1 ಅರಸುಗಳು 14:13 - ಕನ್ನಡ ಸತ್ಯವೇದವು J.V. (BSI)13 ಇಸ್ರಾಯೇಲ್ಯರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವದರಿಂದ ಇವನೊಬ್ಬನೇ ಸಮಾಧಿಹೊಂದುವನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಇಸ್ರಾಯೇಲರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಅವನು ಮಾತ್ರ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಅವನೊಬ್ಬನೇ ಸಮಾಧಿಹೊಂದುವನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)13 ಇಸ್ರಯೇಲರೆಲ್ಲರೂ ಅವನಿಗಾಗಿ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಇಸ್ರಯೇಲ್ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಇವನೊಬ್ಬನೇ ಸಮಾಧಿಹೊಂದುವನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಇಸ್ರೇಲರೆಲ್ಲರು ಅವನಿಗಾಗಿ ಗೋಳಾಡಿ ಸಮಾಧಿಮಾಡುತ್ತಾರೆ. ಯಾರೊಬ್ಬಾಮನ ಕುಟುಂಬದಲ್ಲಿ ನಿನ್ನ ಮಗನನೊಬ್ಬನನ್ನು ಮಾತ್ರ ಸಮಾಧಿ ಮಾಡುತ್ತಾರೆ. ಏಕೆಂದರೆ ಯಾರೊಬ್ಬಾಮನ ಕುಟುಂಬದಲ್ಲಿ ಇವನೊಬ್ಬನು ಮಾತ್ರ ಇಸ್ರೇಲಿನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಇದಲ್ಲದೆ ಸಮಸ್ತ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಳಿಡುವರು. ಏಕೆಂದರೆ, ಯಾರೊಬ್ಬಾಮನವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು. ಯಾರೊಬ್ಬಾಮನ ಮನೆಯವರೊಳಗೆ ಅವನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗಾದ ಒಳ್ಳೆಯ ಕ್ರಿಯೆ ಸಿಕ್ಕಿತು. ಅಧ್ಯಾಯವನ್ನು ನೋಡಿ |