Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 39:21 - ಕನ್ನಡ ಸತ್ಯವೇದವು C.L. Bible (BSI)

21 ಪದಕವು ವಿಚಿತ್ರವಾದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿದರು. ಸರ್ವೇಶ್ವರ ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಎದೆಯಪದಕವು ಕಸೂತಿಯ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಪದಕವು ವಿಚಿತ್ರವಾದ ನಡುಕಟ್ಟಿನ ಮೇಲ್ಗಡೆಯಲ್ಲಿ ಬಿಗಿಯಾಗಿರುವಂತೆಯೂ ಕವಚದಿಂದ ಕಳಚಿಬೀಳದಂತೆಯೂ ಅದರ ಉಂಗುರಗಳನ್ನು ಕವಚದ ಉಂಗುರಗಳಿಗೆ ನೀಲಿದಾರದಿಂದ ಕಟ್ಟಿದರು. ಯೆಹೋವನು ಮೋಶೆಗೆ ಹಾಗೆಯೇ ಆಜ್ಞಾಪಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಬಳಿಕ ಅವರು ನೀಲಿದಾರದಿಂದ ದೈವನಿರ್ಣಯ ಪದಕದ ಉಂಗುರಗಳನ್ನು ಏಫೋದಿನ ಉಂಗುರಗಳಿಗೆ ಕಟ್ಟಿದರು. ಈ ರೀತಿಯಾಗಿ ದೈವನಿರ್ಣಯ ಪದಕವು ನಡುಕಟ್ಟಿಗೆ ಹತ್ತಿರವಾಗಿದ್ದು ಏಫೋದಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಯೆಹೋವನು ಆಜ್ಞಾಪಿಸಿದಂತೆಯೇ ಅವರು ಎಲ್ಲವನ್ನೂ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಆ ಎದೆಪದಕವನ್ನು ಏಫೋದಿನ ವಿಚಿತ್ರವಾದ ನಡುಕಟ್ಟಿನ ಮೇಲೆ ಇರುವಂತೆಯೂ ಎದೆಪದಕವು ಏಫೋದನ್ನು ಬಿಟ್ಟು ಅಲ್ಲಾಡದಂತೆಯೂ ಅದರ ಉಂಗುರಗಳ ಮೂಲಕವಾಗಿ ಏಫೋದಿನ ಉಂಗುರಗಳಿಗೆ ನೀಲಿ ದಾರದಿಂದ ಕಟ್ಟಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 39:21
7 ತಿಳಿವುಗಳ ಹೋಲಿಕೆ  

ಜ್ಞಾನಿಗಳನ್ನು ನಾಚಿಕೆಗೀಡುಮಾಡಲು ದೇವರು ಲೋಕದ ದೃಷ್ಟಿಯಲ್ಲಿ ಮೂರ್ಖರನ್ನು ಆರಿಸಿಕೊಂಡರು; ಅಂತೆಯೇ ಬಲಿಷ್ಠರನ್ನು ಲಜ್ಜೆಗೀಡುಮಾಡಲು ಲೋಕದ ದೃಷ್ಟಿಯಲ್ಲಿ ಬಲಹೀನರನ್ನು ಆರಿಸಿಕೊಂಡರು.


‘ದೇವರ ಹುಚ್ಚುತನ’ ಎಂಬುದು ಮಾನವ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.


ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.


ಪ್ರಧಾನ ಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳು, ಮತ್ತು ಪದಕದ ಚೀಲದಲ್ಲಿ ಕೆತ್ತಬೇಕಾದ ನಾನಾ ರತ್ನಗಳು.


ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಕವಚದ ಅಂಗವಾಗಿರಬೇಕು. ಅದರಂತೆಯೇ ಹುರಿನಾರಿನ ಬಟ್ಟೆಯಿಂದ ಮಾಡಿರಬೇಕು. ಚಿನ್ನದ ದಾರದಿಂದಲೂ ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.


ಮತ್ತು ಬೇರೆ ಎರಡು ಚಿನ್ನದ ಉಂಗುರಗಳನ್ನು ಮಾಡಿ ಕವಚದ ಎರಡು ಹೆಗಲಿನ ಪಟ್ಟಿಗಳ ಮುಂಭಾಗದ ಕೆಳಗೆ, ಕವಚವನ್ನು ಜೋಡಿಸಿರುವ ಸ್ಥಳದ ಹತ್ತಿರ ಆ ಚಿತ್ರಕಲೆಯಿಂದ ಕೂಡಿದ ನಡುಕಟ್ಟಿನ ಮೇಲ್ಗಡೆಯಲ್ಲಿ ಇರಿಸಿದರು.


ಕವಚದ ಸಂಗಡ ತೊಟ್ಟುಕೊಳ್ಳಬೇಕಾದ ಮೇಲಂಗಿಯನ್ನು ನೀಲಿಬಣ್ಣದ ಬಟ್ಟೆಯಿಂದ ಕಸೂತಿ ಕೆಲಸದಿಂದ ಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು