Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಅರಸುಗಳು 13:24 - ಕನ್ನಡ ಸತ್ಯವೇದವು J.V. (BSI)

24 ದೇವರ ಮನುಷ್ಯನು ಸ್ವಲ್ಪ ದೂರ ಹೋದನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದುಹಾಕಿತು. ಅವನ ಶವವು ದಾರಿಯಲ್ಲಿಯೇ ಬಿದ್ದಿತ್ತು; ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ದೇವರ ಮನುಷ್ಯನು ಸ್ವಲ್ಪ ದೂರ ಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದು ಹಾಕಿತು. ಅವನ ಶವವು ದಾರಿಯಲ್ಲಿಯೇ ಬಿದ್ದಿತ್ತು. ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಆ ದೈವಭಕ್ತನು ಸ್ವಲ್ಪ ದೂರಹೋದ ನಂತರ ಒಂದು ಸಿಂಹವು ಅವನಿಗೆ ಎದುರಾಗಿ ಬಂದು ಅವನನ್ನು ಕೊಂದುಹಾಕಿತು. ಅವನ ಶವ ದಾರಿಯಲ್ಲಿಯೇ ಬಿದ್ದಿತ್ತು; ಕತ್ತೆಯೂ ಸಿಂಹವೂ ಶವದ ಹತ್ತಿರ ನಿಂತುಕೊಂಡಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅವನು ತನ್ನ ಮನೆಗೆ ಹಿಂತಿರುಗಿ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಸಿಂಹವು ಅವನ ಮೇಲೆರಗಿ ಅವನನ್ನು ಕೊಂದುಹಾಕಿತು. ಪ್ರವಾದಿಯ ದೇಹವು ರಸ್ತೆಯ ಮೇಲೆ ಬಿದ್ದಿತ್ತು. ಕತ್ತೆ ಮತ್ತು ಸಿಂಹವು ಆ ದೇಹದ ಹತ್ತಿರ ನಿಂತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವನು ಹೋದ ತರುವಾಯ, ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಬಿದ್ದಿತ್ತು. ಕತ್ತೆಯೂ ಮತ್ತು ಸಿಂಹವೂ ಹೆಣದ ಬಳಿಯಲ್ಲಿ ನಿಂತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಅರಸುಗಳು 13:24
9 ತಿಳಿವುಗಳ ಹೋಲಿಕೆ  

ಆಗ ಪ್ರವಾದಿಯು ಅವನಿಗೆ - ನೀನು ಯೆಹೋವನ ಮಾತನ್ನು ಕೇಳದೆಹೋದದರಿಂದ ನನ್ನನ್ನು ಬಿಟ್ಟು ಹೊರಟ ಕೂಡಲೆ ಒಂದು ಸಿಂಹವು ಬಂದು ನಿನ್ನನ್ನು ಕೊಲ್ಲುವದು ಅಂದನು. ಅವನು ಇವನನ್ನು ಬಿಟ್ಟು ಹೋದ ಕೂಡಲೆ ಒಂದು ಸಿಂಹವು ಬಂದು ಅವನನ್ನು ಕೊಂದುಹಾಕಿತು.


ಸಿಂಹದ ಕಡೆಯಿಂದ ಓಡಿದವನಿಗೆ ಕರಡಿಯು ಎದುರುಬಿದ್ದಂತಾಗುವದು; ಅವನು ಮನೆಗೆ ಓಡಿಬಂದು ಕೈಯನ್ನು ಗೋಡೆಯ ಮೇಲೆ ಊರಲು ಹಾವು ಕಚ್ಚಿದ ಹಾಗಾಗುವದು.


ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ತಿರುಗಾಡುತ್ತಿದೆ ಎಂಬದು ಸೋಮಾರಿಯ ನೆವ.


ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದೀತು ಎಂಬದು ಸೋಮಾರಿಯ ನೆವ.


ಅವನು ಅವರ ಕಡೆಗೆ ತಿರುಗಿಕೊಂಡು ಯೆಹೋವನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಾಲ್ವತ್ತೆರಡು ಮಂದಿಯನ್ನು ಹರಿದುಬಿಟ್ಟವು.


ಅನ್ನಪಾನಗಳನ್ನು ತೆಗೆದುಕೊಂಡನಂತರ ಅವನು ತಾನು ಕರತಂದ ಪ್ರವಾದಿಗೋಸ್ಕರ ಕತ್ತೆಗೆ ತಡಿಹಾಕಿಸಿದನು.


ಆ ಕತ್ತೆ ನನ್ನನ್ನು ನೋಡಿ ಮೂರು ಸಾರಿ ನನ್ನೆದುರಿನಿಂದ ಒತ್ತಟ್ಟಿಗೆ ತಿರುಗಿಕೊಂಡಿತು; ಹಾಗೆ ತಿರುಗಿಕೊಳ್ಳದಿದ್ದರೆ ನಾನು ಕತ್ತೆಯನ್ನು ಉಳಿಸಿ ನಿನ್ನನ್ನು ಕೊಂದುಹಾಕಿಬಿಡುತ್ತಿದ್ದೆನು ಎಂದು ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು