Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹಬಕ್ಕೂಕ 3:9 - ಕನ್ನಡ ಸತ್ಯವೇದವು C.L. Bible (BSI)

9 ತೆಗೆದಿಟ್ಟೆ ಬಿಲ್ಲನು ತೋಳಿನಿಂದ ಹೊರಡಿಸಿದೆ ಬಾಣಗಳನು ಅದರಿಂದ ಸೀಳಿರುವೆ ಭೂಮಿಯನು ನದಿಗಳಿಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ. ಆಹಾ, ನಿನ್ನ ತೋಳ್ಬಲದಿಂದ ಪ್ರಯೋಗಿಸಿದ ಬಾಣಗಳ ಬಲವು ಜೀವಬುಗ್ಗೆಯನ್ನು ಭೂಮಿಯೊಳಗಿನಿಂದ ಹರಿದು ಬರುವಂತೆ ಮಾಡಿತು. ಸೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ, (ಆಹಾ, ನಿನ್ನ ವಾಗ್ಬಾಣಗಳು ನಿಶ್ಚಿತ!) ಸೆಲಾ. ಭೂವಿುಯನ್ನು ನದಿಗಳಿಂದ ಭೇದಿಸಿಬಿಡುತ್ತೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಆದಾಗ್ಯೂ ನೀನು ನಿನ್ನ ಮೇಘದ ಬಿಲ್ಲನ್ನು ತೋರಿಸಿದೆ. ಈ ಲೋಕದ ಮನುಷ್ಯರೊಂದಿಗೆ ಅದು ನಿನ್ನ ಒಡಂಬಡಿಕೆಯ ಸಾಕ್ಷಿ. ಭೂಮಿಯು ನದಿಯನ್ನು ಇಬ್ಭಾಗವಾಗಿ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಿನ್ನ ಬಿಲ್ಲನ್ನು ಹೊರ ತೆಗೆದಿ, ಅನೇಕ ಬಾಣಗಳಿಗಾಗಿ ಕರೆ ಕೊಟ್ಟಿದ್ದಿ, ಭೂಮಿಯನ್ನು ನದಿಗಳಿಂದ ಸೀಳಿಬಿಡುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹಬಕ್ಕೂಕ 3:9
22 ತಿಳಿವುಗಳ ಹೋಲಿಕೆ  

ಬಂಡೆಯನಾತ ಸೀಳಲು ನೀರು ಹರಿದು ಬಂದಿತು I ನಿರ್ಜಲ ಪ್ರದೇಶದಲದು ನದಿಯಾಗಿ ಹರಿಯಿತು II


ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ.


ಬಿಲ್ಲುಹಿಡಿದು ಬಂದ ಆತ ವೈರಿಯಂತೆ ಬಲಗೈಯೆತ್ತಿ ನಿಂತ ವಿರೋಧಿಯಂತೆ, ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.


ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆ ಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.


ಬೇಡುತಾ ನಿನ್ನ ಕಡೆಗೆ ಕೈಚಾಚಿದೆ I ನಿನಗಾಗಿ ನನ್ನಾತ್ಮ ತವಕಪಡುತ್ತಿದೆ II


‘ಉಪದ್ರವಗಳನು ಬರಮಾಡುವೆನು ಒಂದರ ಮೇಲೊಂದಾಗಿ ಬಿಲ್ಲುಬಾಣಗಳನು ಪ್ರಯೋಗಿಸುವೆನು ಅವರಿಗೆ ವಿರುದ್ಧವಾಗಿ.


ಕೈಯೆತ್ತಿ ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಬಂಡೆಯನ್ನು ಎರಡು ಸಾರಿ ಹೊಡೆದನು. ನೀರು ಪ್ರವಾಹವಾಗಿ ಹೊರಟಿತು. ಜನಸಮೂಹದವರೂ ಅವರ ಜಾನುವಾರಗಳೂ ಕುಡಿದರು.


ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು.


ಹಾರಿ ಓಡುವ ನಿನ್ನ ಬಾಣಗಳ ಬೆಳಕಿಗೆ ಥಳಥಳಿಸುವ ನಿನ್ನ ಈಟಿಯ ಹೊಳಪಿಗೆ ಸೂರ್ಯಚಂದ್ರ ಅಡಗುತ್ತವೆ ಗೂಡಿನೊಳಗೆ.


ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು