Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 7:16 - ಕನ್ನಡ ಸತ್ಯವೇದವು C.L. Bible (BSI)

16 ಅವರು ಅತ್ತಿತ್ತ ತಿರುಗಿಕೊಳ್ಳುತ್ತಾರೆ. ದೇವರ ಕಡೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿಗೆ ಸಮಾನರು. ಸೊಕ್ಕಿನ ನಾಲಿಗೆಯ ನಿಮಿತ್ತ ಅವರ ಮುಖಂಡರು ಹತರಾಗುವರು. ಅವರ ಪತನ ಈಜಿಪ್ಟಿಗೆ ಹಾಸ್ಯಾಸ್ಪದವಾಗುವುದು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಅತ್ತಿತ್ತ ತಿರುಗಿಕೊಳ್ಳುತ್ತಾರೆ, ದೇವರ ಕಡೆಗೆ ತಿರುಗಿಕೊಳ್ಳುವುದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ. ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿಮಿತ್ತ ಖಡ್ಗದಿಂದ ಹತರಾಗಿ ಬೀಳುವರು; ಅವರ ಸೋಲು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅತ್ತಿತ್ತ ತಿರುಗಿಕೊಳ್ಳುತ್ತಾರೆ, ಮೇಲಕ್ಕೆ ಮಾತ್ರ ತಿರುಗಿಕೊಳ್ಳುವದಿಲ್ಲ; ಮೋಸದ ಬಿಲ್ಲಿಗೆ ಸಮಾನರಾಗಿದ್ದಾರೆ; ಅವರ ಮುಖಂಡರು ತಮ್ಮ ನಾಲಿಗೆಯ ಸೊಕ್ಕಿನ ನಿವಿುತ್ತ ಖಡ್ಗಹತರಾಗಿ ಬೀಳುವರು; ಅವರ ಪತನವು ಐಗುಪ್ತದೇಶದ ಹಾಸ್ಯಕ್ಕೆ ಆಸ್ಪದವಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅವರು ದೇವರಲ್ಲದ್ದಕ್ಕೆ ತಿರುಗಿಕೊಂಡರು. ಮೋಸದ ಬಿಲ್ಲಿನಂತೆ ಅವರಾದರು. ಅವರ ನಾಯಕರು ತಮ್ಮ ಶಕ್ತಿಯ ಬಗ್ಗೆ ಹೆಚ್ಚಳಪಟ್ಟರು. ಆದರೆ ಅವರು ಕತ್ತಿಯಲ್ಲಿ ಸಾಯುವರು. ಆಗ ಈಜಿಪ್ಟಿನ ಜನರು ಅವರನ್ನು ನೋಡಿ ನಗಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅವರು ಮಹೋನ್ನತನಾದಾತನ ಕಡೆಗೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿನ ಹಾಗೆ ಇದ್ದಾರೆ. ಅವರ ನಾಯಕರು ನಾಲಿಗೆಯ ಹುಚ್ಚು ಕೂಗಾಟದಿಂದ, ಖಡ್ಗದಿಂದ ಬೀಳುವರು. ಇದೇ ಈಜಿಪ್ಟ್ ದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 7:16
32 ತಿಳಿವುಗಳ ಹೋಲಿಕೆ  

ಅವರು ಸರ್ವೇಶ್ವರಸ್ವಾಮಿಯ ನಾಡಿನಲ್ಲಿ ವಾಸಮಾಡುವುದಿಲ್ಲ. ಎಫ್ರಯಿಮರು ಈಜಿಪ್ಟಿಗೆ ಹಿಂದಿರುಗುವರು. ಅಸ್ಸೀರಿಯದಲ್ಲಿ ಅವರು ತಿನ್ನುವ ಆಹಾರ ಹೊಲಸಾಗುವುದು.


ನಂಬಿಕೆಗೆಟ್ಟ ದ್ರೋಹಿಗಳಾದರು ತಮ್ಮ ಹಿರಿಯರಂತೆ I ಆತನಿಗೆ ಎದುರುಬಿದ್ದರು ಹಿಮ್ಮುಖವಾದ ಬಿಲ್ಲಿನಂತೆ II


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - “ಆಳವೂ ಅಗಲವೂ ಬಹಳ ಹಿಡಿಯುವುದೂ ಆದ ನಿನ್ನ ಅಕ್ಕನ ಪಾತ್ರೆಯಲ್ಲೇ ನೀನೂ ಕುಡಿದು ಹಾಸ್ಯಕ್ಕೂ ಕುಚೋದ್ಯಕ್ಕೂ ಗುರಿಯಾಗುವೆ. ಸಮಾರಿಯಳೆಂಬ ನಿನ್ನ ಅಕ್ಕನು ಕುಡಿದ ಬೆಚ್ಚುಬೆರಗಿನಾ ಕೊಡದಿಂದಲೇ


ನಾಕವನೆ ತಾಕುತಿದೆ ಅವರ ಗರ್ವದ ನುಡಿ I ಜಗದಲಿ ಹರಡುತಿದೆ ಅವರ ದರ್ಪದ ನುಡಿ II


ವಿನಾಶದ ದೇಶವನ್ನು ಅವರು ಬಿಟ್ಟುಹೋಗಬಹುದು. ಆದರೆ ಈಜಿಪ್ಟ್ ಅವರಿಗೆ ಸ್ಮಶಾನವಾಗುವುದು.ಮೋಫ್ ಪಟ್ಟಣದಲ್ಲಿ ಅವರಿಗೆ ಸಮಾಧಿಯಾಗುವುದು. ಅವರ ಬೆಳ್ಳಿಯ ಒಡವೆಗಳು ಮುಳ್ಳುಪೊದೆಗಳ ಪಾಲಾಗುವುವು; ಅವರ ಗುಡಾರಗಳಲ್ಲಿ ಕಳೆಗಳು ಬೆಳೆಯುವುವು.


“ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II


ಜಂಬದ ಹೇಳಿಕೆಗಳನ್ನೂ ದೇವದೂಷಣೆಯ ಮಾತುಗಳನ್ನೂ ಆಡುವುದಕ್ಕೆ ಆ ಮೃಗಕ್ಕೆ ಒಂದು ಬಾಯನ್ನು ಕೊಡಲಾಗಿತ್ತು. ನಲವತ್ತ ಎರಡು ತಿಂಗಳುಗಳವರೆಗೆ ತನ್ನ ಕಾರ್ಯ ಸಾಧಿಸಿಕೊಳ್ಳುವ ಅಧಿಕಾರವನ್ನೂ ಅದಕ್ಕೆ ನೀಡಲಾಗಿತ್ತು.


ಆತನು ಆ ದುರ್ಜನರ ನಡುವೆ ಬಾಳುತ್ತಾ ಅವರ ದುಷ್ಕೃತ್ಯಗಳನ್ನು ಕಂಡು ಕೇಳುತ್ತಿದ್ದಾಗ, ಅವನ ನಿರ್ಮಲ ಹೃದಯ ದಿನೇದಿನೇ ಅತೀವ ವೇದನೆಯನ್ನು ಅನುಭವಿಸುತ್ತಿತ್ತು.


ನಾಲಿಗೆಯೂ ಹಾಗೆಯೇ. ಅದು ಶರೀರದ ಸಣ್ಣ ಅಂಗವಾಗಿದ್ದರೂ ಬಡಾಯಿ ಕೊಚ್ಚುವುದು ಬಹಳ. ಒಂದು ಸಣ್ಣ ಕಿಡಿಯು ದೊಡ್ಡ ಕಾಡನ್ನೇ ಸುಡಬಲ್ಲದು.


ಕಲ್ಲುಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ.


ಜನರು ತಾವಾಡುವ ಪ್ರತಿಯೊಂದು ಜೊಳ್ಳುಮಾತಿಗೂ ತೀರ್ಪಿನ ದಿನ ಲೆಕ್ಕಕೊಡಬೇಕಾಗುವುದು ಎಂಬುದು ನಿಮಗೆ ತಿಳಿದಿರಲಿ.


ಅವರು ನನ್ನ ಕಡೆಯಿಂದ ದೂರಹೋಗುವ ಹಠಹಿಡಿದಿದ್ದಾರೆ; ಅವರು ನೊಗದ ಭಾರವನ್ನು ತಾಳದೆ ಕೂಗಿಕೊಂಡರೂ ಅದನ್ನು ಬಿಚ್ಚುವವರು ಯಾರೂ ಇಲ್ಲ.


“ನನ್ನನ್ನು ತೊರೆದುಬಿಟ್ಟದ್ದರಿಂದ ಅವರು ಹಾಳಾಗಲಿ, ನನಗೆ ದ್ರೋಹವೆಸಗಿದ್ದರಿಂದ ಅವರು ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದಿದ್ದರೂ ಅವರು ನನಗೆ ತಪ್ಪಾಗಿ ನಡೆದುಕೊಂಡಿದ್ದಾರೆ.


ಆದರೆ ಸರ್ವೇಶ್ವರ ಹೇಳುವುದೇನೆಂದರೆ: “ಎಫ್ರಯಿಮೇ, ನಾನು ನಿನ್ನನ್ನು ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದಂತಿದೆ; ಬೇಗನೆ ಮಾಯವಾಗುವ ಇಬ್ಬನಿಯಂತಿದೆ.


ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು.


ಆಗ ಜನರು, “ಬನ್ನಿ, ಈ ಯೆರೆಮೀಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.


ಇಸ್ರಯೇಲಳಿಗೆ ಇಷ್ಟು ದಂಡನೆ ಆದರೂ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ನನ್ನ ಕಡೆಗೆ ಪೂರ್ಣಮನಸ್ಸಿನಿಂದ ತಿರುಗಿಕೊಳ್ಳಲಿಲ್ಲ. ತಿರುಗಿಕೊಂಡಂತೆ ನಟಿಸಿದಳು ಮಾತ್ರ. ಇದು ಸರ್ವೇಶ್ವರನಾದ ನನ್ನ ನುಡಿ.”


ಜೆರುಸಲೇಮ್ ನಗರ ಹಾಳಾಯಿತು. ಜುದೇಯ ನಾಡು ಬಿದ್ದುಹೋಯಿತು. ಜನರ ನಡೆನುಡಿಗಳೆಲ್ಲ ಸ್ವಾಮಿಗೆ ವಿರುದ್ಧವಾದವು. ಸ್ವಾಮಿಯ ಮಹಿಮಾ ಸಾನ್ನಿಧ್ಯಕ್ಕೆ ಪ್ರತೀಕೂಲವಾದವು.


ನೆಲೆಯಾಗಿರಲಿಲ್ಲ ಅವರ ಹೃದಯ ಆತನಲಿ I ಬದ್ಧರಾಗಿರಲಿಲ್ಲ ಆತನ ನಿಬಂಧನೆಗಳಲಿ II


ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ I ಅವುಗಳ ಹಲ್ಲುಗಳೊ ಭರ್ಜಿಬಾಣಗಳಂತಿವೆ I ನಾಲಿಗೆಗಳು ಹದವಾದ ಕತ್ತಿ ಕಠಾರಿಗಳಂತಿವೆ II


ಕ್ಷೌರಗತ್ತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ I ಕಲ್ಪಿಸುವೆಯಾ ದಿನವೆಲ್ಲಾ ನಾಶವಿನಾಶವನೆ? II


ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ I ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ II


ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲಿ I ಗರ್ವ ತುಳುಕುತಿದೆ ಆ ಜನರ ಬಾಯಿಗಳಲಿ II


ಅವನು ಮಹೋನ್ನತ ದೇವರಿಗೆ ವಿರುದ್ಧವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು (ಸಂತರನ್ನು) ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು.


“ಅವರು ನನ್ನ ಬಳಿಗೆ ಬಾರದ ಕಾರಣ, ಇಸ್ರಯೇಲ್ ಈಜಿಪ್ಟಿಗೆ ಹಿಂದಿರುಗುವುದು, ಅಸ್ಸೀರಿಯದ ಆಳ್ವಿಕೆಗೆ ಒಳಗಾಗುವುದು.


“ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ,” ಎನ್ನುತ್ತಾರೆ ಸರ್ವೇಶ್ವರ. “ನೀವು, ‘ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?’ ಎಂದು ಕೇಳುತ್ತೀರೋ?


ದೇವರಿಗೆ ಸೇವೆಮಾಡುವುದು ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು?


ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II


“ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ: ‘ನನ್ನ ರೌದ್ರ ಕೋಪಾಗ್ನಿಯು ಜೆರುಸಲೇಮಿನ ಮೇಲೆ ಹೇಗೆ ಸುರಿಯಿತೋ ಹಾಗೆಯೆ ನೀವು ಈಜಿಪ್ಟಿನಲ್ಲಿ ಕಾಲಿಟ್ಟ ಕೂಡಲೆ ನನ್ನ ಕೋಪಾಗ್ನಿ ನಿಮ್ಮ ಮೇಲೆಯೂ ಸುರಿಯುವುದು. ನೀವು ಅಪವಾದ, ಅಪಹಾಸ್ಯಕ್ಕೂ, ಶಾಪ, ನಿಂದೆ, ದೂಷಣೆಗಳಿಗೂ ಗುರಿಯಾಗುವಿರಿ. ಈ ನಾಡನ್ನು ನೀವು ಮತ್ತೆ ನೋಡಲಾರಿರಿ.’


ಇನ್ನವರು ಸರ್ವೇಶ್ವರಸ್ವಾಮಿಗೆ ನೈವೇದ್ಯವಾಗಿ ದ್ರಾಕ್ಷಾರಸವನ್ನು ಸುರಿಯರು. ಅವರ ಯಜ್ಞಗಳು ಆ ಸ್ವಾಮಿಗೆ ಮೆಚ್ಚುಗೆಯಾಗುವುದಿಲ್ಲ. ಅವರ ಆಹಾರ ಹೆಣದ ಮನೆಯ ಆಹಾರದಂತಿರುವುದು. ಅದನ್ನು ತಿನ್ನುವವರೆಲ್ಲರು ಅಶುದ್ಧರಾಗುವರು. ಅದು ಹೊಟ್ಟೆತುಂಬಲು ಮಾತ್ರ ಸರಿಯೇ ಹೊರತು ದೇವಾಲಯದಲ್ಲಿ ಮಾಡುವ ಅರ್ಪಣೆಗೆ ಸಲ್ಲದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು