Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 4:15 - ಕನ್ನಡ ಸತ್ಯವೇದವು C.L. Bible (BSI)

15 ನೀನು ಅವನ ಸಂಗಡ ಮಾತಾಡಿ ಹೇಳಬೇಕಾದ ವಿಷಯಗಳನ್ನು ತಿಳಿಸು . ನಾನು ನಿನಗೂ ಅವನಿಗೂ ಹೇಗೆ ಮಾತಾಡಬೇಕೆಂದು ತಿಳಿಸಿ ನೀವು ಮಾಡಬೇಕಾದುದನ್ನು ಕಲಿಸುವೆನು .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ನೀನು ಅವನ ಸಂಗಡ ಮಾತಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅವನು ನಿನ್ನೊಡನೆ ಫರೋಹನ ಬಳಿಗೆ ಬರುವನು. ನೀನು ಹೇಳಬೇಕಾದದ್ದನ್ನು ನಾನೇ ನಿನಗೆ ತಿಳಿಸುವೆನು. ಅದನ್ನು ನೀನು ಆರೋನನಿಗೆ ತಿಳಿಸು. ಆರೋನನು ಫರೋಹನೊಡನೆ ಸರಿಯಾಗಿ ಮಾತಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಅವನ ಸಂಗಡ ನೀನು ಮಾತನಾಡಿ, ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಂದಲೂ ಅವನ ಬಾಯಿಂದಲೂ ನಾನೇ ಮಾತನಾಡಿ ನೀವು ಮಾಡಬೇಕಾದುದನ್ನು ಕಲಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 4:15
24 ತಿಳಿವುಗಳ ಹೋಲಿಕೆ  

ಆಕಾಶವನ್ನ ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.”


ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು.


ಇವರ ಸ್ವದೇಶದವರಲ್ಲಿ ನಿನ್ನಂಥ ಪ್ರವಾದಿಯನ್ನು ಅವರಿಗೆ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.


ಸರ್ವೇಶ್ವರ ಬಿಳಾಮನಿಗೆ ದರ್ಶನಕೊಟ್ಟು ಅವನು ಹೇಳಬೇಕಾದುದನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂದಿರುಗಿ ನಾನು ಹೇಳಿದಂತೆಯೇ ತಿಳಿಸು,” ಎಂದರು.


ಅದಕ್ಕೆ ಬಿಳಾಮನು, “ಸರ್ವೇಶ್ವರ ನುಡಿಸುವುದನ್ನೇ ನಾನು ನುಡಿಯಬೇಕಾಗಿದೆಯಲ್ಲವೆ?” ಎಂದುಬಿಟ್ಟನು.


ಸರ್ವೇಶ್ವರ ಬಿಳಾಮನಿಗೆ ಹೇಳಬೇಕಾದುದನ್ನು ಹೇಳಿ, “ನೀನು ಬಾಲಾಕನ ಬಳಿಗೆ ಹಿಂದಿರುಗಿ ಹೋಗಿ ನಾನು ಹೇಳಿದ್ದನ್ನು ತಿಳಿಸು,” ಎಂದು ಆಜ್ಞಾಪಿಸಿದರು.


ಬಳಿಕ ಸ್ವಾಮಿ ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;


ಅವರೊಡನೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ: ನಿಮ್ಮ ಮೇಲೆ ನೆಲೆಸಿರುವ ನನ್ನ ಆತ್ಮವೂ ಮತ್ತು ನಿಮ್ಮ ಬಾಯಲ್ಲಿ ನಾನಿಟ್ಟಿರುವ ವಾಕ್ಯಗಳೂ ನಿಮ್ಮ ಬಾಯಿಂದಾಗಲಿ, ನಿಮ್ಮ ಸಂತತಿಯ ಬಾಯಿಂದಾಗಲಿ, ನಿಮ್ಮ ಸಂತತಿಯ ಸಂತಾನದ ಬಾಯಿಂದಾಗಲಿ, ಇಂದಿನಿಂದ ಎಂದಿಗೂ ತೊಲಗುವುದಿಲ್ಲ.” ಇದು ಸರ್ವೇಶ್ವರ ಸ್ವಾಮಿಯ ನುಡಿ.


ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು


ಎಣ್ಣೆ ಹಚ್ಚಿಕೊಳ್ಳದೆ ಅರಸನ ಬಳಿಗೆ ಹೋಗು; ಅಲ್ಲಿ ಈ ಮಾತುಗಳನ್ನು ಅವನಿಗೆ ಹೇಳು,” ಎಂದು ಆಜ್ಞಾಪಿಸಿ ಹೇಳಬೇಕಾದ ಮಾತುಗಳನ್ನು ಆಕೆಗೆ ಕಲಿಸಿಕೊಟ್ಟನು.


ಅದಕ್ಕೆ ಬಿಳಾಮನು, “ಅದಿರಲಿ, ನಾನೀಗ ಬಂದಾಯಿತು, ಆದರೆ ನಾನಾಗಿ ಏನನ್ನು ಹೇಳುವ ಶಕ್ತಿ ನನಗಿಲ್ಲ, ದೇವರು ಆಡಿಸಿದ ಮಾತನ್ನೇ ಹೇಳಲು ಸಾಧ್ಯ,” ಎಂದು ಹೇಳಿದನು.


ಆದುದರಿಂದ ಈಗಲೇ ಹೊರಡು; ನಿನ್ನ ಬಾಯಲ್ಲಿ ನಾನೇ ಇರುವೆನು; ನೀನು ಮಾತಾಡಬೇಕಾದುದನ್ನು ನಿನಗೆ ಕಲಿಸಿಕೊಡುವೆನು,” ಎಂದು ಹೇಳಿದರು.


ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ: ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ, ರೊಟ್ಟಿಯನ್ನು ತೆಗೆದುಕೊಂಡು


ನೀನು ಇಲ್ಲೇ ನನ್ನ ಬಳಿ ಇರು; ಅವರಿಗೆ ಬೋಧಿಸಬೇಕಾದ ಎಲ್ಲ ಆಜ್ಞೆಗಳನ್ನೂ ವಿಧಿನಿರ್ಣಯಗಳನ್ನೂ ನಿನಗೆ ತಿಳಿಸುತ್ತೇನೆ. ನಾನು ಅವರಿಗೆ ಸ್ವಂತಕ್ಕಾಗಿ ಕೊಡುವ ನಾಡಿನಲ್ಲಿ ಅವರು ಅವುಗಳನ್ನು ಅನುಸರಿಸಬೇಕು,’ ಎಂದು ಹೇಳಿದರು.


ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ.


ಅದಕ್ಕೆ ದೇವರು, “ನಾನೇ ನಿನ್ನ ಸಂಗಡ ಇರುವೆನು; ನೀನು ನನ್ನ ಜನರನ್ನು ಈಜಿಪ್ಟಿನಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ. ನಿನ್ನನ್ನು ಕಳಿಸಿದವನು ನಾನೇ ಎಂಬುದಕ್ಕೆ ಇದೇ ನಿನಗೆ ಗುರುತಾಗಿ ಇರುವುದು,” ಎಂದರು.


ಆಗ ಮೋಶೆ, ಸರ್ವೇಶ್ವರ ಸ್ವಾಮಿ ತನ್ನನ್ನು ಕಳಿಸುವಾಗ ಯಾವ ಮಾತುಗಳನ್ನು ಹೇಳಿದರೋ ಏನೇನು ಸೂಚಕಕಾರ್ಯಗಳು ಮಾಡಬೇಕೆಂದು ಆಜ್ಞಾಪಿಸಿದರೋ ಅವುಗಳನ್ನೆಲ್ಲ ಆರೋನನಿಗೆ ತಿಳಿಸಿದನು.


ಮೋಶೆಗೆ ಸರ್ವೇಶ್ವರ ಹೇಳಿದ ಮಾತುಗಳನ್ನೆಲ್ಲ ಆರೋನನು ಆ ಜನರಿಗೆ ತಿಳಿಸಿದನು. ಮೋಶೆ ಅವರ ಮುಂದೆ ಆ ಸೂಚಕಕಾರ್ಯಗಳನ್ನು ಮಾಡಿದನು. ಜನರು ನಂಬಿದರು.


ಮೋಶೆ ಜನರಿಗೆ, “ಈ ಕಾರ್ಯಗಳೆಲ್ಲ ನನ್ನ ಸ್ವಂತ ಆಲೋಚನೆಯಿಂದ ಆಗಲಿಲ್ಲ, ಸರ್ವೇಶ್ವರನೇ ಇವುಗಳನ್ನು ನಡೆಸುವುದಕ್ಕೆ ನನ್ನನ್ನು ಕಳಿಸಿದ್ದಾರೆಂದು ನೀವೇ ತಿಳಿದುಕೊಳ್ಳಬಹುದು.


ಆಮೇಲೆ ನೀನು ಮಾಡಬೇಕಾದುದನ್ನು ನಾನೇ ತಿಳಿಸುತ್ತೇನೆ; ನಾನು ಯಾರನ್ನು ತೋರಿಸುತ್ತೇನೋ ಅವನನ್ನೇ ನೀನು ಅಭಿಷೇಕಿಸಬೇಕು,” ಎಂದರು.


ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು I ಸಾರುವುದೆನ್ನ ಬಾಯಿ ನಿನ್ನ ನುಡಿಗಳನು II


ಆಗ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲೇಖಕ ಬಾರೂಕನಿಗೆ ಕೊಟ್ಟನು. ಅವನು ಅದರಲ್ಲಿ ಜುದೇಯದ ಅರಸ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಗ್ರಂಥದ ಎಲ್ಲ ಮಾತುಗಳನ್ನು ಬರೆದನು. ಅದು ಮಾತ್ರವಲ್ಲ, ಅಂಥ ಅನೇಕ ಮಾತುಗಳನ್ನೂ ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು.


ಪ್ರಭುವಿನ ಭಯಭಕುತಿಯುಳ್ಳವನಿಗೆ I ಲಭಿಪುದು ಖಚಿತ ಋಜುಮಾರ್ಗದ ಕಲಿಕೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು