Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಹಗ್ಗಾಯ 1:1 - ಕನ್ನಡ ಸತ್ಯವೇದವು C.L. Bible (BSI)

1 ಪರ್ಷಿಯಾದ ಚಕ್ರವರ್ತಿಯಾದ ಡೇರಿಯಸ್ ಅವನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳ ಮೊದಲನೆಯ ದಿನದಂದು ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರಸ್ವಾಮಿ ನೀಡಿದ ದೈವೋಕ್ತಿ: ಅದು ಶೆಯಲ್ತಿಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲನನ್ನು ಮತ್ತು ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನನ್ನು ಉದ್ದೇಶಿಸಿ ಕೊಡಲಾದ ಸಂದೇಶವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರಸನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ, ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅರಸನಾದ ದಾರ್ಯಾವೆಷನ ಆಳಿಕೆಯ ಎರಡನೆಯ ವರುಷದ ಆರನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ಶೆಯಲ್ತೀಯೇಲನಿಗೆ ಹುಟ್ಟಿದ ಯೆಹೂದ ದೇಶಾಧಿಪತಿಯಾದ ಜೆರುಬ್ಬಾಬೆಲನಿಗೂ ಯೆಹೋಚಾದಾಕನಿಗೆ ಜನಿಸಿದ ಮಹಾಯಾಜಕನಾದ ಯೆಹೋಶುವನಿಗೂ ಪ್ರವಾದಿಯಾದ ಹಗ್ಗಾಯನ ಮೂಲಕ ಹೇಳಿಕಳುಹಿಸಿದನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಪರ್ಶಿಯಾದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಹಗ್ಗಾಯನಿಗೆ ಯೆಹೋವನಿಂದ ಸಂದೇಶವು ಬಂದಿತು. ಈ ಸಂದೇಶವು ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನಿಗೋಸ್ಕರ, ಯೆಹೋಚಾದಾಕನ ಮಗನಾದ ಯೆಹೋಶುವನಿಗೋಸ್ಕರ ಬಂದಿತು. ಜೆರುಬ್ಬಾಬೆಲನು ಯೆಹೂದ ಪ್ರಾಂತ್ಯದ ರಾಜ್ಯಪಾಲನಾಗಿದ್ದನು; ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಸಂದೇಶವು ಇದೇ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಪಾರಸಿಯ ಅರಸ ದಾರ್ಯಾವೆಷನ ಆಳಿಕೆಯ ಎರಡನೆಯ ವರ್ಷದಲ್ಲಿ, ಆರನೇ ತಿಂಗಳಿನ ಮೊದಲನೇ ದಿವಸದಲ್ಲಿ, ಯೆಹೋವ ದೇವರ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮುಖಾಂತರ, ಶೆಯಲ್ತಿಯೇಲನ ಮಗನು ಮತ್ತು ಯೆಹೂದದ ಅಧಿಪತಿ ಆದ ಜೆರುಬ್ಬಾಬೆಲನಿಗೂ ಯೆಹೋಚಾದಾಕನ ಮಗನು ಮತ್ತು ಮಹಾಯಾಜಕನಾದ ಯೆಹೋಶುವನಿಗೂ ಬಂದಿತು:

ಅಧ್ಯಾಯವನ್ನು ನೋಡಿ ನಕಲು ಮಾಡಿ




ಹಗ್ಗಾಯ 1:1
41 ತಿಳಿವುಗಳ ಹೋಲಿಕೆ  

ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್, ಬಾಣ ಎಂಬ ನಾಯಕರು.


ಹೀಗೆ ಜನರು ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೋಚಾದಾಕನ ಮಗ ಯೇಷೂವ, ಇವರೂ ಇವರ ಸಹೋದರರಾದ ಇತರ ಯಾಜಕರು, ಲೇವಿಯರು, ಸೆರೆಯಿಂದ ಜೆರುಸಲೇಮಿಗೆ ಮರಳಿಬಂದ ಬೇರೆ ಎಲ್ಲರು ದೇವಾಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು. ಇಪ್ಪತ್ತು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಲೇವಿಯರನ್ನು ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗೆ ನೇಮಿಸಲಾಯಿತು.


ದೈವಪುರುಷ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ದಹನಬಲಿಗಳನ್ನು ಸಮರ್ಪಿಸುವುದಕ್ಕಾಗಿ ಯೋಚಾದಾಕನ ಮಗ ಯೇಷೊವನೂ ಯಾಜಕರಾದ ಅವನ ಬಂಧುಗಳೂ ಹಾಗು ಶೆಯಲ್ತೀಯೇಲನ ಮಗ ಜೆರುಬ್ಬಾಬೆಲನೂ ಅವನ ಬಂಧುಗಳೂ ಇಸ್ರಯೇಲ್ ದೇವರ ಬಲಿಪೀಠವನ್ನು ಪುನಃ ಕಟ್ಟುವುದಕ್ಕೆ ಆಗ ಆರಂಭಿಸಿದರು.


ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಒಂಬತ್ತನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಈ ಸಂದೇಶವನ್ನು ಸರ್ವೇಶ್ವರ ದಯಪಾಲಿಸಿದರು.


ಆಗ ಶೆಯಲ್ತೀಯೇಲನ ಮಗ ಜೆರುಬ್ಬಾಬೆಲ್, ಯೆಹೋಚಾದಕನ ಮಗನೂ ಮಹಾಯಾಜಕನೂ ಆದ ಯೆಹೋಶುವ ಮತ್ತು ಅಳಿದುಳಿದ ಜನರೆಲ್ಲರು ದೇವರಾದ ಸರ್ವೇಶ್ವರಸ್ವಾಮಿಯ ನುಡಿಗೆ ಕಿವಿಗೊಟ್ಟರು. ಆ ಸ್ವಾಮಿಯ ಅಪ್ಪಣೆಯ ಪ್ರಕಾರ ಪ್ರವಾದಿ ಹಗ್ಗಾಯನು ಹೇಳಿದ ಮಾತನ್ನು ಕೇಳಿದರು. ಆ ಸ್ವಾಮಿಯಲ್ಲಿ ಭಯಭಕ್ತಿಯುಳ್ಳವರಾದರು.


ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರತ್, ಬಿಗ್ವೈ, ನೆಹೂಮ್ ಹಾಗು ಬಾಣ ಎಂಬವರು: ಆ ಅವರ ಜನಸಾಮಾನ್ಯರಲ್ಲಿ:


ಕೂಡಲೆ ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ದೇಶಾಧಿಪತಿಯೂ ಆದ ಜೆರುಬ್ಬಾಬೆಲ್, ಯೆಹೋಚಾದಕನ ಮಗನೂ ಮಹಾಯಾಜಕನೂ ಆದ ಯೆಹೋಶುವ, ಮತ್ತು ಅಳಿದುಳಿದ ಜನರೆಲ್ಲರು ಸ್ವಾಮಿಯ ಪ್ರೇರಣೆಯನ್ನು ಪಡೆದರು.


ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗೈ ಹಾಗು ಇದ್ದೋವಿನ ಮಗ ಜೆಕರೀಯ ಅವರ ಪ್ರಬೋಧನೆಯಿಂದ ಪ್ರೇರಿತರಾಗಿ, ಕಟ್ಟುವ ಕೆಲಸವನ್ನು ಮುಂದುವರಿಸಿದರು. ಇಸ್ರಯೇಲ್ ದೇವರ ಆಜ್ಞಾನುಸಾರ ಪರ್ಷಿಯದ ರಾಜ ಸೈರಸನ, ದಾರ್ಯಾವೆಷ್ ಹಾಗು ಅರ್ತಷಸ್ತ ಅವರ ಅಪ್ಪಣೆಯ ಆಧಾರದಿಂದ ಕಟ್ಟಡವನ್ನು ಮುಗಿಸಿದರು.


ಅದೇ ಒಂಬತ್ತನೆಯ ತಿಂಗಲಿನ ಇಪ್ಪತ್ತನಾಲ್ಕನೇ ದಿನದಲ್ಲಿ ಸರ್ವೆಶ್ವರ ಹಗ್ಗಾಯನಿಗೆ ಈ ಎರಡನೆಯ ಸಂದೇಶವನ್ನು ದಯಪಾಲಿಸಿದರು:


ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರ ಆದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ.


ಯೇಷೂವನಿಗೆ ಯೋಯಾಕೀಮನು, ಯೋಯಾಕೀಮನಿಗೆ ಎಲ್ಯಾಷೀಬನು, ಎಲ್ಯಾಷೀಬನಿಗೆ ಯೋಯಾದನು,


ಶೆಯಲ್ತೀಯೇಲನ ಮಗ ಜೆರುಬ್ಬಾಬೆಲ್ ಹಾಗು ಯೇಷೂವ ಇವರೊಡನೆ ಜುದೇಯ ನಾಡಿಗೆ ಹಿಂದಿರುಗಿ ಬಂದ ಯಾಜಕರು ಮತ್ತು ಲೇವಿಯರ ಪಟ್ಟಿ : ಯಾಜಕರು -


ಜನರೆಲ್ಲರು ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮೀಯನು, ಧರ್ಮೋಪದೇಶ ಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, “ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ,” ಎಂದು ಹೇಳಿದರು.


ಅರಸ ಅರ್ತಷಸ್ತನು ನನ್ನನ್ನು ಜುದೇಯ ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದಂದಿನಿಂದ ಹನ್ನೆರಡು ವರ್ಷಗಳವರೆಗೆ ಅಂದರೆ, ಅವನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆಯ ವರ್ಷದವರೆಗೆ, ನಾನಾಗಲಿ, ನನ್ನ ಸಹೋದರರಾಗಲಿ ರಾಜ್ಯಪಾಲನೆಗೆ ಸಲ್ಲ ತಕ್ಕ ಭತ್ಯದಿಂದ ಜೀವನ ಮಾಡಲಿಲ್ಲ.


ಅಂದಿನಿಂದ ಪರ್ಷಿಯರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಜೆರುಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಯಿತು.


ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.


ಊರಿಮ್ ತುಮ್ಮಿಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ, ಇವರು ಮಹಾಪರಿಶುದ್ಧ ಪದಾರ್ಥಗಳಲ್ಲಿ ಭೋಜನ ಮಾಡಬಾರದೆಂಬುದಾಗಿ ರಾಜ್ಯಪಾಲನು ತೀರ್ಪುಮಾಡಿದನು.


ಪರ್ಷಿಯಾದ ರಾಜ ಸೈರಸನು, ಸರ್ವೇಶ್ವರನ ಆಲಯಕ್ಕೆ ಸೇರಿದ್ದ ಸಾಮಾನುಗಳನ್ನು ಅಲ್ಲಿಂದ ತೆಗೆಸಿ ಖಜಾಂಚಿಯಾಗಿದ್ದ ಮಿತ್ರದಾತನಿಗೆ ಒಪ್ಪಿಸಿದನು . ಮಿತ್ರದಾತನು ಅವುಗಳನ್ನು ಜುದೇಯದ ರಾಜ್ಯ ಪಾಲನಾದ ಶೆಷ್ಬಚ್ಚರನಿಗೆ ಲೆಕ್ಕ ಮಾಡಿಕೊಟ್ಟನು.


ಪೆದಾಯನಿಗೆ ಜೆರುಬ್ಬಾಬೆಲ್ ಮತ್ತು ಶಿಮ್ಮೀ ಎಂಬಿಬ್ಬರು ಮಕ್ಕಳಿದ್ದರು. ಜೆರುಬ್ಬಾಬೆಲನಿಗೆ ಮೆಷುಲ್ಲಾಮ್, ಹನನ್ಯ ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಶೆಲೋಮೀತ್ ಎಂಬ ಮಗಳೂ ಇದ್ದಳು.


ಬಾಬಿಲೋನಿಯರಿಂದ ಸೆರೆಯಾಳಾಗಿ ಒಯ್ಯಲ್ಪಟ್ಟ ಅರಸ ಯೆಕೊನ್ಯನ ವಂಶಜರು ಇವರು: ಯೆಕೊನ್ಯನಿಗೆ ಏಳು ಜನ ಗಂಡುಮಕ್ಕಳು: ಶೆಯಲ್ತೀಯೇಲ್,


ಇಸ್ರಯೇಲ್ ದೇವರಾದ ಸರ್ವೇಶ್ವರ, ತನ್ನ ಸೇವಕನೂ ಗತ್ ಹೇಫೆರಿವನಾದ ಅಮಿತ್ತೈಯ ಮಗನೂ ಆದ ಯೋನಾ ಎಂಬ ಪ್ರವಾದಿಯ ಮುಖಾಂತರ ಮುಂತಿಳಿಸಿದಂತೆ, ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ಸಮುದ್ರದವರೆಗಿದ್ದ ಇಸ್ರಯೇಲರ ಮೇರೆಯನ್ನು ತಿರುಗಿ ತೆಗೆದುಕೊಂಡವನು ಇವನೇ.


ಸರ್ವೇಶ್ವರ ಪ್ರವಾದಿಯಾದ ಅಹೀಯನ ಮುಖಾಂತರ ತಿಳಿಸಿದಂತೆ ಎಲ್ಲಾ ಇಸ್ರಯೇಲರು ಅವನಿಗಾಗಿ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು.


ಯೊಸೇಖ ಯೋದನಿಗೆ, ಯೋದನು ಯೊವಾನ್ನನಿಗೆ, ಯೊವಾನ್ನನು ರೇಸನಿಗೆ, ರೇಸನು ಜೆರುಬಾಬೇಲನಿಗೆ, ಜೆರುಬಾಬೆಲ್ ಸಲಥಿಯೇಲನಿಗೆ, ಸಲಥಿಯೇಲನು ಸೇರಿಯನಿಗೆ ಹುಟ್ಟಿದರು.


ಅದಕ್ಕೆ ಮೋಶೆ, “ಸ್ವಾಮೀ, ಈ ಕಾರ್ಯಕ್ಕೆ ತಾವು ಬೇರೊಬ್ಬನನ್ನು ನೇಮಿಸಬೇಕು,” ಎನ್ನಲು, ಸರ್ವೇಶ್ವರ ಅವನ ಮೇಲೆ ಸಿಟ್ಟುಗೊಂಡರು.


ಪ್ರತಿವರ್ಷ ಸುಮಾರು ಇಪ್ಪತ್ತಮೂರು ಸಾವಿರ ಕಿಲೋಗ್ರಾಂ ಬಂಗಾರ ದೊರಕುತ್ತಿತ್ತು.


ಆಗ ಪ್ರವಾದಿಗಳಾದ ಹಗ್ಗಾಯ ಮತ್ತು ಇದ್ದೋವಿನ ಮಗ ಜೆಕರ್ಯ ಎಂಬವರು ಇಸ್ರಯೇಲ್ ದೇವರಿಂದ ಪ್ರೇರಿತರಾಗಿ, ಅವರ ಹೆಸರಿನಲ್ಲಿ ಜುದೇಯದ ಮತ್ತು ಜೆರುಸಲೇಮಿನ ಯೆಹೂದ್ಯರನ್ನು ಪ್ರಬೋಧಿಸಿದರು.


ಅದೇ ಸಮಯಕ್ಕೆ, ನದಿಯ ಈಚೆಯ ಪ್ರದೇಶಗಳ ಅಧಿಪತಿಯಾಗಿದ್ದ ತತ್ತನೈಯು ಹಾಗು ಶತರ್ಬೋಜೆನೈಯು ಮತ್ತು ಇವರ ಜೊತೆಗಾರರು ಅವರ ಬಳಿಗೆ ಬಂದು, “ಈ ಅಸ್ತಿವಾರವನ್ನು ಸರಿಪಡಿಸಿ ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು?” ಎಂದು ಕೇಳಿದರು.


ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ಪಟ್ಟಿ ಇದು: ಯಾಜಕರಲ್ಲಿ : ಯೋಚಾದಾಕನ ಮಗ ಯೆಷೂವನ ಮತ್ತು ಅವನ ಸಹೋದರರ ಸಂತಾನದವರಾದ ಮಾಸೇಯ, ಎಲೀಯೆಜೆರ್, ಯಾರೀಬ್, ಗೆದಲ್ಯ ಎಂಬವರು.


ಸೇನಾಧೀಶ್ವರರಾದ ಸರ್ವೇಶ್ವರ ಇಂತೆನ್ನುತ್ತಾರೆ: “ಮಹಾದೇವಾಲಯವನ್ನು ಪುನಃ ಕಟ್ಟುವುದಕ್ಕೆ ಸಮಯ ಇನ್ನೂ ಬಂದಿಲ್ಲ ಎಂದುಕೊಳ್ಳುತ್ತಾರೆ ಈ ಜನರು.”


ಆಗ ಪ್ರವಾದಿ ಹಗ್ಗಾಯನ ಮುಖಾಂತರ ಸರ್ವೇಶ್ವರ ಕೊಟ್ಟ ಸಂದೇಶವೇನೆಂದರೆ:


“ಜುದೇಯ ನಾಡಿನ ಅಧಿಪತಿಯಾದ ಜೆರುಬ್ಬಾಬೆಲನಿಗೆ ಹೀಗೆಂದು ನುಡಿ: ನಾನು ಭೂಮ್ಯಾಕಾಶಗಳನ್ನು ಅದರಿಸುವೆನು.


ಕುರುಡಾದ ಪಶುಗಳನ್ನು ಬಲಿಯರ್ಪಿಸುವುದು ತಪ್ಪಲ್ಲವೆ? ಊನವಾದ ರೋಗದ ಪಶುಗಳನ್ನು ಅರ್ಪಿಸುವುದು ದೋಷವಲ್ಲವೇ? ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ಇಂಥದ್ದನ್ನು ನಿಮ್ಮ ರಾಜಪಾಲನಿಗೆ ಕಾಣಿಕೆಯಾಗಿ ಕೊಟ್ಟರೆ ಅವನು ನಿಮ್ಮನ್ನು ಮೆಚ್ಚುವನೋ ಅಥವಾ ನಿಮ್ಮ ಕೋರಿಕೆಯನ್ನು ನೆರವೇರಿಸುವನೋ?’


ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ತಮ್ಮ ದೇವರಾದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ಆಲಯದ ನಿರ್ಮಾಣಕ್ಕೆ ಕೈಹಾಕಿದರು.


ಡೇರಿಯಸನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಸರ್ವೇಶ್ವರನಿಂದ ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂದ ದೈವವಾಣಿಯಿದು:


ಮತ್ತೊಂದು ದರ್ಶನದಲ್ಲಿ ಪ್ರಧಾನ ಯಾಜಕನಾದ ಯೆಹೋಶುವನು ದೂತನ ಮುಂದೆ ನಿಂತಿರುವುದನ್ನು ಸರ್ವೇಶ್ವರ ನನಗೆ ತೋರಿಸಿದರು. ಯೆಹೋಶುವನಿಗೆ ಪ್ರತಿವಾದಿಯಾಗಿ ಸೈತಾನನು ಅವನ ಪಕ್ಕದಲ್ಲಿ ನಿಂತಿದ್ದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು