Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹೋಶೇಯ 10:5 - ಕನ್ನಡ ಸತ್ಯವೇದವು C.L. Bible (BSI)

5 ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ಭಯಪಡುವರು. ಅದರ ಭಕ್ತ ಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ನಂದಿಹೋಯಿತು ಎಂದು ಪೂಜಾರಿಗಳು ಅದಕ್ಕಾಗಿ ನಡುಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಸಮಾರ್ಯದ ನಿವಾಸಿಗಳು ಬೇತಾವೆನಿನ ಬಸವನ ವಿಷಯದಲ್ಲಿ ದಿಗಿಲುಪಡುವರು; ಅದರ ಭಕ್ತಜನರು ಅದಕ್ಕಾಗಿ ಎದೆಬಡಿದುಕೊಳ್ಳುವರು; ಅದರ ಮಹಿಮೆಯು ಅದರಿಂದ ತೊಲಗಿತಲ್ಲಾ ಎಂದು ಅದರ ಪೂಜಾರಿಗಳು ಅದಕ್ಕಾಗಿ ನಡುಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಸಮಾರ್ಯದ ಜನರು ಬೇತಾವೆನಿನಲ್ಲಿ ಬಸವನನ್ನು ಆರಾಧಿಸುತ್ತಾರೆ. ಆ ಜನರು ನಿಜವಾಗಿಯೂ ಅಳುವರು. ಅವರ ಪೂಜಾರಿಗಳೂ ಅಳುವರು, ಯಾಕೆಂದರೆ ಅವರ ಸುಂದರವಾದ ವಿಗ್ರಹವು ಇಲ್ಲವಾಗುವದು. ಅದು ಒಯ್ಯಲ್ಪಡುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಬೇತಾವೆನಿನ ಬಸವ ವಿಗ್ರಹಕ್ಕೆ ಸಮಾರ್ಯದ ನಿವಾಸಿಗಳು ಭಯಪಡುವರು. ಅದರಲ್ಲಿ ಆನಂದಿಸಿದ ಜನರು ಅದಕ್ಕೋಸ್ಕರ ಗೋಳಾಡುವರು. ಅದರ ಯಾಜಕರು ನಡುಗುವರು. ಏಕೆಂದರೆ ಅದರ ವೈಭವವು ಅದರಿಂದ ಕುಂದಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹೋಶೇಯ 10:5
20 ತಿಳಿವುಗಳ ಹೋಲಿಕೆ  

ಎಫ್ರಯಿಮರ ಮಹಿಮೆ ಪಕ್ಷಿಯಂತೆ ಹಾರಿಹೋಗುವುದು. ಅಲ್ಲಿ ಯಾರೂ ಮಕ್ಕಳನ್ನು ಹೆರುವುದಿಲ್ಲ; ಯಾರೂ ಗರ್ಭಿಣಿಯಾಗುವುದಿಲ್ಲ; ಯಾರೂ ಗರ್ಭ ಧರಿಸುವುದಿಲ್ಲ.


ಗಿಬ್ಯದಲ್ಲಿ ತುತೂರಿಯನ್ನು ಊದಿರಿ, ರಮಾದಲ್ಲಿ ಕೊಂಬನ್ನು ಮೊಳಗಿಸಿರಿ; ಬೇತಾವೆನಿನಲ್ಲಿ ಕಾಳಗದ ಕರೆನೀಡಿರಿ. ಬೆನ್ಯಾಮಿನೇ, ನಿನ್ನನ್ನು ಬೆನ್ನಟ್ಟಿಬರುತ್ತಿರುವವರನ್ನು ನೋಡು.


“ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆ ಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣಮಾಡಬೇಡಿ.


ಅದಲ್ಲದೆ, ಜುದೇಯ ಪ್ರಾಂತ್ಯದ ಪಟ್ಟಣಗಳಲ್ಲೂ ಜೆರುಸಲೇಮಿನ ಸುತ್ತಣ ಪ್ರದೇಶದಲ್ಲೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳ್ ದೇವತೆಗೂ ಸೂರ್ಯ ಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಾರತಿಯೆತ್ತುವುದಕ್ಕಾಗಿ ಜುದೇಯದ ರಾಜರಿಂದ ನೇಮಿತರಾಗಿದ್ದ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.


ಈಗ ಎಫ್ರಯಿಮರ ಪಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವರು ಬೆಳ್ಳಿಬಂಗಾರವನ್ನು ಕರಗಿಸಿ ಇಷ್ಟಬಂದಂತೆ ಬೊಂಬೆಗಳನ್ನು ಮಾಡಿಕೊಂಡಿದ್ದಾರೆ. ಅವೆಲ್ಲವು ಶಿಲ್ಪಿಗಳ ಕೈಕೆಲಸವೇ ಹೊರತು ಮತ್ತೇನು ಅಲ್ಲ. ಇಂಥ ವಿಗ್ರಹಗಳನ್ನು ಪೂಜೆಗಾಗಿ ಪ್ರತಿಷ್ಠಾಪನೆಮಾಡುತ್ತಾರೆ. ಬುದ್ಧಿಜೀವಿಗಳಾದ ಇವರು ಬಸವನಿಗೆ ಮುದ್ದಿಡುತ್ತಾರೆ.


ಇದರಿಂದಾಗಿ ನಮ್ಮ ಕಸಬಿಗೇ ಕೆಟ್ಟ ಹೆಸರು ಬರುವ ಅಪಾಯವಿದೆ. ಅಷ್ಟೇ ಏಕೆ, ಅರ್ತೆಮೀ ಮಹಾದೇವಿಯ ಗುಡಿ ಹೇಳಹೆಸರಿಲ್ಲದಂತಾಗುವ ಸಂಭವವಿದೆ. ಇಡೀ ಏಷ್ಯದಲ್ಲೂ ಜಗತ್ತಿನ ಎಲ್ಲೆಲ್ಲೂ ಪೂಜಿಸಲಾಗುವ ಆ ದೇವತೆಯ ವೈಭವ ಅಳಿದುಹೋಗುವ ಅಪಾಯವಿದೆ,” ಎಂದನು.


“ಜುದೇಯ ನಾಡನ್ನೂ ಜೆರುಸಲೇಮಿನ ನಿವಾಸಿಗಳೆಲ್ಲರನ್ನೂ ಕೈಯೆತ್ತಿ ಸದೆಬಡಿಯುವೆನು; ಬಾಳನ ಪೂಜೆಪುರಸ್ಕಾರಗಳ ಗುರುತೂ ಅಲ್ಲಿ ಇಲ್ಲದಂತೆ ಮಾಡುವೆನು. ಅವನ ಪೂಜಾರಿಗಳನ್ನು ನಿರ್ನಾಮಗೊಳಿಸುವೆನು;


ತಾವೇ ಏರ್ಪಡಿಸಿದ್ದ ಪೂಜಾಸ್ಥಳಗಳಿಗಾಗಿ ಹಾಗೂ ಅಜದೇವತೆ, ಹೋರಿಕರುಗಳ ಮೂರ್ತಿಪೂಜೆಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿಕೊಂಡಿದ್ದರು. ಆದುದರಿಂದ ಅವರು ಗೋಮಾಳಗಳಿದ್ದ ತಮ್ಮ ಸೊತ್ತುಗಳನ್ನು ಬಿಟ್ಟು ಜುದೇಯನಾಡಿಗೂ ಜೆರುಸಲೇಮಿಗೂ ಬಂದರು.


ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಮೀರಿ, ಎರಡು ಎರಕದ ಹೋರಿಕರುಗಳ ಮೂರ್ತಿಗಳನ್ನು ಮಾಡಿಕೊಂಡರು; ಅಶೇರ ವಿಗ್ರಹಸ್ಥಂಭಗಳನ್ನು ನಿಲ್ಲಿಸಿಕೊಂಡರು; ಆಕಾಶಸೈನ್ಯ ಹಾಗು ಬಾಳ್ ದೇವತೆಗಳನ್ನು ಪೂಜಿಸಿದರು;


ಆದರೂ ಅವನು ಇಸ್ರಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗ ಯಾರೊಬ್ಬಾಮನ ಮಾರ್ಗವನ್ನು ಕೈಬಿಡದೆ, ಬೇತೇಲ್, ದಾನ್ ಎಂಬ ಊರುಗಳಲ್ಲಿದ್ದ ಚಿನ್ನದ ಹೋರಿಕರುಗಳನ್ನು ಪೂಜಿಸುತ್ತಿದ್ದನು.


ಅವನು, “ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ, ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವೇ ನನ್ನನ್ನು ಕೇಳುವುದು ಹೇಗೆ?” ಎಂದನು.


ಯೆಹೋಶುವನು ಕೆಲವು ಜನರನ್ನು ಕರೆದು, “ನೀವು ಬೇತೇಲಿನ ಪೂರ್ವಕ್ಕೂ ಬೇತಾವೆನಿನ ಸಮೀಪದಲ್ಲೂ ಇರುವ ‘ಆಯಿ’ ಎಂಬ ಪ್ರಾಂತ್ಯಕ್ಕೆ ಹೋಗಿ ಬೇಹುನೋಡಿ ಬನ್ನಿ,” ಎಂದು ಹೇಳಿ ಅವರನ್ನು ಜೆರಿಕೋವಿನಿಂದ ಕಳಿಸಿದನು. ಅವರು ಹೋಗಿ ಆಯಿ ಎಂಬ ಊರನ್ನು ಸಂಚರಿಸಿ ಬೇಹು ನೋಡಿ ಹಿಂದಿರುಗಿ ಬಂದರು.


ಈಗ ನೀವು ದೊಡ್ಡ ಗುಂಪಾಗಿ ಇರುವುದರಿಂದ ಹಾಗು ಯಾರೊಬ್ಬಾಮನು ನಿಮಗೆ ದೇವರುಗಳೆಂದು ಮಾಡಿಕೊಟ್ಟ ಬಂಗಾರದ ಹೋರಿಕರುಗಳ ಮೂರ್ತಿಗಳು ನಿಮ್ಮಲ್ಲಿರುವುದರಿಂದ, ದಾವೀದನ ಸಂತಾನದವರ ಕೈಯಲ್ಲಿರುವ ಸರ್ವೇಶ್ವರನ ರಾಜ್ಯಕ್ಕೆ ವಿರುದ್ಧ ದಂಗೆಯೆದ್ದು ಗೆಲ್ಲಬಹುದೆಂದು ನೆನಸುತ್ತೀರೋ?


ಆ ಬೊಂಬೆಗಳೆಲ್ಲ ಬಗ್ಗಿ ಕುಗ್ಗಿಹೋಗಿವೆ ಭಾರವನ್ನು ನೀಗಿಸಲು ಅವು ನಿಶ್ಯಕ್ತವಾಗಿವೆ ತಾವೆ ಸೆರೆಮನೆ ಸೇರಿಹೋಗಿವೆ.


ಇಸ್ರಯೇಲ್, ಹರ್ಷಿಸದಿರು; ಇತರ ರಾಷ್ಟ್ರಗಳೊಡನೆ ಆನಂದಿಸದಿರು. ನಿನ್ನ ದೇವರನ್ನು ತೊರೆದು ವ್ಯಭಿಚಾರ ಮಾಡಿರುವೆ. ಇತರರ ಕಣಗಳಿಂದ ದೊರಕುವ ಕಾಳು ನಿನ್ನ ವ್ಯಭಿಚಾರದ ಸಂಭಾವನೆಯೆಂದು ಹಂಬಲಿಸಿರುವೆ.


ಇಸ್ರಯೇಲರ ಪಾಪಕೃತ್ಯಗಳಿಗಾಗಿ ಅವರನ್ನು ದಂಡಿಸುವೆನು. ಬೇತೇಲಿನ ಯಜ್ಞವೇದಿಗಳನ್ನು ಚೂರುಚೂರು ಮಾಡುವೆನು. ಆ ಯಜ್ಞವೇದಿಯ ಮೂಲೆಕೊಂಬುಗಳನ್ನು ಕತ್ತರಿಸಿ ಬೀದಿಪಾಲಾಗಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು