ ಬೆಟ್ಟವನ್ನು ಕೊಂಡುಕೊಂಡನು. ಆ ಬೆಟ್ಟದ ಮೇಲೆ ಒಂದು ಪಟ್ಟಣವನ್ನು ಕಟ್ಟಿಸಿ, ಅದಕ್ಕೆ ಆ ಜಮೀನಿನ ಯಜಮಾನನಾಗಿದ್ದ ಶೆಮೆರನ ಜ್ಞಾಪಕಾರ್ಥವಾಗಿ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ಎಂದು ಹೆಸರಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 16:24
16 ತಿಳಿವುಗಳ ಹೋಲಿಕೆ  

ಅವನು ಯೆಹೋವನ ಅಪ್ಪಣೆಯಿಂದ ಬೇತೇಲಿನ ಯಜ್ಞವೇದಿಗೆ ವಿರೋಧವಾಗಿಯೂ ಸಮಾರ್ಯದ ಪಟ್ಟಣಗಳಲ್ಲಿರುವ ಎಲ್ಲಾ ಪೂಜಾಸ್ಥಳಗಳಿಗೆ ವಿರೋಧವಾಗಿಯೂ ಹೇಳಿದ ಮಾತುಗಳು ಸಂದೇಹವಿಲ್ಲದೆ ನೆರವೇರುವವು ಅಂದನು.


ಅಶ್ಶೂರದ ಅರಸನು ಸಮಾರ್ಯಪಟ್ಟಣಗಳಲ್ಲಿ ವಾಸವಾಗಿದ್ದ ಇಸ್ರಾಯೇಲ್ಯರನ್ನು ಸೆರೆಯಾಗಿ ಒಯ್ದನಂತರ ಅವರಿಗೆ ಬದಲಾಗಿ ಆ ಪಟ್ಟಣಗಳಿಗೆ ಬಾಬೆಲ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಎಂಬ ಊರುಗಳವರನ್ನು ಕಳುಹಿಸಿದನು. ಅವರು ಸಮಾರ್ಯದೇಶವನ್ನು ಸ್ವತಂತ್ರಿಸಿಕೊಂಡು ಅದರ ಪಟ್ಟಣಗಳಲ್ಲಿ ವಾಸಿಸಿದರು.


ಅದು ಹೋಶೇಯನ ಆಳಿಕೆಯ ಒಂಭತ್ತನೆಯ ವರುಷದಲ್ಲಿ ಅವನ ಸ್ವಾಧೀನವಾಗಲು ಅವನು ಎಲ್ಲಾ ಇಸ್ರಾಯೇಲ್ಯರನ್ನು ಅಶ್ಶೂರ್‍ದೇಶಕ್ಕೆ ಒಯ್ದು ಹಲಹು ಪ್ರಾಂತದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತದಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಇರಿಸಿದನು.


ಯೆಹೂದದ ಅರಸನಾದ ಆಹಾಜನ ಆಳಿಕೆಯ ಹನ್ನೆರಡನೆಯ ವರುಷದಲ್ಲಿ ಏಲನ ಮಗನಾದ ಹೋಶೇಯನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಒಂಭತ್ತು ವರುಷ ಆಳಿದನು.


ಅರಸನು ಸಾಯಲು ಅವನನ್ನು ಸಮಾರ್ಯಕ್ಕೆ ತಂದು ಅಲ್ಲಿ ಸಮಾಧಿಮಾಡಿದರು.


ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ರಥಾಶ್ವಬಲಗಳಿಂದ ಕೂಡಿದ ಮೂವತ್ತೆರಡು ಮಂದಿ ಅರಸರೊಡನೆ ಹೊರಟು ಬಂದು ಸಮಾರ್ಯಪಟ್ಟಣಕ್ಕೆ ಮುತ್ತಿಗೆ ಹಾಕಿ ಯುದ್ಧಮಾಡಿದನು.


ಎಲೀಯನು ಅಹಾಬನನ್ನು ನೋಡುವದಕ್ಕೆ ಹೊರಟನು. ಆಗ ಸಮಾರ್ಯದಲ್ಲಿ ಬರವು ಬಹುಘೋರವಾಗಿದ್ದದರಿಂದ


ಬಾಳ್‍ದೇವರಿಗೋಸ್ಕರ ಸಮಾರ್ಯದಲ್ಲಿ ಒಂದು ಗುಡಿ ಕಟ್ಟಿಸಿ ಅದರಲ್ಲಿ ಯಜ್ಞವೇದಿಯನ್ನು ಮಾಡಿಸಿದನು.


ಸಮಾರ್ಯಪಟ್ಟಣದಲ್ಲಿ ಅಹಾಬನ ಸಂತಾನದ ಎಪ್ಪತ್ತುಮಂದಿ ರಾಜಪುತ್ರರಿದ್ದರು. ಯೇಹುವು ಆ ಪಟ್ಟಣದಲ್ಲಿದ್ದ ಇಜ್ರೇಲಿನ ಅಧಿಕಾರಿಗಳಾದ ಹಿರಿಯರಿಗೂ ರಾಜಪುತ್ರಪಾಲಕರಿಗೂ ಪತ್ರಗಳನ್ನು ಬರೆದು ಅವುಗಳನ್ನು ದೂತರ ಮುಖಾಂತರವಾಗಿ ಕಳುಹಿಸಿದನು.


ಯೆಹೂದದ ಅರಸನಾದ ಉಜ್ಜೀಯನ ಆಳಿಕೆಯ ಮೂವತ್ತೊಂಭತ್ತನೆಯ ವರುಷದಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರಾಯೇಲ್ಯರ ಅರಸನಾಗಿ ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.


ಗಡ್ಡ ಬೋಳಿಸಿ ಬಟ್ಟೆಹರಿದು ಗಾಯಮಾಡಿಕೊಂಡಿದ್ದ ಎಂಭತ್ತು ಜನರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಒಂದು ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಯೆಹೋವನ ಆಲಯಕ್ಕೆ ಹೋಗುತ್ತಿದ್ದರು.


ಅಯ್ಯೋ, ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ! ಪ್ರಮುಖಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲ್ಯರ ನ್ಯಾಯ ವಿಚಾರಕರಾಗಿ ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ ಪಾಡನ್ನು ಎಂಥದೆನ್ನಲಿ!


ಇದಕ್ಕೆಲ್ಲಾ ಕಾರಣವು ಯಾಕೋಬಿನ ದ್ರೋಹವೇ, ಇಸ್ರಾಯೇಲ್ ವಂಶದ ಪಾಪಗಳೇ, ಯಾಕೋಬಿನ ದ್ರೋಹವೇನು? ಸಮಾರ್ಯವಲ್ಲವೇ. ಯೆಹೂದದ [ಕೆಟ್ಟ] ಪೂಜಾಸ್ಥಾನಗಳು ಯಾವವು? ಯೆರೊಸಲೇಮಲ್ಲವೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು