Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹಬಕ್ಕೂಕ 1:11 - ಕನ್ನಡ ಸತ್ಯವೇದವು C.L. Bible (BSI)

11 ಬಿರುಗಾಳಿಯಂತೆ ಬಂದು ಮಾಯವಾಗುವವರು ಅವರು; ಸ್ವಂತ ಶಕ್ತಿಯೇ ದೈವ ಎಂದೆಣಿಸುವಂಥ ಅಪರಾಧಿಗಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಬಿರುಗಾಳಿಯಂತೆ ಬಂದು ಮಾಯವಾಗುವರು. ತಮ್ಮ ಸ್ವಂತ ಬಲವೇ ದೇವರು ಎಂದು ಭಾವಿಸಿ ಅಹಂಕಾರದಿಂದ ದೇವರನ್ನು ತಾತ್ಸಾರಮಾಡಿ ಅಪರಾಧಿಗಳಾಗಿ ದೈವಕೋಪಕ್ಕೆ ಗುರಿಯಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಕೂಡಲೆ ಬಿರುಗಾಳಿಯಂತೆ ಬೀಸುತ್ತಾ ಹಾದುಹೋಗುವರು; ಸ್ವಬಲವೇ ದೇವರು ಎನ್ನುವ ಅಪರಾಧಕ್ಕೆ ಒಳಗಾಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆ ಬಳಿಕ ಅವರು ಗಾಳಿಯಂತೆ ಅಲ್ಲಿಂದ ಬೇರೆ ಸ್ಥಳಗಳ ಮೇಲೆ ದಾಳಿಮಾಡಲು ಹೊರಟುಹೋಗುವರು. ಬಾಬಿಲೋನಿನವರು ಆರಾಧಿಸುವ ಒಂದೇ ವಿಷಯ ಯಾವದೆಂದರೆ ಅವರ ಸ್ವಂತ ಶಕ್ತಿಯನ್ನೇ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಬಿರುಗಾಳಿಯಂತೆ ಕೊಚ್ಚಿಕೊಳ್ಳುತ್ತಾ ಮುಂದೆ ಸಾಗುವರು. ಅಪರಾಧಿ ಜನರವರು. ಅವರ ಸ್ವಂತ ಬಲ, ಅವರ ದೇವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹಬಕ್ಕೂಕ 1:11
10 ತಿಳಿವುಗಳ ಹೋಲಿಕೆ  

ಹಾಗೆ ಅವರ ಎದೆ ಗರ್ವದಿಂದ ಉಬ್ಬಿಹೋಯಿತು. ಮನಸ್ಸಿಗೆ ಸೊಕ್ಕೇರಿಹೋಯಿತು. ಅವರನ್ನೂ ರಾಜಾಸ್ಥಾನದಿಂದ ತಳ್ಳಲಾಯಿತು. ಮಾನ ಕಳೆದುಹೋಯಿತು.


“ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.”


ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ.


ಸಮೃದ್ಧಿಯಾಗಿವೆ ಕಳ್ಳಕಾಕರ ಗುಡಾರಗಳು ಸುರಕ್ಷಿತವಾಗಿರುವರು ದೇವರನ್ನೆ ಕೆರಳಿಸುವವರು ಅಂಗೈಯಲ್ಲಿರುವುದೇ ಅವರಿಗೆ ದೇವರು!


ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತುಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಕ್ಷೇಪಗಳನ್ನು ಸೂರೆಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿಬಿಟ್ಟಿದ್ದೇನೆ.


ಜನರ ಹೆಣಗಳು ನೆಲದ ಮೇಲೆ ಬಿದ್ದು ಗೊಬ್ಬರವಾಗುವುವು ಅವು ಹೊಲ ಕೊಯ್ಯುವವನ ಹಿಂದೆ ಯಾರೂ ಕೂಡಿಸದೆ ಬಿದ್ದಿರುವ ಅರಿಗಳಂತಿರುವುವು - ಈ ಮಾತುಗಳನ್ನು ಸಾರುವಂತೆ ಸರ್ವೇಶ್ವರನಿಂದ ನನಗೆ ಅಪ್ಪಣೆಯಾಯಿತು.”


ಆದಕಾರಣ ಅರಸರೇ, ಈ ನನ್ನ ಬುದ್ಧಿಮಾತು ತಮಗೆ ಒಪ್ಪಿಗೆಯಾಗಲಿ: ಸದಾಚಾರದ ಮೂಲಕ ನಿಮ್ಮ ಪಾಪಗಳನ್ನು ಅಳಿಸಿಬಿಡಿ. ದೀನದಲಿತರಿಗೆ ದಯೆತೋರಿ. ನಿಮ್ಮ ಅಪರಾಧಗಳನ್ನು ನೀಗಿಸಿಕೊಳ್ಳಿ. ಇದರಿಂದ ಬಹುಶಃ ನಿಮ್ಮ ನೆಮ್ಮದಿಕಾಲ ಹೆಚ್ಚಾದೀತು,” ಎಂದು ಅರಿಕೆಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು