Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 6:16 - ಕನ್ನಡ ಸತ್ಯವೇದವು C.L. Bible (BSI)

16 ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಇವರು - ಗೇರ್ಷೋನ್, ಕೆಹಾತ್ ಮತ್ತು ಮೆರಾರೀ. ಲೇವಿ ನೂರಮೂವತ್ತೇಳು ವರ್ಷ ಬದುಕಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ವಂಶಾವಳಿಗಳ ಪ್ರಕಾರ ಲೇವಿಯರ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ, ಇವರೇ. ಲೇವಿಯು ನೂರ ಮೂವತ್ತೇಳು ವರ್ಷ ಬದುಕಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ವಂಶಾವಳಿಗಳ ಪ್ರಕಾರ ಲೇವಿಯ ಮಕ್ಕಳು ಯಾರಂದರೆ - ಗೇರ್ಷೋನ್ ಕೆಹಾತ್ ಮೆರಾರೀ ಇವರೇ. ಲೇವಿಯು ನೂರಮೂವತ್ತೇಳು ವರುಷ ಬದುಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಲೇವಿಯು ನೂರಮೂವತ್ತೇಳು ವರ್ಷ ಜೀವಿಸಿದನು. ಲೇವಿಯ ಗಂಡುಮಕ್ಕಳ ವಂಶಾವಳಿ: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ತಮ್ಮ ತಮ್ಮ ವಂಶಾವಳಿಗಳ ಪ್ರಕಾರವಾಗಿರುವ ಲೇವಿಯ ಪುತ್ರರ ಹೆಸರುಗಳು: ಗೇರ್ಷೋನ್, ಕೊಹಾತ್, ಮೆರಾರೀ. ಲೇವಿಯು ನೂರಮೂವತ್ತೇಳು ವರ್ಷಗಳವರೆಗೆ ಬದುಕಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 6:16
22 ತಿಳಿವುಗಳ ಹೋಲಿಕೆ  

ಲೇವಿಯ ಮಕ್ಕಳ ಹೆಸರುಗಳು ಇವು: ಗೇರ್ಷೋನ್, ಕೆಹಾತ್, ಮೆರಾರೀ.


ಲೇವಿಯ ಮಕ್ಕಳು - ಗೆರ್ಷೋನ್, ಕೆಹಾತ್ ಮತ್ತು ಮೆರಾರಿ.


ಲೇವಿಗೆ ಗೇರ್ಷೋಮ್, ಕೆಹಾತ್, ಮೆರಾರಿ ಎಂಬ ಮೂರು ಮಂದಿ ಮಕ್ಕಳಿದ್ದರು.


ಲೇವಿಯ ಮೂವರು ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ.


ಲೇವಿಯರಲ್ಲಿ ಎಣಿಕೆಯಾದ ಕುಟುಂಬಗಳು ಇವು : ಗೇರ್ಷೋನನಿಂದ ಗೇರ್ಷೋನ್ಯರು, ಕೆಹಾತನಿಂದ ಕೆಹಾತ್ಯರು ಮತ್ತು ಮೆರಾರೀಯನಿಂದ ಮೆರಾರೀಯರು, ಎಂಬ ವಂಶಸ್ಥರು.


ಇದಲ್ಲದೆ, ಆ ಲೇವಿಯರನ್ನು ಗೇರ್ಷೋನ್ಯರು,ಮಕೆಹಾತ್ಯರು, ಮೆರಾರೀಯರು ಎಂಬ ಮೂರು ವರ್ಗಗಳಾಗಿ ವಿಂಗಡಿಸಿದನು.


ಅಮ್ರಾಮನು ತನ್ನ ಸೋದರತ್ತೆಯಾದ ಯೋಕಬೆದಳನ್ನು ಮದುವೆಮಾಡಿಕೊಂಡನು. ಆಕೆ ಅವನಿಗೆ ಆರೋನನನ್ನು ಮತ್ತು ಮೋಶೆಯನ್ನು ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದ್ದನು.


ಕೆಹಾತನ ಮಕ್ಕಳು - ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್. ಕೆಹಾತನು ನೂರ ಮೂವತ್ತ ಮೂರು ವರ್ಷ ಬದುಕಿದ್ದನು.


ಜೋಸೆಫನು ಈಜಿಪ್ಟ್ ದೇಶದಲ್ಲಿ ತನ್ನ ನೂರಹತ್ತನೇ ವರ್ಷದಲ್ಲಿ ಸತ್ತನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ಲೇಪಿಸಿ, ಅದನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಿದರು.


ಯಕೋಬನು ಈಜಿಪ್ಟಿನಲ್ಲಿ ಹದಿನೇಳು ವರ್ಷ ಇದ್ದನು. ಅವನ ಜೀವಮಾನ ಕಾಲ ಒಟ್ಟಿಗೆ ನೂರನಲವತ್ತೇಳು ವರ್ಷಗಳು.


ಇಸಾಕನು ಹಣ್ಣುಹಣ್ಣು ಮುದುಕನಾಗಿದ್ದು ನೂರ ಎಂಬತ್ತನೆಯ ವರ್ಷದಲ್ಲಿ ತೀರಿಕೊಂಡು ತನ್ನ ಪಿತೃಗಳ ಬಳಿಗೆ ಸೇರಿಕೊಂಡನು. ಅವನ ಮಕ್ಕಳಾದ ಏಸಾವ ಮತ್ತು ಯಕೋಬರು ಅವನನ್ನು ಸಮಾಧಿ ಮಾಡಿದರು.


ಲೇವಿಯ ವಂಶಸ್ಥನಾದ ಒಬ್ಬನು ಲೇವಿಯ ಕುಲದ ಕನ್ಯೆಯನ್ನು ಮದುವೆಯಾದನು.


ರೂಬೇನನ ಮಕ್ಕಳು - ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.


ಇವರು ಗೋತ್ರಸ್ಥಾಪಕರು. ಗೋತ್ರಸ್ಥಾಪಕ ಗೇರ್ಷೋನನ ಮಕ್ಕಳು - ಲಿಬ್ನಿ, ಶಿಮ್ಮೀ ಎಂಬುವರು.


ಗೋತ್ರಸ್ಥಾಪಕ ಕೆಹಾತನ ಮಕ್ಕಳು - ಅಮ್ರಾಮ್, ಇಚ್ಛಾರ್, ಹೆಬ್ರೋನ್, ಉಜ್ಜೀಯೇಲ್ ಎಂಬುವರು.


ಮೆರಾರಿಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಗೋತ್ರ ಕುಟುಂಬಗಳ ಪ್ರಕಾರ ಇವರೇ ಲೇವಿಯ ವಂಶದವರು.


ಗೇರ್ಷೋನ್ ವಂಶದವರಲ್ಲಿ ಲಿಬ್ನೀ ಗೋತ್ರದವರು ಶಿಮ್ಮೀ ಗೋತ್ರದವರೂ ಇದ್ದರು.


ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಚಾರನ ಮಗನೂ ಆದ ಕೋರಹ ಮತ್ತು ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನ್ ಹಾಗೂ ಅಬೀರಾಮ್ ಮತ್ತು ಪೆಲೆತನ ಮಗ ಓನ್ - ಇವರು ಮೋಶೆಗೆ ವಿರುದ್ಧ ಪ್ರತಿಭಟಿಸಿದರು.


ಕೆಹಾತ್ಯರಿಗಾಗಿ ಚೀಟು ಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳಿಂದ ಹದಿಮೂರು ನಗರಗಳು ದೊರಕಿದವು.


ಮತ್ತೆ ಚೀಟು ಹಾಕಿದಾಗ ಗೇರ್ಷೋನ್ಯರಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ ಎಂಬ ಕುಲಗಳಿಂದ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಕುಲದಿಂದ ಹದಿಮೂರು ನಗರಗಳು ದೊರೆತವು.


ಕೂಡಲೆ ಕೆಹಾತ್ಯರಲ್ಲಿ ಅಮಾಸೈಯ ಮಗ ಮೆಹತ್, ಅಜರ್ಯನ ಮಗ ಯೋವೇಲ್, ಮೆರಾರೀಯರಲ್ಲಿ ಅಬ್ದೀಯ ಮಗ ಕೀಷ್, ಯೆಹಲ್ಲೆಲೇಲನ ಮಗ ಅಜರ್ಯ, ಗೆರ್ಷೋನ್ಯರಲ್ಲಿ ಜಿಮ್ಮನ ಮಗ ಯೋವಾಹ,


ಸಿಮೆಯೋನನ ಕುಲದಿಂದ ಹನ್ನೆರಡು ಸಾವಿರ ಲೇವಿಯ ಕುಲದಿಂದ ಹನ್ನೆರಡು ಸಾವಿರ ಇಸ್ಸಾಕರನ ಕುಲದಿಂದ ಹನ್ನೆರಡು ಸಾವಿರ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು