Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 36:7 - ಕನ್ನಡ ಸತ್ಯವೇದವು C.L. Bible (BSI)

7 ನಿರ್ಮಾಣ ಕೆಲಸ ಮುಗಿಸುವುದಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಾಗಿ ಸರಕುಸಾಮಗ್ರಿಗಳನ್ನು ಶೇಖರಿಸಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಏಕೆಂದರೆ ಕೆಲಸವನ್ನೆಲ್ಲಾ ಮಾಡುವುದಕ್ಕೆ ಸಾಕಾಗುವುದಕ್ಕಿಂತಲೂ ಹೆಚ್ಚು ಸಾಮಗ್ರಿಗಳಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕೆಲಸವನ್ನೆಲ್ಲಾ ಮಾಡುವದಕ್ಕೆ ಸಾಕಾಗುವದಕ್ಕಿಂತಲೂ ಹೆಚ್ಚಾದ ಸಾಮಗ್ರಿಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ದೇವರ ಪವಿತ್ರಸ್ಥಳವನ್ನು ಕಟ್ಟುವ ಕೆಲಸವನ್ನು ಮುಗಿಸುವುದಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಜನರು ತಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 36:7
3 ತಿಳಿವುಗಳ ಹೋಲಿಕೆ  

ಚಾದೋಕ್ ಸಂತಾನದ ಮಹಾಯಾಜಕ ಅಜರ್ಯನು, “ಜನರು ದೇವರಾದ ಸರ್ವೇಶ್ವರನಿಗೆ ಪ್ರತ್ಯೇಕಿಸತಕ್ಕದ್ದನ್ನು ಅವರ ಆಲಯಕ್ಕೆ ತಂದಂದಿನಿಂದ ಸರ್ವೇಶ್ವರ ತಮ್ಮ ಪ್ರಜೆಗೆ ಸಮೃದ್ಧಿಯನ್ನು ಅನುಗ್ರಹಿಸಿದ್ದಾರೆ. ನಾವು ಉಂಡು ತೃಪ್ತರಾಗಿ, ಇನ್ನೂ ಇಷ್ಟು ದೊಡ್ಡ ರಾಶಿಯನ್ನು ಉಳಿಸಿಕೊಂಡಿರುತ್ತೇವೆ,” ಎಂದನು.


ಆಗ ಮೋಶೆ, “ದೇವಮಂದಿರದ ನಿರ್ಮಾಣಕ್ಕಾಗಿ ಯಾವ ಸ್ತ್ರೀಪುರುಷನು ಇನ್ನು ಮುಂದೆ ಏನನ್ನೂ ತರಬಾರದೆಂದು ಅಪ್ಪಣೆಮಾಡಿ, ಪಾಳೆಯದಲ್ಲಿ ಪ್ರಕಟಿಸಿ, ಜನರ ಕಾಣಿಕೆಗಳನ್ನು ನಿಲ್ಲಿಸಿಬಿಟ್ಟನು.


ಸರ್ವೇಶ್ವರನ ಆಲಯದ ಮುಂದಿರುವ ತಾಮ್ರದ ಬಲಿಪೀಠ ಈ ಎಲ್ಲಾ ದಹನಬಲಿದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ‌ ಸಮಾಧಾನ ಬಲಿಯ ಕೊಬ್ಬನ್ನೂ ಹಿಡಿಸುವಷ್ಟು ದೊಡ್ಡದಾಗಿರಲಿಲ್ಲ. ಆದುದರಿಂದ ಸೊಲೊಮೋನನು ಆ ದಿವಸ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ ಅಲ್ಲಿಯೂ ಇವುಗಳನ್ನೆಲ್ಲ ಸಮರ್ಪಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು