Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 32:21 - ಕನ್ನಡ ಸತ್ಯವೇದವು C.L. Bible (BSI)

21 ಅಲ್ಲದೆ, ಆರೋನನನ್ನು ಉದ್ದೇಶಿಸಿ, “ನೀನು ಈ ಜನರಿಂದ ಮಹಾಪಾಪವನ್ನು ಮಾಡಿಸಿರುವೆ. ಹೀಗೆ ಮಾಡಿಸಲು ಇವರು ನಿನಗೇನು ಮಾಡಿದರು,” ಎಂದು ವಿಚಾರಿಸಿದನು. ಅದಕ್ಕೆ ಆರೋನನು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆಗ ಮೋಶೆ ಆರೋನನನ್ನು ಕುರಿತು, “ನೀನು ಈ ಜನರಿಂದ ಮಹಾ ಅಪರಾಧವನ್ನು ಮಾಡಿಸಿದಿಯಲ್ಲಾ ಹೀಗೆ ಮಾಡಿಸುವುದಕ್ಕೆ ಇವರು ನಿನಗೇನು ಮಾಡಿದರು?” ಎಂದು ವಿಚಾರಿಸಲು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಆಗ ಅವನು ಆರೋನನನ್ನು - ನೀನು ಈ ಜನರಿಂದ ಮಹಾಪರಾಧವನ್ನು ಮಾಡಿಸಿದಿಯಲ್ಲಾ; ಹೀಗೆ ಮಾಡಿಸುವದಕ್ಕೆ ಇವರು ನಿನಗೇನು ಮಾಡಿದರು ಎಂದು ವಿಚಾರಿಸಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಮೋಶೆಯು ಆರೋನನಿಗೆ, “ಈ ಜನರು ನಿನಗೇನು ಮಾಡಿದರು? ಇಂಥಾ ಕೆಟ್ಟ ಪಾಪವನ್ನು ಮಾಡುವಂತೆ ಯಾಕೆ ಅವರನ್ನು ನಡಿಸಿದೆ?” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಮೋಶೆಯು ಆರೋನನಿಗೆ, “ಈ ಜನರ ಮೇಲೆ ದೊಡ್ಡ ಪಾಪವನ್ನು ನೀನು ಬರಮಾಡುವಂತೆ ಅವರು ನಿನಗೆ ಏನು ಮಾಡಿದರು?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 32:21
11 ತಿಳಿವುಗಳ ಹೋಲಿಕೆ  

ಅನಂತರ ಅವನು ಅಬ್ರಹಾಮನನ್ನು ಕರೆಸಿ, “ನೀನು ನನಗೆ ಮಾಡಿದ್ದೇನು? ಯಾವ ತಪ್ಪಿಗಾಗಿ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಈ ಮಹಾ ಪಾತಕಕ್ಕೆ ಒಳಪಡಿಸಿದೆ? ಮಾಡಬಾರದ ಕಾರ್ಯವನ್ನು ನೀನು ಮಾಡಿದೆ,” ಎಂದು ಹೇಳಿದನು.


ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು,’ ಎನ್ನುತ್ತಾರೆ.


ಯಾರೊಬ್ಬಾಮನ ಪಾಪಗಳ ನಿಮಿತ್ತ ಹಾಗು ಅವನ ಪ್ರೇರಣೆಯಿಂದ ಇಸ್ರಯೇಲರು ಮಾಡಿದ ಪಾಪಗಳ ನಿಮಿತ್ತ ಸರ್ವೇಶ್ವರ ಅವರನ್ನು ಶತ್ರುಗಳಿಗೆ ಒಪ್ಪಿಸುವರು,” ಎಂದು ಆಕೆಗೆ ಹೇಳಿದನು.


ನನ್ನ ಅರಸನಾದ ಒಡೆಯರು ದಯವಿಟ್ಟು ತಮ್ಮ ಸೇವಕನ ಮಾತುಗಳನ್ನು ಆಲಿಸಬೇಕು. ನಿಮ್ಮನ್ನು ನನಗೆ ವಿರೋಧವಾಗಿ ಎತ್ತಿ ಕಟ್ಟಿದವರು ಸರ್ವೇಶ್ವರನೇ ಆಗಿರುವ ಪಕ್ಷದಲ್ಲಿ ಅವರಿಗೆ ಗಮಗಮಿಸುವ ನೈವೇದ್ಯವನ್ನು ಸಮರ್ಪಿಸಬೇಕು. ಮನುಷ್ಯರಾಗಿದ್ದರೆ, ಈಗ ಅವರು ನನಗೆ ಸರ್ವೇಶ್ವರನ ಸೌಭಾಗ್ಯದಲ್ಲಿ ಪಾಲುಸಿಕ್ಕದಂತೆ, ‘ಹೋಗಿ ಅನ್ಯದೇವತೆಗಳನ್ನು ಪೂಜಿಸು’ ಎಂದು ನನ್ನನ್ನು ತಳ್ಳಿಬಿಟ್ಟಿದ್ದಾರೆ. ಆದುದರಿಂದ ಸರ್ವೇಶ್ವರನ ದೃಷ್ಟಿಯಲ್ಲಿ ಅವರು ಶಾಪಗ್ರಸ್ತರಾಗಲಿ!


ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಮಾಡಬಹುದೆ? ನಮ್ಮಲ್ಲಿ ಯಾರಾದರೊಬ್ಬನು ನಿನ್ನ ಹೆಂಡತಿಯನ್ನು ಕೂಡಿರಬಹುದಿತ್ತಲ್ಲವೆ? ಆಗ ನಿನ್ನಿಂದ ನನಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲವೆ?” ಎಂದು ಹೇಳಿದನು.


ಜನರು ಮಾಡಿಸಿಕೊಂಡಿದ್ದ ಆ ಹೋರಿಕರುವನ್ನು ತೆಗೆದು ಬೆಂಕಿಯಿಂದ ಸುಟ್ಟು, ಅರೆದು, ಪುಡಿಪುಡಿಮಾಡಿ, ನೀರಿನಲ್ಲಿ ಕಲಸಿ, ಇಸ್ರಯೇಲರಿಗೆ ಆ ನೀರನ್ನು ಕುಡಿಸಿದನು.


ಒಡೆಯಾ, ಕೋಪಗೊಳ್ಳಬೇಡಿ. ಈ ಜನರು ಎಂಥ ಹಟಮಾರಿಗಳೆಂದು ನೀವೇ ಬಲ್ಲಿರಿ.


ಅದಕ್ಕೆ ಸಮುವೇಲನು, “ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತಿದೆ, ದನಗಳ ಶಬ್ದವು ನನಗೆ ಕೇಳಿಸುತ್ತಿದೆ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು