Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 35:29 - ಕನ್ನಡ ಸತ್ಯವೇದವು C.L. Bible (BSI)

29 ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದ ಎಲ್ಲ ಕೆಲಸಕಾರ್ಯಗಳಿಗೆ ಬೇಕಾದವುಗಳನ್ನು ಇಸ್ರಯೇಲಿನ ಸ್ತ್ರೀಪುರುಷರೆಲ್ಲರು ಹೃದಯಪೂರ್ವಕವಾಗಿಯೇ ತಂದೊಪ್ಪಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಕಾರ್ಯಗಳಿಗಾಗಿ ಆತನಿಗೆ ಕಾಣಿಕೆಗಳನ್ನು ತಂದುಕೊಡುವುದಕ್ಕೆ ಹೃದಯದಿಂದ ಪ್ರೇರೇಪಿತರಾಗಿ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ತಂದುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಮೋಶೆಯ ಮೂಲಕ ಯೆಹೋವನು ಆಜ್ಞಾಪಿಸಿದ ಎಲ್ಲಾ ಕೆಲಸಗಳಿಗೋಸ್ಕರ ಆತನಿಗೆ ಕಾಣಿಕೆಗಳನ್ನು ತಂದುಕೊಟ್ಟ ಇಸ್ರಾಯೇಲ್ಯರ ಸ್ತ್ರೀಪುರುಷರೆಲ್ಲರೂ ಮನಃಪೂರ್ವಕವಾಗಿಯೇ ಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 ಸಹಾಯ ಮಾಡುವುದಕ್ಕೆ ಬಯಸಿದ ಇಸ್ರೇಲರೆಲ್ಲರೂ ಯೆಹೋವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಈ ಕಾಣಿಕೆಗಳನ್ನು ಗಂಡಸರು ಮತ್ತು ಹೆಂಗಸರು ಕೊಡುವುದಕ್ಕೆ ಬಯಸಿದ್ದರಿಂದ ಉದಾರವಾಗಿ ಕೊಟ್ಟರು. ಯೆಹೋವನು ಮೋಶೆಗೆ ಮತ್ತು ಜನರಿಗೆ ಆಜ್ಞಾಪಿಸಿದ ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಈ ಕಾಣಿಕೆಗಳು ಉಪಯೋಗಿಸಲ್ಪಟ್ಟವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 ಹೀಗೆ ಮಾಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಎಲ್ಲಾ ಕೆಲಸಕ್ಕೋಸ್ಕರ ಬೇಕಾದವುಗಳನ್ನು ಇಸ್ರಾಯೇಲಿನ ಸ್ತ್ರೀಪುರುಷರೆಲ್ಲರು ಮನಃಪೂರ್ವಕವಾಗಿಯೇ ಯೆಹೋವ ದೇವರಿಗೆ ಕಾಣಿಕೆಯನ್ನು ತಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 35:29
25 ತಿಳಿವುಗಳ ಹೋಲಿಕೆ  

ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.


ಮೋಶೆ ಇಸ್ರಯೇಲರ ಇಡೀ ಸಮಾಜವನ್ನು ಉದ್ದೇಶಿಸಿ: “ಸರ್ವೇಶ್ವರನ ಆಜ್ಞೆ ಇದು: ನೀವು ನಿಮ್ಮ ನಿಮ್ಮ ಆಸ್ತಿಪಾಸ್ತಿಯಿಂದ ಸರ್ವೇಶ್ವರನಿಗೆ ಕಾಣಿಕೆಯನ್ನು ಕೊಡಬೇಕು. ಮನಃಪೂರ್ವಕವಾಗಿ ಕೊಡಬೇಕು. ಸರ್ವೇಶ್ವರನಿಗೆ ತರಬೇಕಾದಂಥ ಕಾಣಿಕೆಗಳು ಇವು: ಚಿನ್ನ, ಬೆಳ್ಳಿ, ತಾಮ್ರ,


ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.


ಈ ನಿಯಮವನ್ನು ಅನುಸರಿಸುವ ಎಲ್ಲರಿಗೂ, ಅಂದರೆ ನಿಜ ಇಸ್ರಯೇಲರಾದ ದೇವಜನರೆಲ್ಲರಿಗೂ ಶಾಂತಿಸಮಾಧಾನವೂ ಕೃಪಾಶೀರ್ವಾದವೂ ಲಭಿಸಲಿ!


ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ.


ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ.


ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು


‘ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸೋಣ’ ಎಂದು ಅವರು ಹೇಳುವತನಕ ಅವರಿಗೆ ಜ್ಞಾನೋದಯವಾಗುವುದಿಲ್ಲ.


ನನ್ನ ದೇವರೇ, ನೀವು ಹೃದಯವನ್ನು ಪರೀಕ್ಷಿಸುವವರು ಹಾಗೂ ಯಥಾರ್ಥಚಿತ್ತರನ್ನು ಮೆಚ್ಚುವವರು ಎಂಬುವುದನ್ನು ನಾನು ಬಲ್ಲೆ. ನಾನಿದನ್ನೆಲ್ಲಾ ಅರ್ಪಿಸಿರುವುದು ಶುದ್ಧಮನಸ್ಸಿನಿಂದಲೇ, ಸ್ವಂತ ಇಷ್ಟದಿಂದಲೇ. ಇಲ್ಲಿ ಕೂಡಿರುವ ನಿಮ್ಮ ಪ್ರಜೆಗಳೂ ಸ್ವಂತ ಇಷ್ಟದಿಂದಲೇ ನಿಮಗೆ ಕಾಣಿಕೆಗಳನ್ನು ಅರ್ಪಿಸಿದ್ದಾರೆ ಎಂದು ನೋಡಿ ಸಂತೋಷಿಸುತ್ತೇನೆ.


“ಈ ಪರಿ ಸ್ವೇಚ್ಛೆಯಿಂದ ಕಾಣಿಕೆ ಸಮರ್ಪಿಸಲು ನಾನಾಗಲಿ ನನ್ನ ಪ್ರಜೆಗಳಾಗಲಿ ಸಮರ್ಥರಲ್ಲ. ಸಮಸ್ತವು ನಿಮ್ಮಿಂದಲೇ; ನೀವು ಕೊಟ್ಟಿದ್ದನ್ನೇ ನಿಮಗೆ ಕೊಟ್ಟೆವು.


ಇಸ್ರಯೇಲ್ ಗೋತ್ರ ಕುಟುಂಬಗಳ ಅಧ್ಯಕ್ಷರುಗಳು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಹಾಗೂ ಅರಸನ ಕೆಲಸದವರ ಮುಖ್ಯಸ್ಥರು ದೇವಾಲಯದ ಕೆಲಸಕ್ಕಾಗಿ ಸ್ವೇಚ್ಛೆಯಿಂದ


ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ, ನನ್ನ ದೇವರಾಲಯದ ಮೇಲಣ ಅಭಿಮಾನದಿಂದ ಅದಕ್ಕಾಗಿ ನನ್ನ ಸ್ವಂತ ಸೊತ್ತಿನಿಂದ


ಇಸ್ರಯೇಲಿನಾ ನಾಯಕರೊಡನೆ ಸೇರಿ ಸ್ವೇಚ್ಛೆಯಿಂದ ಸೈನ್ಯಸೇರಿದಾ ಜನರೊಡಗೂಡಿ ನಾ ನಲಿದು ಹಾಡುವೆನು, ಮಾಡಿರಿ ನೀವು ಸರ್ವೇಶ್ವರನ ಗುಣಗಾನವನು;


ಪಣತೊಟ್ಟಿದ್ದರು ಇಸ್ರಯೇಲಿನ ವೀರರು ಸೈನ್ಯಸೇರಿದ್ದಾರೆ ಸ್ವೇಚ್ಛೆಯಿಂದಾ ಜನರು ಮಾಡಿರಿ ನೀವು ಸರ್ವೇಶ್ವರನಾ ಗುಣಗಾನವನು;


ನಾನು ಈಗ ನಿಮಗೆ ತಿಳಿಸುವ ಎಲ್ಲ ಆಜ್ಞಾವಿಧಿಗಳನ್ನು ಅನುಸರಿಸಿ ನಡೆಯಲೇಬೇಕು.


ನಿಮ್ಮ ದೇವರಾದ ಸರ್ವೇಶ್ವರ ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಆಜ್ಞೆಗಳನ್ನು ನೀವು ಕೈಗೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು.


ಅವರು ದೇವಮಂದಿರದ ನಿರ್ಮಾಣಕ್ಕಾಗಿ ಜನರು ಕೊಟ್ಟಿದ್ದ ಕಾಣಿಕೆಗಳನ್ನು ಮೋಶೆಯ ಕೈಯಿಂದ ತೆಗೆದುಕೊಂಡರು. ಇಸ್ರಯೇಲರು ಪ್ರತಿದಿನ ಬೆಳಿಗ್ಗೆ ಮೋಶೆಯ ಬಳಿಗೆ ಬಂದು ಹೆಚ್ಚೆಚ್ಚು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು.


ಅವನ ಪದಾಧಿಕಾರಿಗಳು ಕೂಡ ಜನರಿಗೂ ಯಾಜಕರಿಗೂ ಲೇವಿಯರಿಗೂ ಬಲಿಪಶುಗಳನ್ನು ಸಂತೋಷವಾಗಿ ದಾನಕೊಟ್ಟರು. ದೇವಾಲಯದ ಪ್ರಧಾನರಾದ ಹಿಲ್ಕೀಯ, ಜೆಕರ್ಯ, ಯೆಹೀಯೇಲ್ ಎಂಬುವರು ಯಾಜಕರಿಗೆ ಎರಡು ಸಾವಿರದ ಆರುನೂರು ಪಾಸ್ಕದ ಕುರಿಮರಿಗಳನ್ನೂ ಮುನ್ನೂರು ಹೋರಿಗಳನ್ನೂ ಕೊಟ್ಟರು.


ಅಂದಿನಿಂದ ನಿತ್ಯ ದಹನಬಲಿ ಮತ್ತು ಅಮಾವಾಸ್ಯೆ ಬಲಿ, ಸರ್ವೇಶ್ವರನ ಎಲ್ಲ ಉತ್ಸವದಿನಗಳಿಗೆ ನೇಮಕವಾದ ದಹನಬಲಿ ಹಾಗು, ಜನರು ಸ್ವಂತ ಇಚ್ಛೆಯಿಂದ ತಂದುಕೊಟ್ಟ ಬಲಿದಾನಗಳು, ಇವು ಸರ್ವೇಶ್ವರನಿಗೆ ಸಮರ್ಪಣೆಯಾಗುತ್ತಾ ಬಂದವು.


ನಾನು ಅವರಿಗೆ, ‘ನೀವು ಸರ್ವೇಶ್ವರನ ಸ್ವಕೀಯರು; ಆ ಪಾತ್ರೆಗಳು ಕೂಡ ದೇವರ ವಸ್ತುಗಳು; ಆ ಬೆಳ್ಳಿಬಂಗಾರ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರನಿಗೆ ಸಮರ್ಪಿತವಾದ ಕಾಣಿಕೆ.


ನೀಲಿ, ಊದ, ಕಡುಗೆಂಪುವರ್ಣಗಳುಳ್ಳ ದಾರಗಳು,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು