Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹಬಕ್ಕೂಕ 3:6 - ಕನ್ನಡ ಸತ್ಯವೇದವು C.L. Bible (BSI)

6 ಕಂಪಿಸುತ್ತದೆ ಭೂಮಿ ಆತ ನಿಂತಾಗ ಅದರುತ್ತದೆ ಲೋಕ ಆತ ದಿಟ್ಟಿಸಿದಾಗ ಸೀಳಿಹೋಗುತ್ತವೆ ಪುರಾತನಪರ್ವತಗಳು ಕುಸಿದುಬೀಳುತ್ತವೆ ಸನಾತನ ಗಿರಿಗಳು ಅನಾದಿಯಿಂದ ಹಾಗೆಯೆ ಆತನ ಆಗಮನಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆತನು ನಿಂತುಕೊಳ್ಳಲು ಭೂಮಿಯು ಅಳೆದನು. ಆತನು ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಶಿಖರಗಳು ಕುಸಿದು ಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆತನು ನಿಂತುಕೊಳ್ಳಲು ಭೂವಿುಯು ಕಂಪಿಸುತ್ತದೆ; ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನ ಪರ್ವತಗಳು ಸೀಳಿಹೋಗುತ್ತವೆ; ಸನಾತನ ಗಿರಿಗಳು ಕುಸಿದುಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಯೆಹೋವನು ನಿಂತು ಪ್ರಪಂಚದ ನ್ಯಾಯತೀರಿಸಿದನು. ಎಲ್ಲಾ ಜನಾಂಗಗಳ ಜನರ ಕಡೆಗೆ ನೋಡಿದನು. ಅವರು ಭಯದಿಂದ ನಡುಗಿದರು. ತಲಾಂತರಗಳಿಂದ ಪರ್ವತಗಳು ಸ್ಥಿರವಾಗಿ ನಿಂತಿದ್ದವು. ಆದರೆ ಅದೇ ಪರ್ವತಗಳು ತುಂಡುತುಂಡಾಗಿ ಬಿದ್ದವು. ಪುರಾತನ ಕಾಲದ ಬೆಟ್ಟಗಳು ಬಿದ್ದುಹೋದವು. ಹಾಗೆ ಮಾಡಲು ದೇವರು ಯಾವಾಗಲೂ ಶಕ್ತನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವರು ನಿಂತುಕೊಂಡು ಭೂಮಿಯನ್ನು ನಡುಗಿಸಿದರು. ಅವರು ನೋಡಿ ಜನಾಂಗಗಳನ್ನು ನಡುಗುವಂತೆ ಮಾಡಿದರು. ಪುರಾತನ ಪರ್ವತಗಳು ಸೀಳಿಹೋದವು. ಹಳೆಯ ಕಾಲದ ಗುಡ್ಡಗಳು ಬಿದ್ದು ಹೋದವು. ಅವರ ಮಾರ್ಗಗಳು ನಿತ್ಯವಾದವುಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹಬಕ್ಕೂಕ 3:6
35 ತಿಳಿವುಗಳ ಹೋಲಿಕೆ  

ಪ್ರಾಚೀನ ಪರ್ವತಗಳಿಗಿ0ತ, ಚಿರಸ್ಥಾಯಿ ಗುಡ್ಡಗಳಿಗಿಂತ ಉತ್ತಮೋತ್ತಮ ನಿನ್ನ ತಂದೆಯಿಂದ ಬರುವ ಆಶೀರ್ವಾದ. ಇಳಿದು ಬರಲೀ ವರದಾನಗಳು ಜೋಸೆಫನ ಮೇಲೆ ಸೋದರರಿಂದ ಬೇರ್ಪಟ್ಟವನ ಶಿರಸ್ಸಿನ ಮೇಲೆ.


ಆತನೆದುರು ಅದರುತ್ತವೆ ಬೆಟ್ಟಗಳು ಕರಗುತ್ತವೆ ಗುಡ್ಡಗಳು. ಆತನ ದರ್ಶನಕೆ ಕಂಪಿಸುತ್ತದೆ ಭೂಗೋಳವು ತಲ್ಲಣಿಸುತ್ತದೆ ಲೋಕ ಲೋಕನಿವಾಸಿಗಳೆಲ್ಲವು.


ಪುರಾತನ ಬೆಟ್ಟಗಳಿಂದ ಒದಗುವ ಉತ್ಪನ್ನಗಳಿಂದ ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದ.


ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ.


ಆತನಲ್ಲಿ ಭಯಭಕ್ತಿಯುಳ್ಳವರಿಗೆ I ಆತನ ಪ್ರೀತಿ ತಲತಲಾಂತರದವರೆಗೆ II


ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ.


ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.


ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು ಹರಿಯುತ್ತವೆ ಆಗಸದಿಂದ ಪ್ರವಾಹಗಳು ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.


ಸಿಂಹವು ತಿರುಗಾಡುತ್ತಾ ಕಾಡುಮೃಗಗಳನ್ನು ಕಬಳಿಸುತ್ತದೆ. ಪ್ರಾಯದ ಸಿಂಹವು ಓಡಾಡುತ್ತಾ ಸುರಕ್ಷಣೆಯಿಲ್ಲದ ಕುರಿಮಂದೆಗಳನ್ನು ಸೀಳಿಹಾಕುತ್ತದೆ. ಅಂತೆಯೇ ಯಕೋಬನ ಅಳಿದುಳಿದ ಜನರು ದೇಶವಿದೇಶಗಳ ಹಲವಾರು ರಾಷ್ಟ್ರಗಳ ನಡುವೆ ನಾಶಕರವಾಗಿರುವರು.


ನುಸಿ ಅವರನ್ನು ತಿಂದುಹಾಕುವುದು ಬಟ್ಟೆಯಂತೆ ಹುಳು ಅವರನ್ನು ಮೆದ್ದುಬಿಡುವುದು ಉಣ್ಣೆಯಂತೆ. ನಾ ನೀಡುವ ಮುಕ್ತಿಯೋ ನಿಲ್ಲುವುದು ಶಾಶ್ವತವಾಗಿ ನಾ ಕೊಡುವ ವಿಮೋಚನೆ ಸದಾ ಇರುವುದು ನೆಲೆಯಾಗಿ.”


ಆಕಾಶಮಂಡಲವನು ನೋಡಿ ಕಣ್ಣೆತ್ತಿ ಭೂಮಂಡಲದತ್ತ ನೋಡಿ ಕೆಳಗೆ ದಿಟ್ಟಿಸಿ. ಆಕಾಶ ಚದರಿಹೋಗುವುದು ಹೊಗೆಯಂತೆ ಭೂಮಿ ಹರಿದುಹೋಗುವುದು ಬಟ್ಟೆಯಂತೆ ಸಾಯುವರು ಭೂನಿವಾಸಿಗಳು ಅದರಂತೆ. ನಾ ಕೊಡುವ ವಿಮೋಚನೆಯೋ ನಿಲ್ಲುವುದು ಶಾಶ್ವತವಾಗಿ ನಾ ನೀಡುವ ಮುಕ್ತಿಯೋ ಅಳಿದುಹೋಗದು ಭಂಗವಾಗಿ.


ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II


ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ I ಭೂದೇಶಗಳು ಆಗುವುದಕೆ ಮೊದಲಿಂದ I ನೀನೆಮಗೆ ದೇವರು ಯುಗಯುಗಗಳಿಂದ II


ಆದರೂ ದೇವನಾರಿಸಿದ ಗಿರಿಯನು I ಆತ ಬಯಸಿದ ಆ ಚಿರ ನಿವಾಸವನು I ನೀ ಓರೆಗಣ್ಣಿಂದ ಕಾಣುವೆಯೇನು? I ಎಲೈ ಶಿಖರೋನ್ನತ ಪರ್ವತವೇ, ಪೇಳು II


ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿ ಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.


ಇಸ್ರಯೇಲ್ ದೇವರಾದ ಸರ್ವೇಶ್ವರ ಅವರ ಪರವಾಗಿ ಯುದ್ಧಮಾಡಿದ್ದರಿಂದ ಯೆಹೋಶುವನು ಈ ಎಲ್ಲಾ ರಾಜರನ್ನೂ ರಾಜ್ಯಗಳನ್ನೂ ಏಕಕಾಲದಲ್ಲಿ ವಶಮಾಡಿಕೊಂಡನು.


ಪರಾತ್ಪರ ದೇವರು ಜನಾಂಗಗಳನು ಬೇರೆಬೇರೆಮಾಡಿದಾಗ, ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ, ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.


ಆ ಎತ್ತಿನಿಂದ ತಿವಿಸಿಕೊಂಡು ಸತ್ತವನು ಹುಡುಗನಾಗಿದ್ದರೂ ಹುಡುಗಿಯಾಗಿದ್ದರೂ ಇದೇ ನಿಯಮಕ್ಕನುಸಾರ ತೀರ್ಮಾನಿಸಬೇಕು.


ನಿನ್ನ ಸ್ವಂತ ನಾಡಾದ ಆ ಬೆಟ್ಟದ ಸೀಮೆಗೆ ನೀನವರನ್ನು ತಂದು ನೆಲೆಗೊಳಿಸುವೆ. ನಿನ್ನ ನಿವಾಸಕ್ಕಾಗಿ ನೀನಾರಿಸಿಕೊಂಡಾ ಸ್ಥಳಕ್ಕೆ ನೀ ಸಿದ್ಧಪಡಿಸಿಕೊಂಡಿರುವಾ ಪವಿತ್ರಾಲಯಕ್ಕೆ ಹೇ ಸರ್ವೇಶ್ವರಾ, ನೀನವರನ್ನು ಬರಮಾಡುವೆ.


ಅವರು ಗಾಳಿಗೆ ತೂರಿಹೋದ ಹುಲ್ಲಾದುದು ಎಷ್ಟು ಸಲ? ಬಿರುಗಾಳಿ ಕೊಚ್ಚಿಕೊಂಡುಹೋದ ಹೊಟ್ಟಾದುದು ಎಷ್ಟು ಸಲ?


ಬಿರುಗಾಳಿಗೆ ತರಗೆಲೆಯಂತೆ ತೂರಿಹೋಗಲಿ I ಪ್ರಭುವಿನ ದೂತನವರನು ಬೆನ್ನಟ್ಟಿ ಹೋಗಲಿ II


ಸರ್ವೇಶ್ವರಾ, ನನ್ನ ದೇವರೇ, ಪರಮಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ.


ಇದನ್ನು ಕೇಳಿ ನಡುಗುತ್ತಿರುವುವು ಜನಾಂಗಗಳು ಪ್ರಸವವೇದನೆ ಪಡುತ್ತಿರುವರು ಫಿಲಿಷ್ಟಿಯರು.


ಕಳವಳಗೊಂಡರು ಎದೋಮ್ಯರ ಕುಲನಾಯಕರು ಗಡಗಡನೆ ನಡುಗುತ್ತಿಹರು ಮೋವಾಬ್ಯರ ಮುಖಂಡರು. ಕರಗಿ ನೀರಾಗಿ ಹೋದರು ಕಾನಾನ್ ನಾಡಿನವರು.


ಸೀನಾಯಿ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರ ಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದುಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು.


ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.


ಸಾರ್ವಭೌಮನಾದ ಪ್ರಭುವಿನ ಮುಂದೆ I ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ II


ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು