Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 4:11 - ಕನ್ನಡ ಸತ್ಯವೇದವು C.L. Bible (BSI)

11 “ಮದ್ಯಪಾನ, ದ್ರಾಕ್ಷಾರಸ - ಇವು ಜನರನ್ನು ಬುದ್ಧಿಹೀನರನ್ನಾಗಿ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ವ್ಯಭಿಚಾರ, ದ್ರಾಕ್ಷಾರಸ ಮತ್ತು ಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ವ್ಯಭಿಚಾರದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 “ಲೈಂಗಿಕಪಾಪ, ಗಡುಸಾದ ಮದ್ಯ ಮತ್ತು ಹೊಸ ದ್ರಾಕ್ಷಾರಸ ಇವುಗಳಿಂದ ವಿಚಾರಪ್ರಜ್ಞೆಯನ್ನು ಕಳೆದುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಮದ್ಯಪಾನ, ದ್ರಾಕ್ಷಾರಸ ಇವು ಜನರನ್ನು ಜ್ಞಾನಹೀನರನ್ನಾಗಿ ಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 4:11
15 ತಿಳಿವುಗಳ ಹೋಲಿಕೆ  

ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.


“ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗರೂಕರಾಗಿರಿ!


ಯಾಜಕರು, ಪ್ರವಾದಿಗಳು ಮದ್ಯಪಾನದಿಂದ ಮತ್ತರಾಗಿದ್ದಾರೆ; ದ್ರಾಕ್ಷಾರಸದಿಂದ ಓಲಾಡುತ್ತಿದ್ದಾರೆ; ಕುಡಿತದಿಂದ ತೂರಾಡುತ್ತಿದ್ದಾರೆ. ದ್ರಾಕ್ಷಾರಸವೇ ಅವರನ್ನು ಮುಳುಗಿಸಿಬಿಟ್ಟಿದೆ. ಹೌದು, ಅವರು ಮದ್ಯದಲ್ಲಿ ತೇಲಾಡುತ್ತಿದ್ದಾರೆ. ದೈವದರ್ಶನವಾಗುತ್ತಿರುವಾಗಲೂ ಅವರು ಓಲಾಡುತ್ತಾರೆ.


ನನ್ನ ಜನರು ಮರದ ತುಂಡನ್ನು ಹಿಡಿದು ಕಣಿ ಕೇಳುತ್ತಾರೆ; ಕೈಯಲ್ಲಿ ಹಿಡಿದ ದೊಣ್ಣೆಯಿಂದ ವಿವೇಕವಾಣಿಯನ್ನು ಪಡೆಯಲೆತ್ನಿಸುತ್ತಾರೆ. ವ್ಯಭಿಚಾರಗುಣ ಅವರನ್ನು ತಪ್ಪುದಾರಿಗೆ ಎಳೆದಿದೆ. ದೇವರ ಸದ್ಭಕ್ತಿಯನ್ನು ತೊರೆದು ಅವರು ಧರ್ಮಭ್ರಷ್ಠರಾಗಿದ್ದಾರೆ.


ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು.


ದಬ್ಬಾಳಿಕೆ ಬುದ್ಧಿವಂತನನ್ನೂ ಹುಚ್ಚನನ್ನಾಗಿಸುತ್ತದೆ; ಲಂಚಕೋರತನ ಅಂತರಂಗವನ್ನೂ ಕೆಡಿಸುತ್ತದೆ.


ವ್ಯಭಿಚಾರಿಯು ಕೇವಲ ಬುದ್ಧಿಶೂನ್ಯನು; ತನ್ನೀ ಕೃತ್ಯದಿಂದ ಸ್ವನಾಶಮಾಡಿಕೊಳ್ಳುವನು.


“ನೀನೂ ನಿನ್ನ ಪುತ್ರರು ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು, ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತ ನಿಯಮ.


ಅಬೀಗೈಲಳು ನಾಬಾಲನ ಬಳಿಗೆ ಬಂದಳು. ಅವನು ತನ್ನ ಮನೆಯಲ್ಲಿ ರಾಜರಂತೆ ಒಂದು ದೊಡ್ಡ ಔತಣವನ್ನು ಮಾಡಿಸಿ, ಬಹಳವಾಗಿ ಕುಡಿದು, ಬಹು ಸಂಭ್ರಮದಿಂದಿದ್ದ ಕಾರಣ ಈಕೆ ಮರುದಿವಸದವರೆಗೆ ಇದರ ವಿಷಯವಾಗಿ ಏನೂ ಹೇಳಲಿಲ್ಲ.


ಕುಡುಕತನ ರಾಜನಿಗೆ ತಕ್ಕುದ್ದಲ್ಲ; ಲೆಮೂವೇಲನೇ ಕೇಳು, ಅದು ರಾಜನಿಗೆ ಯೋಗ್ಯವಲ್ಲ; ಮದ್ಯಪಾನಾಸಕ್ತಿ ಅಧಿಕಾರಿಗಳಿಗೆ ಹಿತವಲ್ಲ.


ಎಫ್ರಯಿಮ್ ಬುದ್ಧಿವಿವೇಕವಿಲ್ಲದ ಪಾರಿವಾಳದಂತೆ; ಅದರ ಜನರು ಈಜಿಪ್ಟನ್ನು ಸಹಾಯಕ್ಕೆ ಕರೆಯುತ್ತಾರೆ. ಅಸ್ಸೀರಿಯದ ಆಶ್ರಯಕ್ಕೆ ಓಡುತ್ತಾರೆ.


“ಸಮಾರ್ಯದ ಪ್ರವಾದಿಗಳ ಅಸಹ್ಯ ಕಾರ್ಯಗಳನ್ನು ನೋಡಿರುವೆನು ಬಾಳ್‍ದೇವತೆಯ ಆವೇಶದಿಂದ ಪ್ರವಾದಿಸಿದರವರು ಹೀಗೆ ಇಸ್ರಯೇಲೆಂಬ ನನ್ನ ಜನರನ್ನು ಮಾರ್ಗ ತಪ್ಪಿಸಿದರು.


ಅವರು ತಮ್ಮ ದೇವರ ಬಳಿಗೆ ಹಿಂದಿರುಗದಂತೆ ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರ ಅವರಲ್ಲಿ ನೆಲೆಗೊಂಡಿದೆ. ಅವರು ಸರ್ವೇಶ್ವರನನ್ನು ಅರಿಯರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು