Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 6:1 - ಕನ್ನಡ ಸತ್ಯವೇದವು C.L. Bible (BSI)

1 ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: “ಬನ್ನಿ, ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿಸಿದವರು. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ; ಅವರೇ ನಮ್ಮ ಗಾಯಗಳನ್ನು ಕಟ್ಟಿ ಗುಣಪಡಿಸುವರು. ಒಂದೆರಡು ದಿನಗಳ ನಂತರ ಅವರು ನಮ್ಮನ್ನು ಬದುಕಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅವರು, “ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥ ಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅವರು - ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 “ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ. ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು. ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಬನ್ನಿರಿ, ನಾವು ಯೆಹೋವ ದೇವರ ಕಡೆಗೆ ತಿರುಗಿಕೊಳ್ಳೋಣ. ಅವರು ನಮ್ಮನ್ನು ಗಾಯಗೊಳಿಸಿದ್ದಾರೆ, ಅವರೇ ನಮ್ಮನ್ನು ಸ್ವಸ್ಥ ಮಾಡುವರು. ಅವರು ಹೊಡೆದಿದ್ದಾನೆ, ಅವರೇ ನಮ್ಮನ್ನು ಕಟ್ಟುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 6:1
36 ತಿಳಿವುಗಳ ಹೋಲಿಕೆ  

“ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.


ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತನ ಕೈಯೇ.


ಜೀವಕೊಡುವವನು, ತೆಗೆದುಕೊಳ್ಳುವವನು ಆ ಸರ್ವೇಶ್ವರನೇ ಪಾತಾಳಕ್ಕಿಳಿಸುವವನು, ಮೇಲಕ್ಕೆಳೆದುಕೊಳ್ಳುವವನು ಆತನೇ.


ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಃಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು.


ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ. ಆಶ್ರಯಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ.


‘ಇಗೋ, ಸಿಯೋನ್ ಯಾರಿಗೂ ಬೇಡವಾದವಳು, ಭ್ರಷ್ಟಳಾದಳು’ ಎಂದು ಜನರು ನಿನ್ನನ್ನು ಜರೆವುದು ನನಗೆ ಹಿಡಿಸದು ನಿನ್ನನ್ನು ಗುಣಪಡಿಸುವೆನು ನಿನ್ನ ಗಾಯಗಳನ್ನು ವಾಸಿಮಾಡುವೆನು - ಇದು ಸರ್ವೇಶ್ವರನಾದ ನನ್ನ ನುಡಿ.


ದೇಶವಿದೇಶಗಳವರು ಬಂದು ಹೇಳುವರು ಹೀಗೆ : “ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವರ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನು ನಾವು ಹಿಡಿದು ನಡೆವಂತೆ ಆತನ ಪಥವನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ.


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ.


ಸರ್ವೇಶ್ವರ ಹೀಗೆನ್ನುತ್ತಾರೆ: “ಆ ದಿನಗಳಲ್ಲಿ, ಆ ಕಾಲದಲ್ಲಿ ಇಸ್ರಯೇಲರೂ ಯೆಹೂದ್ಯರೂ ಒಟ್ಟಿಗೆ ಹಿಂದಿರುಗಿ ಬರುವರು. ದಾರಿಯುದ್ದಕ್ಕೂ ಅಳುತ್ತಾ ಬಂದು ತಮ್ಮ ದೇವರಾದ ಸರ್ವೇಶ್ವರನನ್ನು ಮರೆಹೋಗುವರು.


ಸರ್ವೇಶ್ವರ : “ಭ್ರಷ್ಟರಾದ ಜನರೇ, ಹಿಂದಿರುಗಿ ಬನ್ನಿ, ನಾನು ನಿಮ್ಮ ಭ್ರಷ್ಟತನವನ್ನು ಪರಿಹರಿಸುವೆನು.”


ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು.


ಈ ಊರಿನವರು ಬಾಬಿಲೋನಿಯರ ವಿರುದ್ಧ ಕದನಕ್ಕೆ ಹೊರಟರೆ ಏನು ಪ್ರಯೋಜನ? ತಮ್ಮ ಹೆಣಗಳಿಂದ ಅವರನ್ನು ತೃಪ್ತಿಪಡಿಸುವರಷ್ಟೆ. ಇವರ ಅಧರ್ಮದ ನಿಮಿತ್ತ ಈ ನಗರಕ್ಕೆ ವಿಮುಖವಾಗಿ, ಕಡುಕೋಪಾವೇಶನಾಗಿ ನಾನೇ ಇವರನ್ನು ಸದೆಬಡಿಯುವೆನು.


ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕ್ಕೆ ಅಡಿಬಂಡೆ I ನಿನ್ನ ಮುಖ ಮರೆಯಾದುದೆ ನಾ ಕಳವಳಗೊಂಡೆ II


ಹೌದು, ಸರ್ವೇಶ್ವರ ಹೀಗೆನ್ನುತ್ತಾರೆ: “ನಿನ್ನ ಗಾಯಗಳು ಗುಣಹೊಂದವು ನಿನ್ನ ಹುಣ್ಣನ್ನು ವಾಸಿಮಾಡಲಾಗದು.


ಆಗ ಬೆಳ್ಳಿಯ ಕವಚಗಳಿಂದ ಕೂಡಿದ ನಿಮ್ಮ ವಿಗ್ರಹಗಳನ್ನೂ ಚಿನ್ನದಿಂದ ಲೇಪಿತವಾದ ನಿಮ್ಮ ಬೊಂಬೆಗಳನ್ನೂ ಬಿಸಾಡುವಿರಿ. ಅವುಗಳನ್ನು ಹೊಲೆಮಾಡಿ ‘ತೊಲಗಿ’ ಎಂದು ಹೇಳುತ್ತಾ ಎಸೆದುಬಿಡುವಿರಿ.


ನಾಚಿಕೆ ಇಲ್ಲದ ಜನಾಂಗದವರೇ, ತೀರ್ಪು ಫಲಿಸುವುದರೊಳಗೆ,


ಆಗ ಸಮುವೇಲನು ಅವರಿಗೆ, “ನೀವು ಪೂರ್ಣಮನಸ್ಸಿನಿಂದ ಸರ್ವೇಶ್ವರನಿಗೆ ಅಭಿಮುಖರಾಗಿ ನಿಮ್ಮ ಮಧ್ಯದಲ್ಲಿರುವ ಅಷ್ಟೋರೆತ್ ಮೊದಲಾದ ಅನ್ಯದೇವತೆಗಳನ್ನು ತೆಗೆದುಹಾಕಿರಿ. ಸರ್ವೇಶ್ವರನ ಮೇಲೆಯೇ ಮನಸ್ಸಿಟ್ಟು ಅವರೊಬ್ಬರಿಗೇ ಸೇವೆಸಲ್ಲಿಸಿರಿ; ಆಗ ಅವರು ನಿಮ್ಮನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವರು,” ಎಂದನು.


ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.


ಕನಿಕರಿಸು ಹೇ ಪ್ರಭು, ನಾನು ಬಲಹೀನನು I ಗುಣಪಡಿಸು ಸಡಿಲವಾದ ಎನ್ನೆಲುಬುಗಳನು II


ದೇವಾ, ಈಡು ಮಾಡಿದೆಯೆನ್ನನು ಕಷ್ಟಸಂಕಟಗಳಿಗೆ I ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ II


ಕೊಲ್ಲುವ ಸಮಯ, ಗುಣಪಡಿಸುವ ಸಮಯ ಕೆಡವಿಬಿಡುವ ಸಮಯ, ಕಟ್ಟಿ ಎಬ್ಬಿಸುವ ಸಮಯ.


ಆ ದಿನದಂದು ಜನರು ತಮ್ಮ ಕೈಯಿಂದ ಕಟ್ಟಿದ ಬಲಿಪೀಠಗಳನ್ನಾಗಲೀ, ಬೆರಳುಗಳಿಂದ ನಿರ್ಮಿಸಿದ ಆಶೇರಾ ದೇವತೆಯ ಸ್ತಂಭಗಳನ್ನಾಗಲೀ, ಧೂಪವೇದಿಕೆಗಳನ್ನಾಗಲೀ ಪೂಜಿಸದೆ ತಮ್ಮ ಸೃಷ್ಟಿಕರ್ತನನ್ನೇ ಲಕ್ಷಿಸಿ, ಇಸ್ರಯೇಲಿನ ಪರಮಪಾವನ ಸ್ವಾಮಿಯ ಕಡೆ ತಿರುಗಿಕೊಳ್ಳುವರು.


ಆದರೂ ಈ ನಗರವನ್ನು ಉದ್ಧಾರಮಾಡಿ, ಸುಧಾರಿಸಿ, ಇದರ ನಿವಾಸಿಗಳನ್ನು ಗುಣಪಡಿಸುವೆನು. ಸಮೃದ್ಧಿಯಾದ ಸೌಭಾಗ್ಯವನ್ನು ಹಾಗೂ ಶಾಂತಿಸಮಾಧಾನವನ್ನು ಇವರಿಗೆ ಅನುಗ್ರಹಿಸುವೆನು.


ಸಿಯೋನಿಗೆ ಅಭಿಮುಖರಾಗಿ, ಮಾರ್ಗವನ್ನು ವಿಚಾರಿಸುತ್ತಾ, ‘ಬನ್ನಿ, ಸರ್ವೇಶ್ವರನನ್ನು ಆಶ್ರಯಿಸಿ, ಎಂದಿಗೂ ಮರೆಯಲಾಗದ ಶಾಶ್ವತ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳೋಣ’ ಎಂದು ಹೇಳುವರು.


ಆತ ನನಗೆ ದಾರಿ ತಪ್ಪಿಸಿರುವನು ತುಂಡರಿಸಿ ದಿಕ್ಕಿಲ್ಲದವನಂತೆ ಮಾಡಿರುವನು.


“ಶತ್ರುಗಳ ಕಡೆಗೆ ಸಿಂಹದಂತೆ ಗರ್ಜಿಸುವ ಸ್ವಾಮಿಯನ್ನು ಆ ಜನರು ಹಿಂಬಾಲಿಸುತ್ತಾರೆ. ಆತ ಆರ್ಭಟಿಸಲು ಅವರ ಮಕ್ಕಳು ನಡುನಡುಗುತ್ತಾ ಬರುತ್ತಾರೆ.


ಆದುದರಿಂದ ಇಸ್ರಯೇಲ್, ನೀನು ದೇವರ ಕಡೆ ತಿರುಗಿಕೋ, ನೀತಿ ಪ್ರೀತಿಗಳಿಗೆ ಅನುಗುಣವಾಗಿ ನಡೆ. ನಿರಂತರವಾಗಿ ದೇವರನ್ನು ನಿರೀಕ್ಷಿಸಿಕೊಂಡಿರು.


ಆದರೆ ತಾನು ಆ ಮನೆಗೆ ಹೊಸದಾಗಿ ಮಣ್ಣು ಮೆತ್ತಿಸಿದ ಮೇಲೆ ಯಾಜಕನು ಬಂದು ನೋಡುವಾಗ ಆ ರೋಗದ ಗುರುತು ಕಾಣಿಸದೆಹೋದರೆ ರೋಗಪರಿಹಾರವಾಗಿ ಆ ಮನೆ ಶುದ್ಧವಾಯಿತೆಂದು ನಿರ್ಣಯಿಸಬೇಕು.


ಅರಸನ ಮತ್ತು ಅವನ ಪದಾಧಿಕಾರಿಗಳ ಪತ್ರವನ್ನು ತೆಗೆದುಕೊಂಡುಹೋದ ದೂತರು ಇಸ್ರಯೇಲ್ ಹಾಗು ಜುದೇಯ ನಾಡುಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಯೇಲರೇ, ಅಬ್ರಹಾಮ್, ಇಸಾಕ್, ಇಸ್ರಯೇಲರ ದೇವರಾದ ಸರ್ವೇಶ್ವರನಿಗೆ ಅಭಿಮುಖರಾಗಿರಿ. ಆಗ ಅವರೂ ನಿಮ್ಮಲ್ಲಿ ಅಸ್ಸೀರಿಯಾದ ಅರಸನ ಕೈಗೆ ಸಿಕ್ಕದೆ ತಪ್ಪಿಸಿಕೊಂಡ ಅಳಿದುಳಿದವರಿಗೆ ಅಭಿಮುಖರಾಗುವರು.


ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ ನಿನ್ನ ಗುಡಾರಗಳಿಂದ ಅನ್ಯಾಯವನು ತೊರೆದೆಯಾದರೆ, ನೀನು ಉದ್ಧಾರವಾಗುವೆ.


ತದನಂತರ ಇಸ್ರಯೇಲಿನವರು ತಮ್ಮ ದೇವರಾದ ಸರ್ವೇಶ್ವರನನ್ನು ಮತ್ತು ಅರಸ ದಾವೀದನನ್ನು ಆಶ್ರಯಿಸುವರು. ಅಂತಿಮ ದಿನಗಳಲ್ಲಿ ಅವರು ಭಯಭಕ್ತಿಯುಳ್ಳವರಾಗಿ ಸರ್ವೇಶ್ವರಸ್ವಾಮಿಯನ್ನೂ ಅವರ ಕೃಪಾಶ್ರಯವನ್ನೂ ಮರೆಹೋಗುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು