Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 9:9 - ಕನ್ನಡ ಸತ್ಯವೇದವು C.L. Bible (BSI)

9 ಅದು ಪುಡಿಪುಡಿಯಾಗಿ ಈಜಿಪ್ಟ್ ದೇಶದಲ್ಲೆಲ್ಲಾ ಹಬ್ಬಿ ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡುವುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಅದು ಐಗುಪ್ತ ದೇಶದಲ್ಲೆಲ್ಲಾ ಧೂಳಿನ ಕಣಗಳಾಗಿ ಮಾರ್ಪಟ್ಟು ಅದು ಐಗುಪ್ತ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವವು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅದು ಸಣ್ಣ ಪುಡಿಯಾಗಿ ಐಗುಪ್ತದೇಶದಲ್ಲೆಲ್ಲಾ ಹಬ್ಬಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಹುಣ್ಣಾಗುವ ಬೊಕ್ಕೆಗಳನ್ನುಂಟುಮಾಡುವದು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಅದು ಧೂಳಾಗಿ ಈಜಿಪ್ಟಿನಲ್ಲೆಲ್ಲಾ ಹರಡಿಕೊಳ್ಳುವುದು; ಈ ಧೂಳು ಈಜಿಪ್ಟಿನಲ್ಲಿರುವ ಮನುಷ್ಯರನ್ನಾಗಲಿ ಪಶುಗಳನ್ನಾಗಲಿ ತಾಗಿದಾಗ ಅವರ ಚರ್ಮದ ಮೇಲೆ ಹುಣ್ಣುಗಳಾಗುತ್ತವೆ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆಗ ಅದು ಈಜಿಪ್ಟ್ ದೇಶದಲ್ಲೆಲ್ಲಾ ಪುಡಿಯಾಗುವುದು. ಅದು ಈಜಿಪ್ಟ್ ದೇಶದಲ್ಲೆಲ್ಲಾ ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಹುಣ್ಣುಗಳಾಗುವ ಬೊಕ್ಕೆಗಳು ಏಳುವಂತೆ ಮಾಡುವುದು,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 9:9
7 ತಿಳಿವುಗಳ ಹೋಲಿಕೆ  

ಅದರಂತೆಯೇ ಮೊದಲನೆಯ ದೇವದೂತನು ಹೋಗಿ ತನ್ನ ಪಾತ್ರೆಯಲ್ಲಿ ಇದ್ದುದನ್ನು ಭೂಮಿಯ ಮೇಲೆ ಸುರಿದನು. ಪರಿಣಾಮವಾಗಿ, ಮೊದಲನೆಯ ಮೃಗದ ಹಚ್ಚೆ ಚುಚ್ಚಿಸಿಕೊಂಡವರ ಮತ್ತು ಅದರ ವಿಗ್ರಹವನ್ನು ಪೂಜಿಸಿದವರ ಮೈಮೇಲೆಲ್ಲಾ ಭಯಂಕರವಾದ ಉರಿ ಹುಣ್ಣುಗಳು ಎದ್ದವು.


“ಈಜಿಪ್ಟರನ್ನು ಬಾಧಿಸಿದಂತೆ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಸರ್ವೇಶ್ವರ ನಿಮ್ಮನ್ನು ಬಾಧಿಸುವರು.


ಸೈತಾನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ಹೊರಟುಬಂದ. ಯೋಬನ ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ಕೆಟ್ಟಕುರುಗಳು ಹುಟ್ಟುವಂತೆ ಮಾಡಿ ಆತನನ್ನು ಬಾಧಿಸಿದ.


“ನಿಮ್ಮ ಮೊಣಕಾಲುಗಳಲ್ಲೂ ತೊಡೆಗಳಲ್ಲೂ ಮತ್ತು ಅಂಗಾಲು ಮೊದಲ್ಗೊಂಡು ನಡುನೆತ್ತಿಯವರೆಗೂ ವಾಸಿಯಾಗದ ಕೆಟ್ಟಕೆಟ್ಟ ಹುಣ್ಣುಗಳನ್ನು ಸರ್ವೇಶ್ವರ ಹುಟ್ಟಿಸಿ ಬಾಧಿಸುವರು;


ಸರ್ವೇಶ್ವರ, ಮೋಶೆ ಮತ್ತು ಆರೋನರಿಗೆ, “ನೀವು ಆವಿಗೆಯ ಬೂದಿಯನ್ನು ಕೈ ತುಂಬ ತೆಗೆದುಕೊಳ್ಳಿ. ಮೋಶೆ ಅದನ್ನು ಫರೋಹನ ಕಣ್ಮುಂದೆ ಆಕಾಶಕ್ಕೆ ತೂರಲಿ.


ಮೋಶೆ ಮತ್ತು ಆರೋನರು ಆವಿಗೆಯ ಬೂದಿಯನ್ನು ತೆಗೆದುಕೊಂಡು ಫರೋಹನ ಮುಂದೆ ನಿಂತುಕೊಂಡರು. ಮೋಶೆ ಆ ಬೂದಿಯನ್ನು ಆಕಾಶಕ್ಕೆ ತೂರಿದನು. ಅದು ಮನುಷ್ಯರಲ್ಲೂ ಪಶುಪ್ರಾಣಿಗಳಲ್ಲೂ ಕುರುಗಳನ್ನೆಬ್ಬಿಸಿ ಒಡೆದು ಹುಣ್ಣಾಗುವಂತೆ ಮಾಡಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು