ವಿಮೋಚನಕಾಂಡ 34:22 - ಕನ್ನಡ ಸತ್ಯವೇದವು C.L. Bible (BSI)22 “ಹೊಸ ಗೋದಿ ಬೆಳೆಯ ಪ್ರಥಮ ಸಮರ್ಪಣೆಯ, ಅಂದರೆ (ಪಾಸ್ಕವಾದ ಏಳು) ವಾರಗಳ ಮೇಲೆ ನೀವು ಸುಗ್ಗಿಹಬ್ಬವನ್ನು ಆಚರಿಸಬೇಕು. ವರ್ಷದ ಕೊನೆಯಲ್ಲಿ ಬೆಳೆ ಒಕ್ಕಣೆಯ ಹಬ್ಬವನ್ನು ಆಚರಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201922 “ಗೋದಿ ಬೆಳೆಯ ಪ್ರಥಮ ಫಲದ ಸಮರ್ಪಣೆಯನ್ನು ಪಸ್ಕಹಬ್ಬವಾಗಿ ಏಳು ವಾರಗಳ ನಂತರ ಸುಗ್ಗಿ ಹಬ್ಬವನ್ನು ಆಚರಿಸುವಾಗ ಸಮರ್ಪಿಸಬೇಕು. ವರ್ಷದ ಅಂತ್ಯದಲ್ಲಿ ಫಲಸಂಗ್ರಹದ ಹಬ್ಬವನ್ನೂ ಆಚರಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)22 [ಪಸ್ಕವಾದ ಏಳು] ವಾರಗಳ ಮೇಲೆ ನಡೆಯುವ ಜಾತ್ರೆ ಅಂದರೆ ಗೋದೀ ಬೆಳೆಯ ಪ್ರಥಮ ಸಮರ್ಪಣದ ಸುಗ್ಗಿಜಾತ್ರೆಯನ್ನೂ ಸಂವತ್ಸರದ ಅಂತ್ಯದಲ್ಲಿ ಫಲಸಂಗ್ರಹದ ಜಾತ್ರೆಯನ್ನೂ ಆಚರಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ22 “ಪ್ರಥಮ ಗೋಧಿ ಸುಗ್ಗಿಯ ವಾರಗಳ ಹಬ್ಬವನ್ನು ಮತ್ತು ವರ್ಷದ ಕೊನೆಯಲ್ಲಿ ಬೆಳೆ ಸಂಗ್ರಹದ ಹಬ್ಬವನ್ನು ಆಚರಿಸಬೇಕು. ಅಧ್ಯಾಯವನ್ನು ನೋಡಿ |