Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 9:15 - ಕನ್ನಡ ಸತ್ಯವೇದವು C.L. Bible (BSI)

15 “ಅವರ ದುಷ್ಟತನ ಗಿಲ್ಗಾಲಿನಲ್ಲೇ ಪ್ರಾರಂಭವಾಯಿತು. ಅಲ್ಲೇ ಅವರು ನನ್ನ ದ್ವೇಷಕ್ಕೆ ಗುರಿಯಾದರು. ಅವರ ಪಾಪಕೃತ್ಯಗಳ ನಿಮಿತ್ತ ನನ್ನ ಆಲಯದಿಂದ ಹೊರಗಟ್ಟುವೆನು. ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲ ದ್ರೋಹಿಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ; ಅವರ ದುಷ್ಕೃತ್ಯಗಳ ನಿವಿುತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು; ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿಯೇ ನಾನು ಅವರನ್ನು ದ್ವೇಷಿಸಲು ಪ್ರಾರಂಭಿಸಿದೆನು. ಅವರು ಮಾಡುವ ದುಷ್ಕೃತ್ಯಗಳ ದೆಸೆಯಿಂದ ನಾನು ಅವರನ್ನು ನನ್ನ ಮನೆಯಿಂದ ಹೊರಡಿಸುವೆನು. ಇನ್ನು ಮುಂದೆ ಅವರನ್ನು ನಾನು ಪ್ರೀತಿಸುವುದಿಲ್ಲ. ಅವರ ನಾಯಕರು ನನಗೆ ವಿರುದ್ಧವಾಗಿ ದಂಗೆ ಎದ್ದವರು; ನನ್ನ ವಿರುದ್ಧವಾಗಿ ತಿರುಗಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ. ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು ನನ್ನ ಆಲಯದೊಳಗಿಂದ ಹೊರಡಿಸಿ, ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ. ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 9:15
38 ತಿಳಿವುಗಳ ಹೋಲಿಕೆ  

ಆದರೂ ಗಿಲ್ಯಾದಿನಲ್ಲಿ ಅಧರ್ಮ ನೆಲೆಗೊಂಡಿದೆ. ಅದಕ್ಕೆ ದುರ್ಗತಿ ಕಾದಿದೆ. ಗಿಲ್ಗಾಲಿನಲ್ಲಿ ಬಸವನಿಗೆ ಯಜ್ಞಗಳನ್ನು ಅರ್ಪಿಸಲಾಗುತ್ತಿದೆ. ಅಲ್ಲಿನ ಯಜ್ಞವೇದಿಗಳು ಪುಡಿಪುಡಿಯಾಗುವುವು; ಉಳುವ ನೇಗಿಲಿಗೆ ಸಿಕ್ಕುವ ಕಲ್ಲುಕುಪ್ಪೆಗಳಾಗುವುವು.”


“ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆ ಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣಮಾಡಬೇಡಿ.


ನಿನ್ನ ಅಧಿಪತಿಗಳೇ ದ್ರೋಹಿಗಳಾಗಿದ್ದಾರೆ, ಕಳ್ಳರ ಗೆಳೆಯರಾಗಿದ್ದಾರೆ. ಎಲ್ಲರೂ ಲಂಚಕೋರರಾಗಿದ್ದಾರೆ. ಕಪ್ಪಕಾಣಿಕೆಗಳಿಗೆ ಕೈಯೊಡ್ಡುತ್ತಾರೆ. ಆದರೆ ಅನಾಥರ ಪರವಾಗಿ ವಾದಿಸುವುದಿಲ್ಲ. ವಿಧವೆಯರ ವ್ಯಾಜ್ಯವನ್ನು ತೀರಿಸುವುದಿಲ್ಲ.


ಬೇತೇಲಿಗೆ ಹೋಗಬೇಡಿ, ಗಿಲ್ಗಾಲಿಗೆ ಸೇರಬೇಡಿ. ಬೆರ್ಷೆಬಾಗೆ ಯಾತ್ರೆ ಹೋಗಬೇಡಿ. ಗಿಲ್ಗಾಲ್ ಗಡೀಪಾರಾಗುವುದು. ಬೇತೇಲ್ ಬಯಲಾಗುವುದು.”


ಅವನು ಇಸ್ರಯೇಲರ ನ್ಯಾಯಗಳನ್ನು ತೀರಿಸುವುದಕ್ಕಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಾಕ್ಕೆ ತಿರುಗಿ ಬರುತ್ತಿದ್ದನು.


ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.


ನನ್ನ ಜನರೇ, ಮೋವಾಬಿನ ಅರಸನಾದ ಬಾಲಾಕನು ಕೊಟ್ಟ ಸಲಹೆಯನ್ನು ನೆನಪಿಗೆ ತಂದುಕೊಳ್ಳಿ. ಬೆಯೋರನ ಮಗನಾದ ಬಿಳಾಮನು ಕೊಟ್ಟ ಉತ್ತರವನ್ನು ಜ್ಞಾಪಿಸಿಕೊಳ್ಳಿ. ನೀವು ತಿಟ್ಟೀಮನ್ನು ಬಿಟ್ಟಂದಿನಿಂದ ಗಿಲ್ಗಾಲನ್ನು ಸೇರುವ ತನಕ ನಡೆದುದನೆಲ್ಲಾ ಸ್ಮರಿಸಿಕೊಳ್ಳಿ. ಆಗ ಸರ್ವೇಶ್ವರ ನಿಮ್ಮನ್ನು ರಕ್ಷಿಸಲು ಮಾಡಿದ ಮಹತ್ಕಾರ್ಯಗಳು ನಿಮಗೆ ಮನದಟ್ಟಾಗುವುವು.”


“ಅಂತೆಯೇ, ನಿಮ್ಮ ಪರಮಪೂಜ್ಯದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು.


ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.


ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.


ಏಕೆಂದರೆ ನಾನು ನಿಮ್ಮನ್ನು ದಮಸ್ಕದಿಂದ ಆಚೆ ತಳ್ಳಿ, ಸೆರೆಯಾಳುಗಳನ್ನಾಗಿ ಕಳುಹಿಸುವೆನು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಸ್ವಾಮಿ ಸರ್ವೇಶ್ವರ ಇಂತೆನ್ನುತ್ತಾರೆ: “ಇಸ್ರಯೇಲಿನ ಜನರೇ, ಪಾಪ ಮಾಡಬೇಕಾದರೆ, ಬೇತೇಲಿಗೆ ಹೋಗಿ ಪಾಪಮಾಡಿರಿ. ಗಿಲ್ಗಾಲಿಗೆ ಹೋಗಿ ಯಥೇಚ್ಛವಾಗಿ ದ್ರೋಹಮಾಡಿರಿ. ಪ್ರತಿದಿನವೂ ಪ್ರಾತಃಕಾಲದ ಬಲಿಗಳನ್ನು ಅರ್ಪಿಸಿರಿ. ಮೂರು ದಿನಗಳಿಗೊಮ್ಮೆ ದಶಮಾಂಶವನ್ನು ಸಲ್ಲಿಸಿರಿ.


ತಮ್ಮ ಮಾತಿಗೆ ಕಿವಿಗೊಡದ ಈ ಜನರನ್ನು ಸರ್ವೇಶ್ವರ ತಳ್ಳಿಬಿಡುವರು. ಇತರ ಜನಾಂಗಗಳ ಮಧ್ಯೆ ಅವರು ಅಲೆಮಾರಿಗಳಂತೆ ಇರುವರು.


ಅವರು ಸರ್ವೇಶ್ವರಸ್ವಾಮಿಯ ನಾಡಿನಲ್ಲಿ ವಾಸಮಾಡುವುದಿಲ್ಲ. ಎಫ್ರಯಿಮರು ಈಜಿಪ್ಟಿಗೆ ಹಿಂದಿರುಗುವರು. ಅಸ್ಸೀರಿಯದಲ್ಲಿ ಅವರು ತಿನ್ನುವ ಆಹಾರ ಹೊಲಸಾಗುವುದು.


ಆದರೆ ಅವರ ದುಷ್ಕೃತ್ಯಗಳೆಲ್ಲ ಸರ್ವೇಶ್ವರಸ್ವಾಮಿಯ ಜ್ಞಾಪಕದಲ್ಲಿ ಇರುತ್ತವೆ ಎಂಬುದನ್ನು ಅವರು ಮನದಟ್ಟುಮಾಡಿಕೊಂಡಿಲ್ಲ. ಅವರ ನೀಚಕೃತ್ಯಗಳು ಅವರನ್ನು ಆವರಿಸಿಕೊಂಡಿವೆ; ನನ್ನ ಕಣ್ಮುಂದೆಯೇ ಇವೆ.


ಪ್ರಜೆಗಳಂತೆಯೇ ಯಾಜಕ, ನಿಮ್ಮ ದುಷ್ಕೃತ್ಯಗಳಿಗೆ ತಕ್ಕ ದಂಡನೆಯನ್ನು ವಿಧಿಸುತ್ತೇನೆ. ಅವುಗಳ ಪ್ರತಿಫಲವನ್ನು ನೀವೇ ಅನುಭವಿಸುವಂತೆ ಮಾಡುತ್ತೇನೆ.


ಹೀಗಿರಲು, ಅನೇಕ ದಿನಗಳವರೆಗೆ ಇಸ್ರಯೇಲಿನಲ್ಲಿ ರಾಜಯುವರಾಜರುಗಳು ಆಳ್ವಿಕೆ ನಡೆಸುವುದಿಲ್ಲ. ಬಲಿಯರ್ಪಣೆಗಳು ಇರುವುದಿಲ್ಲ. ವಿಗ್ರಹವೇದಿಕೆಗಳು ಅವರ ಮಧ್ಯೆ ಕಂಡುಬರುವುದಿಲ್ಲ, ಮಾಟಮಂತ್ರ ನಡೆಯುವುದಿಲ್ಲ.


ಆಗ ಸರ್ವೇಶ್ವರ: “ಈ ಮಗುವಿಗೆ ‘ಲೋ-ಅಮ್ಮಿ’ ಎಂದು ನಾಮಕರಣ ಮಾಡು. ಏಕೆಂದರೆ, ಇನ್ನು ನೀವು ನನ್ನ ಪ್ರಜೆಯಲ್ಲ; ನಾನು ನಿಮ್ಮ ದೇವರಲ್ಲ,” ಎಂದರು.


ಗೋಮೆರಳು ಪುನಃ ಗರ್ಭಿಣಿಯಾಗಿ ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಸರ್ವೇಶ್ವರ, ಹೊಶೇಯನಿಗೆ: “ಇವಳನ್ನು ‘ಲೋರುಹಾಮ’ ಎಂದು ಕರೆ. ಏಕೆಂದರೆ, ನಾನು ಇನ್ನು ಇಸ್ರಯೇಲರನ್ನು ಪ್ರೀತಿಸೆನು; ಇನ್ನು ಅವರನ್ನು ಕ್ಷಮಿಸೆನು.


ಇವಳು ಮುಚ್ಚುಮರೆಯಿಲ್ಲದೆ ಹಾದರಮಾಡಿ ತನ್ನ ಮಾನವನ್ನೇ ಕೆಡಿಸಿಕೊಂಡಾಗ ನನ್ನ ಅನುರಾಗ, ಮೊದಲು ಇವಳ ಅಕ್ಕನಿಂದ ದೂರವಾದ ಹಾಗೆ, ಇವಳಿಂದಲೂ ದೂರವಾಯಿತು.


ಅಲ್ಲಿನ ಪ್ರಮುಖರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ಕಬಳಿಸುವ, ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.


“ನನಗೆ ಆಪ್ತವಾದ ಜನತೆಯು, ನನಗೆ ಅಸಹ್ಯಕಾರ್ಯಗಳನ್ನು ಮಾಡಿದ್ದೇಕೆ? ನನ್ನ ಆಲಯದಲ್ಲಿ ಅದಕ್ಕಿರುವ ಹಕ್ಕಾದರೂ ಏನು? ವ್ರತಗಳ ಮೂಲಕ, ಪಶುಬಲಿ ಮಾಂಸದ ಮೂಲಕ ಅದು ಬರಲಿರುವ ದಂಡನೆಯನ್ನು ತಡೆಗಟ್ಟಬಲ್ಲದೆ?


ಆದುದರಿಂದ ಗಣ್ಯವ್ಯಕ್ತಿಗಳ ಬಳಿಗೆ ಹೋಗಿ ಮಾತಾಡುವೆನು ಅವರು ಸರ್ವೇಶ್ವರನ ಮಾರ್ಗ ಹಾಗೂ ಅವರ ದೇವರ ನ್ಯಾಯವಿಧಿಗಳನ್ನು ಬಲ್ಲವರು,” ಎಂದುಕೊಂಡೆನು. ಆದರೆ ಆ ವ್ಯಕ್ತಿಗಳು ಕೂಡ ನೊಗವನ್ನು ಮುರಿದವರು, ಕಣ್ಣಿಗಳನ್ನು ಕಿತ್ತುಬಿಟ್ಟವರು.


ಭ್ರಷ್ಟಳಾದ ಇಸ್ರಯೇಲ್ ನನಗೆ ವಿಮುಖಳಾಗಿ ವ್ಯಭಿಚಾರಿಣಿಯಂತೆ ವರ್ತಿಸಿದ ಕಾರಣದಿಂದಲೆ, ನಾನು ಅವಳನ್ನು ನಿರಾಕರಿಸಿ ವಿವಾಹ ವಿಚ್ಛೇದನ ಪತ್ರಕೊಟ್ಟದ್ದನ್ನು ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನೋಡಿಯೂ ಅಂಜದೆಹೋದಳು. ತಾನೂ ಹೋಗಿ ವೇಶ್ಯೆಯಂತೆ ವರ್ತಿಸಿದಳು.


ತ್ಯಜಿಸಿದನು ಸಿಲೋವಿನಲಿ ತನಗಿದ್ದ ಆಲಯವನು I ಜನರ ಮಧ್ಯೆ ವಾಸಿಸಲು ತನಗಿದ್ದಾ ಗುಡಾರವನು II


ಇದಾದ ಮೇಲೆ ಯೆಹೋಶುವನು ಎಲ್ಲ ಇಸ್ರಯೇಲರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.


ನಿಮ್ಮ ಪೂಜಾಸ್ಥಳಗಳನ್ನು ಇಲ್ಲದಂತೆ ಮಾಡುವೆನು. ನೀವು ಸೂರ್ಯನ ಪೂಜೆಗೆ ಇಟ್ಟಿರುವ ಕಂಬಗಳನ್ನು ಕಡಿದು ಹಾಕುವೆನು. ನಿಮ್ಮ ಬೊಂಬೆಗಳ ಬುರುಡೆಗಳ ಮೇಲೆ ನಿಮ್ಮ ಬುರುಡೆಗಳನ್ನು ಬಿಸಾಡುವೆನು; ನಿಮ್ಮ ಬಗ್ಗೆ ಅಸಹ್ಯಪಡುವೆನು.


ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು.


ನನ್ನ ಸೊತ್ತಾದ ಜನತೆ ನನ್ನ ಪಾಲಿಗೆ ಅರಣ್ಯದ ಸಿಂಹದಂತೆ ನನಗೆದುರಾಗಿ ಅದು ಗರ್ಜಿಸಿದೆ, ಎಂದೇ ಅದನ್ನು ಹಗೆಮಾಡಿರುವೆ.


ಸರ್ವೇಶ್ವರ ಜುದೇಯದ ಮೇಲೆ ಆಪಾದನೆ ಹೊರಿಸಿದ್ದಾರೆ. ಯಕೋಬನನ್ನು ಅದರ ನಡತೆಗೆ ತಕ್ಕಂತೆ ದಂಡಿಸುತ್ತಾರೆ. ಅದರ ಕೃತ್ಯಗಳಿಗನುಸಾರವಾಗಿ ಪ್ರತೀಕಾರ ಮಾಡುತ್ತಾರೆ.


ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದರು : “ಮೋಶೆ ಮತ್ತು ಸಮುವೇಲನು ನನ್ನ ಮುಂದೆ ನಿಂತು ವಿಜ್ಞಾಪಿಸಿದರೂ ನಾನು ಈ ಜನರ ಬಗ್ಗೆ ನನ್ನ ಮನಸ್ಸನ್ನು ಬದಲಾಯಿಸೆನು. ಇವರನ್ನು ನನ್ನ ಸಮ್ಮುಖದಿಂದ ತಳ್ಳಿಬಿಡು; ತೊಲಗಿಹೋಗಲಿ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು