1 ಅರಸುಗಳು 13:4 - ಕನ್ನಡ ಸತ್ಯವೇದವು J.V. (BSI)4 ಬೇತೇಲಿನ ವೇದಿಯ ಬಳಿಯಲ್ಲಿ ನಿಂತಿದ್ದ ಅರಸನು ಆ ದೇವರ ಮನುಷ್ಯನು ವೇದಿಗೆ ವಿರೋಧವಾಗಿ ನುಡಿದದ್ದನ್ನು ಕೇಳಿ ಕೈಚಾಚಿ - ಅವನನ್ನು ಹಿಡಿಯಿರಿ ಎಂದು ಆಜ್ಞಾಪಿಸಿದನು. ಕೂಡಲೆ ಅವನ ಕೈ ಒಣಗಿಹೋಯಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಬೇತೇಲಿನ ಯಜ್ಞವೇದಿಯ ಬಳಿಯಲ್ಲಿ ನಿಂತಿದ್ದ ಅರಸನು ಆ ದೇವರ ಮನುಷ್ಯನು ವೇದಿಗೆ ವಿರುದ್ಧವಾಗಿ ನುಡಿದಿದ್ದನ್ನು ಕೇಳಿ, “ಕೈಚಾಚಿ ಅವನನ್ನು ಹಿಡಿಯಿರಿ” ಎಂದು ಆಜ್ಞಾಪಿಸಿದನು. ಕೂಡಲೇ ಅವನ ಕೈ ಬತ್ತಿ ಹೋಯಿತು. ಅವನು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಅಗಲ್ಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಬೇತೇಲಿನ ಪೀಠದ ಬಳಿ ನಿಂತಿದ್ದ ಅರಸನು ಆ ದೈವಭಕ್ತನು ಪೀಠಕ್ಕೆ ವಿರೋಧವಾಗಿ ನುಡಿದದ್ದನ್ನು ಕೇಳಿ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದು ಆಜ್ಞಾಪಿಸಿದನು. ಕೂಡಲೆ ಅವನ ಕೈ ಒಣಗಿಹೋಯಿತು. ಅವನು ಅದನ್ನು ಹಿಂತೆಗೆದುಕೊಳ್ಳಲಾಗಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಬೇತೇಲಿನ ಯಜ್ಞವೇದಿಕೆಯನ್ನು ಕುರಿತು ದೇವಮನುಷ್ಯನು ಹೇಳಿದ ಸಂದೇಶವು ರಾಜನಾದ ಯಾರೊಬ್ಬಾಮನಿಗೆ ಕೇಳಿಸಿತು. ಅವನು ತನ್ನ ಕೈಯನ್ನು ಯಜ್ಞವೇದಿಕೆಯಿಂದ ಥಟ್ಟನೆ ತೆಗೆದು, ಆ ಮನುಷ್ಯನ ಕಡೆಗೆ ಗುರಿಮಾಡಿ, “ಆ ಮನುಷ್ಯನನ್ನು ಹಿಡಿಯಿರಿ!” ಎಂದು ಹೇಳಿದನು. ಆದರೆ ರಾಜನು ಇದನ್ನು ಹೇಳಿದಾಗ, ಅವನ ಕೈಗೆ ಲಕ್ವ ಹೊಡೆಯಿತು. ಅವನು ಅದನ್ನು ಚಲಿಸಲಾಗಲಿಲ್ಲ, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಅರಸನಾದ ಯಾರೊಬ್ಬಾಮನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿ ದೇವರ ಮನುಷ್ಯನು ಹೇಳಿದ ಮಾತನ್ನು ಕೇಳಿದಾಗ, ಅವನು ಪೀಠದ ಬಳಿಯಿಂದ ತನ್ನ ಕೈಚಾಚಿ, “ಅವನನ್ನು ಹಿಡಿಯಿರಿ,” ಎಂದನು. ಆಗ ಅವನಿಗೆ ವಿರೋಧವಾಗಿ ಚಾಚಿದ ಅವನ ಕೈ ಹಿಂದಕ್ಕೆ ಎಳೆದುಕೊಳ್ಳದ ಹಾಗೆ ಒಣಗಿ ಹೋಯಿತು. ಅಧ್ಯಾಯವನ್ನು ನೋಡಿ |