Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 2:14 - ಕನ್ನಡ ಸತ್ಯವೇದವು C.L. Bible (BSI)

14 ಆದುದರಿಂದ ಇಗೋ, ನಾನು ಅವಳನ್ನು ಪುನಃ ಬೆಂಗಾಡಿಗೆ ಕರೆದೊಯ್ಯುವೆನು. ಹೃದಯಂಗಮವಾಗಿ ಅವಳನ್ನು ಒಲಿಸಿಕೊಂಡು ಮಾತಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 “ಆಹಾ, ನಾನು ಅವಳನ್ನು ಒಲಿಸಿ, ಅಡವಿಗೆ ಕರೆದುಕೊಂಡು ಹೋಗಿ, ಅವಳೊಂದಿಗೆ ಹೃದಯಂಗಮವಾಗಿ ಮಾತನಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಆಹಾ, ನಾನು ಅವಳನ್ನು ಒಲಿಸಿ ಅಡವಿಗೆ ಕರಕೊಂಡು ಹೋಗಿ ಅವಳೊಂದಿಗೆ ಹೃದಯಂಗಮವಾಗಿ ಮಾತಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 “ಆದ್ದರಿಂದ ನಾನು (ಯೆಹೋವನು) ಆಕೆಯೊಂದಿಗೆ ಸರಸ ಸಲ್ಲಾಪವಾಡುವೆನು. ಆಕೆಯನ್ನು ಮರುಭೂಮಿಗೆ ನಡೆಸಿ ಆಕೆಯೊಂದಿಗೆ ನಯನುಡಿಗಳಿಂದ ಮಾತಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಆದ್ದರಿಂದ ನಾನು ಅವಳನ್ನು ಮೋಹಿಸಿ, ಅವಳನ್ನು ಮರುಭೂಮಿಯೊಳಗೆ ಕರೆದುಕೊಂಡು ಬಂದು, ಅವಳ ಸಂಗಡ ಹಿತಕರವಾಗಿ ಮಾತನಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 2:14
38 ತಿಳಿವುಗಳ ಹೋಲಿಕೆ  

ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು.


ಆದರೆ ಸರ್ವೇಶ್ವರ ನಿಮಗೆ ಕೃಪೆತೋರಬೇಕೆಂದು ಕಾದಿರುತ್ತಾರೆ. ನಿಮ್ಮನ್ನು ಕರುಣಿಸಲು ಎದ್ದುನಿಂತಿದ್ದಾರೆ. ಅವರು ನ್ಯಾಯಪರರಾದ ದೇವರು, ಅವರಿಗಾಗಿ ಕಾದಿರುವವರೆಲ್ಲರೂ ಧನ್ಯರು.


ಆಗ ಆ ಮಹಿಳೆ ಅರಣ್ಯದಲ್ಲಿರುವ ತನ್ನ ಸ್ಥಳಕ್ಕೆ ಹಾರಿಹೋಗುವಂತೆ ದೊಡ್ಡ ಗರುಡಪಕ್ಷಿಗಿರುವಂಥ ಎರಡು ರೆಕ್ಕೆಗಳನ್ನು ಆಕೆಗೆ ಕೊಡಲಾಯಿತು. ಅಲ್ಲಿ ಘಟಸರ್ಪದ ಕಣ್ಣಿಗೆ ಬೀಳದೆ ಮೂರುವರೆ ವರ್ಷಗಳ ಕಾಲ ಪೋಷಣೆ ಹೊಂದುವಂತಾಯಿತು.


ಅವನ ಮನಸ್ಸು ಯಕೋಬನ ಮಗಳಾದ ಆ ದೀನಳ ಮೇಲೆಯೇ ತಲ್ಲೀನಗೊಂಡಿತ್ತು. ಆಕೆಯನ್ನು ಮೋಹಿಸಿ ಅವಳ ಮನವೊಲಿಸುವಂಥ ಮಾತುಗಳನ್ನಾಡಿದನು.


ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ.


ಇಲ್ಲವಾದರೆ ಅವಳನ್ನು ನಗ್ನವಾಗಿಸಿ (ಹುಟ್ಟಿದಾಗ ಇದ್ದಂತೆ) ಬೆತ್ತಲೆಯಾಗಿ ನಿಲ್ಲಿಸುವೆನು. ಅವಳನ್ನು ಬೆಂಗಾಡನ್ನಾಗಿ ಮಾಡಿ, ಮರುಭೂಮಿಯಂತೆ ಮಾರ್ಪಡಿಸಿ, ನೀರಡಿಕೆಯಿಂದ ಸಾಯುವಂತೆ ಮಾಡುವೆನು.


“ಆದರೂ ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಮರುಭೂಮಿಗೆ ಕರೆದುತಂದೆ.


ಸರ್ವೇಶ್ವರ ಹೀಗೆನ್ನುತ್ತಾರೆ : “ಇಗೋ ಕೇಳು, ಕಾಲಬರಲಿದೆ. ಆಗ ಜನರು, ‘ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬಿಡಿಸಿ ಬರಮಾಡಿದ ಸರ್ವೇಶ್ವರನ ಜೀವದಾಣೆ’ ಎಂದು ಪ್ರಮಾಣ ಮಾಡುವುದನ್ನು ಬಿಟ್ಟುಬಿಡುವರು.


“ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು : ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ.


ನನ್ನನ್ನು ತುಸು ಎಳೆ, ಓಡೋಣ ನಾವು ಮುಂದಕ್ಕೆ; ಅರಸನಾಗಿರು ನನಗೆ ಕರೆದೊಯ್ಯಿ ನನ್ನನ್ನು ಅಂತಃಪುರಕ್ಕೆ. ಹರ್ಷಿಸೋಣ, ಒಂದಿಗೆ ಆನಂದಿಸೋಣ ಮಧುಪಾನಕ್ಕಿಂತ ನಿನ್ನ ಪ್ರೀತಿ ಸ್ತುತ್ಯಾರ್ಹ ನಿನ್ನನ್ನು ಪ್ರೀತಿಸುವುದು ಎನಿತು ಸಹಜ!


ಅನಂತರ ಆಕೆಯ ಗಂಡನಾದ ಆ ಲೇವಿಯನು ಆಕೆಯನ್ನು ಪ್ರೀತಿಯಿಂದ ಮಾತಾಡಿಸಿ ಮತ್ತೆ ಮನೆಗೆ ಕರೆದು ತರಬೇಕೆಂದು ಒಬ್ಬ ಸೇವಕನನ್ನೂ ಎರಡು ಕತ್ತೆಗಳನ್ನೂ ತೆಗೆದುಕೊಂಡು ಅಲ್ಲಿಗೆ ಹೋದನು. ಆಕೆ ಅವನನ್ನು ತನ್ನ ತೌರುಮನೆಯಲ್ಲಿ ಸೇರಿಸಿಕೊಂಡಳು. ಆಕೆಯ ತಂದೆಯೂ ಅವನನ್ನು ನೋಡಿ ಸಂತೋಷಪಟ್ಟನು.


ಆದರೆ ನನ್ನನ್ನು ಭೂಮಿಯಿಂದ ಮೇಲೇರಿಸಿದಾಗ, ನಾನು ಎಲ್ಲರನ್ನು ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ,” ಎಂದು ನುಡಿದರು.


ಅಂತೆಯೆ, ಕಷ್ಟದಿಂದ ನಿನ್ನನ್ನು ತಪ್ಪಿಸಬೇಕೆಂಬುದು ಇಕ್ಕಟ್ಟಿಲ್ಲದ ಬಯಲಿಗೆ ನಿನ್ನನ್ನು ತರಬೇಕೆಂಬುದು ನಿನ್ನ ಊಟದ ಮೇಜು ಸಮೃದ್ಧಿಯಾಗಿರಬೇಕೆಂಬುದು ದೇವರ ಉದ್ದೇಶವಾಗಿರುವುದು.


“ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನನ್ನ ಜೀವದಾಣೆ, ನಾನು ಶಿಕ್ಷಾಹಸ್ತವನ್ನೆತ್ತಿ, ಭುಜಪರಾಕ್ರಮವನ್ನು ತೋರಿಸಿ, ರೋಷಾಗ್ನಿಯನ್ನು ಸುರಿಸುತ್ತಾ, ನಿಮ್ಮ ಮೇಲೆ ದೊರೆತನಮಾಡುವೆನು;


ಸಿಯೋನ್ ಕುವರಿಯೇ, ಪ್ರಸವವೇದನೆಯಿಂದ ನರಳಾಡು; ಪಟ್ಟಣವನ್ನು ಬಿಟ್ಟು, ಬಯಲಿನಲ್ಲಿ ವಾಸಮಾಡು. ಬಾಬಿಲೋನಿಗೆ ತೆರಳು. ಅಲ್ಲೇ ನಿನಗೆ ಉದ್ಧಾರವಾಗುವುದು. ಅಲ್ಲೇ ನಿನ್ನ ಶತ್ರುಗಳಿಂದ ಸರ್ವೇಶ್ವರ ಬಿಡುಗಡೆ ಮಾಡುವರು.


ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ.


“ಸರ್ವೇಶ್ವರನ ಈ ವಾಣಿಯನ್ನು ಕೇಳು: ‘ನೋಡು, ನಾನು ಕಟ್ಟಿದ್ದನ್ನು ನಾನೇ ಕೆಡವುತ್ತೇನೆ. ನಾನು ನೆಟ್ಟಿದ್ದನ್ನು ನಾನೇ ಕಿತ್ತುಹಾಕುತ್ತೇನೆ. ಹೌದು ಜಗದಲ್ಲೆಲ್ಲ ಹಾಗೆ ಮಾಡುತ್ತೇನೆ.


ಅದರಲ್ಲಿನ ಎರಕದ ಪ್ರತಿಮೆಗಳನ್ನು ಪುಡಿಪುಡಿ ಮಾಡುವೆನು. ಅದರ ಸಂಪಾದನೆಯೆಲ್ಲ ಅಗ್ನಿಗೆ ಆಹುತಿಯಾಗುವುದು. ಅದರ ವಿಗ್ರಹಗಳನ್ನೆಲ್ಲ ಹಾಳುಮಾಡುವೆನು. ಅವು ಸೂಳೆತನದಿಂದ ಸಂಪಾದನೆಯಾದುವು, ಸೂಳೆತನದ ಸಂಪಾದನೆಯಾಗಿಯೇ ಪರರ ಪಾಲಾಗುವುದು,” ಎಂದು ಸರ್ವೇಶ್ವರ ಹೇಳುತ್ತಾರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು