Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 9:23 - ಕನ್ನಡ ಸತ್ಯವೇದವು C.L. Bible (BSI)

23 ಅಂತೆಯೇ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಸರ್ವೇಶ್ವರ ಗುಡುಗನ್ನೂ ಆನೆಕಲ್ಲಿನ ಮಳೆಯನ್ನೂ ಕಳುಹಿಸಿದರು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಈಜಿಪ್ಟ್ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದರು ಸರ್ವೇಶ್ವರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಮೋಶೆಯು ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದಾಗ ಯೆಹೋವನು ಗುಡುಗನ್ನು, ಆನೆಕಲ್ಲಿನ ಮಳೆಯನ್ನು ಕಳುಹಿಸಿದನು. ಸಿಡಿಲುಗಳು ನೆಲಕ್ಕೆ ಅಪ್ಪಳಿಸಿದವು. ಯೆಹೋವನು ಐಗುಪ್ತ ದೇಶದ ಮೇಲೆ ಆನೆಕಲ್ಲಿನ ಮಳೆಯನ್ನು ಸುರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಮೋಶೆಯು ತನ್ನ ಕೋಲನ್ನು ಆಕಾಶಕ್ಕೆ ಚಾಚಿದಾಗ ಯೆಹೋವನು ಗುಡುಗನ್ನೂ ಆನೆಕಲ್ಲಿನ ಮಳೆಯನ್ನೂ ಉಂಟುಮಾಡಿದನು. ಸಿಡಿಲುಗಳು ನೆಲಕ್ಕೆ ಬಿದ್ದವು. ಯೆಹೋವನು ಐಗುಪ್ತದೇಶದ ಮೇಲೆ ಕಲ್ಲಿನ ಮಳೆಯನ್ನು ಸುರಿಸಿದನು. ಕಲ್ಲಿನ ಮಳೆಯು ಬಹು ಬಲವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಮೋಶೆಯು ಆಕಾಶದ ಕಡೆಗೆ ತನ್ನ ಕೋಲನ್ನು ಚಾಚಿದನು. ಆಗ ಯೆಹೋವ ದೇವರು ಗುಡುಗುಗಳನ್ನೂ ಆಲಿಕಲ್ಲಿನ ಮಳೆಯನ್ನೂ ಸುರಿಸಿದರು. ಸಿಡಿಲು ನೆಲಕ್ಕೆ ಬಡಿಯಿತು. ಸಿಡಿಲಿನ ಆರ್ಭಟದೊಂದಿಗೆ ಯೆಹೋವ ದೇವರು ಈಜಿಪ್ಟ್ ದೇಶದ ಮೇಲೆ ಆಲಿಕಲ್ಲಿನ ಮಳೆಯನ್ನು ಸುರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 9:23
22 ತಿಳಿವುಗಳ ಹೋಲಿಕೆ  

ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ I ಮೊಳಗಿತು ವಾಣಿ ಆ ಪರಾತ್ಪರನ ವದನದಿಂದ I ಸುರಿಯಿತಿದೋ ಕಲ್ಮಳೆ, ಉರಿಗೆಂಡ ಮೇಲಿಂದ II


ಅವರು ಇಸ್ರಯೇಲರಿಗೆ ಬೆಂಗೊಟ್ಟು ಬೇತ್ ಹೋರೋನಿನ ಇಳಿಜಾರಿನಲ್ಲಿ ಓಡುತ್ತಾ ಅಜೇಕವನ್ನು ಮುಟ್ಟುವವರೆಗೂ ಸರ್ವೇಶ್ವರ ಆಕಾಶದಿಂದ ದೊಡ್ಡ ಕಲ್ಮಳೆಯನ್ನು ಸುರಿಸಿದರು. ಈ ಕಾರಣ ಅನೇಕರು ಸತ್ತರು. ಇಸ್ರಯೇಲರ ಕತ್ತಿಗೆ ಈಡಾದವರಿಗಿಂತ ಕಲ್ಮಳೆಯಿಂದ ನಾಶವಾದವರೇ ಹೆಚ್ಚುಮಂದಿ.


ನಾನು ಗೋಗನ ಸಂಗಡ ವ್ಯಾಜ್ಯವಾಡುತ್ತಾ ಅವನನ್ನು ವ್ಯಾಧಿಗೂ ವಧೆಗೂ ಗುರಿಮಾಡುವೆನು. ಅವನ ಮೇಲೂ ಅವನ ಪಡೆಗಳ ಮೇಲೂ ಅವನೊಂದಿಗಿರುವ ಬಹು ಜನಾಂಗಗಳ ಮೇಲೂ ವಿಪರೀತ ಮಳೆ, ದೊಡ್ಡ ದೊಡ್ಡ ಆನೆಕಲ್ಲು, ಬೆಂಕಿ, ಗಂಧಕ, ಇವುಗಳನ್ನು ಸುರಿಸುವೆನು.


ಆಗ ಸರ್ವೇಶ್ವರ ತಮ್ಮ ಗಂಭೀರವಾದ ವಾಣಿಯನ್ನು ಕೇಳುವಂತೆ ಮಾಡುವರು. ತೀವ್ರಕೋಪ, ದಹಿಸುವ ಅಗ್ನಿಜ್ವಾಲೆ, ಸಿಡಿಯುವ ಮೋಡ, ಚಂಡಮಾರುತ, ಕಲ್ಮಳೆ - ಇವುಗಳಿಂದ ತಮ್ಮ ಶಿಕ್ಷಾಹಸ್ತವನ್ನು ಪ್ರದರ್ಶಿಸುವರು.


ಮೊದಲನೆಯ ದೇವದೂತನು ತುತೂರಿಯನ್ನು ಊದಿದನು. ಭೂಮಿಯ ಮೇಲೆ ರಕ್ತಮಿಶ್ರಿತವಾದ ಆಲಿಕಲ್ಲಿನ ಮತ್ತು ಬೆಂಕಿಯ ಸುರಿಮಳೆಯಾಯಿತು. ಪರಿಣಾಮವಾಗಿ, ಭೂಮಿಯ ಮೂರನೆಯ ಒಂದು ಭಾಗ ಸುಟ್ಟುಹೋಯಿತು. ಮರಗಳಲ್ಲಿ ಮೂರನೆಯ ಒಂದು ಭಾಗ ಭಸ್ಮವಾಯಿತು. ಹಸಿರು ಹುಲ್ಲೆಲ್ಲಾ ಉರಿದುಹೋಯಿತು.


ಕಿಚ್ಚು, ಕಲ್ಮಳೆ, ಹಿಮ, ಹಬೆ ಇವುಗಳೆಲ್ಲವೂ I ಆತ ಹೇಳಿದಂತೆ ಕೇಳುವ ಬಿರುಗಾಳಿಯೂ, II


ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ I ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ I ಕಂಪಿಸಿತೀ ಭೂಮಂಡಲ ನಡುನಡುಗಿ II


ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ I ಪ್ರತಿಭಾಸ್ವರೂಪನಾದ ದೇವನಿದೋ, ಗುಡುಗುತ್ತಲೇ I ಆತನಾಡಂಬರ ಧ್ವನಿ ಮೇಘಮಂಡಲದ ಮೇಲೆ II


ಆಕಾಶದಿಂದ ಮನುಷ್ಯರ ಮೇಲೆ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಆಲಿಕಲ್ಲಿನ ತೂಕ ಸುಮಾರು ಐವತ್ತು ಕಿಲೊಗ್ರಾಮಿನಷ್ಟು ಇತ್ತು. ಆ ಆಲಿಕಲ್ಲಿನ ವಿಪತ್ತು ಅಧಿಕವಾದುದರಿಂದಲೂ ಭಯಂಕರವಾದುದರಿಂದಲೂ ಜನರು ದೇವರನ್ನು ದೂಷಿಸಿದರು.


ಆ ಗುಡುಗು ಮಿಂಚನ್ನು, ತುತೂರಿ ಧ್ವನಿಯನ್ನು ಹಾಗು ಬೆಟ್ಟದಿಂದ ಹೊರಡುತ್ತಿದ್ದ ಹೊಗೆಯನ್ನು ಜನರೆಲ್ಲರು ನೋಡಿದರು. ನೋಡಿ ನಡುಗುತ್ತಾ ದೂರದಲ್ಲೇ ನಿಂತುಕೊಂಡರು.


ಮೂರನೆಯ ದಿನ ಸೂರ್ಯೋದಯ ಆಗುವಾಗ ಆ ಬೆಟ್ಟದ ಮೇಲೆ ಗುಡುಗು, ಮಿಂಚು, ಕಾರ್ಮುಗಿಲು ಹಾಗು ತುತೂರಿಯ ಮಹಾಧ್ವನಿ ಉಂಟಾಯಿತು. ಪಾಳೆಯದಲ್ಲಿದ್ದ ಜನರೆಲ್ಲರು ನಡುಗಿದರು.


ಆಗ ಮಿಂಚು, ಗುಡುಗು, ಗರ್ಜನೆಗಳುಂಟಾದವು. ಇದಲ್ಲದೆ, ಭಯಂಕರವಾದ ಭೂಕಂಪ ಉಂಟಾಯಿತು. ಮಾನವ ಇತಿಹಾಸದಲ್ಲೇ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.


ಆಗ ಸರ್ವೇಶ್ವರ ಸ್ವಾಮಿ ಸೊದೋಮ್ - ಗೊಮೋರಗಳ ಮೇಲೆ ಅಗ್ನಿ ಉರಿಯುತ್ತಿರುವ ಗಂಧಕಮಳೆ ಸುರಿಸಿದರು.


ಹಾಗಾದರೆ ನಾಳೆ ಇಷ್ಟು ಹೊತ್ತಿಗೆ ವಿಪರೀತವಾದ ಆನೆಕಲ್ಲಿನ ಮಳೆ ಬೀಳುವಂತೆ ಮಾಡುವೆನು. ಈಜಿಪ್ಟಿನ ರಾಜ್ಯ ಸ್ಥಾಪಿತವಾಗಿ ಇಂದಿನವರೆಗೂ ಬೀಳದಂಥ ಕಲ್ಲಿನ ಮಳೆ ಬೀಳುವುದು.


ಆ ಮಳೆ ಬಲು ರಭಸವಾಗಿತ್ತು. ಅದರೊಂದಿಗೆ ಮಿಂಚು ಫಳಫಳನೆ ಹೊಳೆಯುತ್ತಿತ್ತು. ಈಜಿಪ್ಟಿನವರು ಒಂದು ರಾಷ್ಟ್ರವಾದಂದಿನಿಂದ ಆ ದೇಶದಲ್ಲಿ ಅಂಥ ಘೋರವಾದ ಆನೆಕಲ್ಲಿನ ಮಳೆ ಆಗಿರಲಿಲ್ಲ.


ಜನರ ಶಿಕ್ಷಣಕ್ಕೆ, ಧರೆಯ ಹಿತಕೆ ತಮ್ಮ ಪ್ರೀತಿಯನ್ನು ತೋರುವುದಕೆ ಇದೆಲ್ಲ ಆಗುವಂತೆ ಮಾಡುತ್ತಾನೆ.


ಸುರಿಸುವನು ಆಲಿಕಲ್ಲನು ರೊಟ್ಟಿ ತುಂಡುಗಳಂತೆ I ಕೊರೆಯುವ ಚಳಿಯನು ಕಳಿಸುವನು ಸಹಿಸಲಾಗದಂತೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು