Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 33:22 - ಕನ್ನಡ ಸತ್ಯವೇದವು C.L. Bible (BSI)

22 ನನ್ನ ಮಹಿಮೆ ನಿನ್ನೆದುರಿಗೆ ದಾಟಿ ಹೋಗುವಾಗ ನಾನು ಆ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ, ನಿನ್ನ ಮುಂದೆ ನಾನು ಹಾದುಹೋಗುವ ತನಕ ನಿನ್ನನ್ನು ನನ್ನ ಕೈಯಿಂದ ಮುಚ್ಚುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ನನ್ನ ಮಹಿಮೆಯು ನಿನ್ನೆದುರಿಗೆ ದಾಟಿಹೋಗುವಾಗ ನಾನು ಈ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ ನನ್ನ ಮುಂದೆ ದಾಟಿ ಹೋಗುವ ತನಕ ನಿನ್ನನ್ನು ಕೈಯಿಂದ ಮರೆಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ನನ್ನ ಪ್ರಭಾವವು ನಿನ್ನೆದುರಾಗಿ ದಾಟಿಹೋಗುವ ಕಾಲದಲ್ಲಿ ನಾನು ಈ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ ನಿನ್ನ ಮುಂದೆ ದಾಟಿಹೋಗುವ ತನಕ ನಿನ್ನ ಮೇಲೆ ಕೈ ಮುಚ್ಚುವೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನನ್ನ ಮಹಿಮೆಯು ಆ ಸ್ಥಳದ ಮೂಲಕ ದಾಟಿಹೋಗುವುದು. ನಾನು ನಿನ್ನನ್ನು ಆ ಬಂಡೆಯ ದೊಡ್ಡದಾದ ಬಿರುಕಿನಲ್ಲಿ ಇರಿಸುವೆನು; ನಾನು ದಾಟಿ ಹೋಗುವಾಗ ನನ್ನ ಕೈಯಿಂದ ನಿನ್ನನ್ನು ಮುಚ್ಚುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆಗ ನನ್ನ ಮಹಿಮೆಯು ಹಾದುಹೋಗುವಾಗ, ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ, ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 33:22
12 ತಿಳಿವುಗಳ ಹೋಲಿಕೆ  

ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು I ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು II


ಭೂಮಂಡಲವನ್ನು ಕಂಪನಗೊಳಿಸಲು ಸ್ವಾಮಿ ಎದ್ದಾಗ ಅವರ ಭಯಂಕರ ಕೋಪಕ್ಕೆ ಅಂಜಿ, ಅವರ ಮಹೋನ್ನತ ಮಹಿಮೆಗೆ ಹೆದರಿ, ನುಗ್ಗುವರು ಜನರು ಕಲ್ಲುಬಂಡೆಗಳ ಸಂದುಗೊಂದುಗಳಲ್ಲಿ, ಶಿಲೆಗಳ ಸೀಳುಪಾಳುಗಳಲ್ಲಿ.


ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ I ಆಶ್ರಯಪಡುವೆ ನೀ ಆತನ ರೆಕ್ಕೆಗಳಡಿಯಲಿ I ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ II


ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಆ ಬಂಡೆ.


ಪ್ರತಿಯೊಬ್ಬನೂ ಬಿರುಗಾಳಿಗೆ ತಡೆಯಂತೆ, ಬಿರುಮಳೆಗೆ ಬಿಡಾರದಂತೆ, ಮರುಭೂಮಿಯಲ್ಲಿ ಜಲಧಾರೆಯಂತೆ, ಬೆಂಗಾಡಿನಲ್ಲಿ ಭಾರಿಬಂಡೆಯ ನೆರಳಿನಂತೆ ಇರುವನು.


ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ.


ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II


ನನ್ನ ಪ್ರಿಯನು ಪುರುಷೋತ್ತಮನು ವನವೃಕ್ಷಗಳ ಮಧ್ಯೆ ಸೇಬಿನಂತಿಹನು. ಕುಳಿತು ಸಂತೋಷಗೊಂಡೆ ನಾನದರ ನೆರಳಿನೊಳು ಸಿಹಿ ನನ್ನ ನಾಲಿಗೆಗೆ ಅದರ ಫಲವು.


ಬೆನ್ಯಾಮೀನ್ ಕುಲ ಕುರಿತು ಮೋಶೆ ನುಡಿದದ್ದು : “ಸರ್ವೇಶ್ವರನಿಗೆ ಪ್ರಿಯನಾದ ಇವನು ನಿರ್ಭಯವಾಗಿ ವಾಸಮಾಡುವನು. ಇವನನ್ನಾತ ತಬ್ಬಿರುವನು ದಿನವಿಡೀ ತನ್ನ ತೋಳತೆಕ್ಕೆಯಲಿ.”


ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಆಗ ಅವನಿಗೆ ಸರ್ವೇಶ್ವರನಿಂದ, “ಎಲೀಯನೇ, ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.


ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ.


ಆಕಾಶವನ್ನ ಹರಡಿದೆ; ಭುವಿಯನ್ನು ಸ್ಥಾಪಿಸಿದೆ; ಸಿಯೋನಿಗೆ ‘ನೀನೆನ್ನ ಜನತೆ’ ಎಂದೆ ನಾನಾಡುವುದನೆ ನಿನ್ನಿಂದ ಮಾತನಾಡಿಸಿದೆ, ನಿನ್ನನು ನನ್ನ ಅಂಗೈಯಲಿ ಕೊರೆದು ಕಾದಿಟ್ಟೆ.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು