ವಿಮೋಚನಕಾಂಡ 30:20 - ಕನ್ನಡ ಸತ್ಯವೇದವು C.L. Bible (BSI)20 ಅವರು ದೇವದರ್ಶನದ ಗುಡಾರಕ್ಕೆ ಹೋಗುವಾಗಲೆಲ್ಲಾ ಆ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಹೋಗಬೇಕು. ತೊಳೆಯದೆ ಹೋದರೆ ಸಾಯುವರು. ಹಾಗೆಯೇ ಅವರು ದೇವರ ಸೇವೆಗೈಯುವವರಾಗಿ ಸರ್ವೇಶ್ವರನಾದ ನನಗೆ ದಹನ ಬಲಿಯರ್ಪಿಸಲು ಬಲಿಪೀಠದ ಬಳಿಗೆ ಬರುವಾಗಲೂ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗ ಹಾಗೂ ದೇವರ ಸೇವೆಯನ್ನು ಮಾಡುವವರಾಗಿ ಯೆಹೋವನಿಗೆ ಹೋಮವನ್ನು ಸಮರ್ಪಿಸುವುದಕ್ಕಾಗಿ ಯಜ್ಞವೇದಿಯ ಬಳಿಗೆ ಬರುವಾಗ ಜೀವದಿಂದಿರಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗೆಲ್ಲಾ ಆ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ಹೋಗಬೇಕು; ತೊಳೆಯದೆ ಹೋದರೆ ಸತ್ತಾರು. ಹಾಗೆಯೇ ಅವರು ದೇವರ ಸೇವೆಯನ್ನು ನಡಿಸುವವರಾಗಿ ಯೆಹೋವನಿಗೆ ಹೋಮಸಮರ್ಪಣೆಗಾಗಿ ಯಜ್ಞವೇದಿಯ ಬಳಿಗೆ ಬರುವಾಗಲೂ ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು; ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಪ್ರತಿಸಾರಿ ದೇವದರ್ಶನಗುಡಾರಕ್ಕೆ ಪ್ರವೇಶಿಸುವಾಗ ಅಥವಾ ಯೆಹೋವನಿಗಾಗಿ ಸರ್ವಾಂಗಹೋಮಗಳನ್ನು ಅರ್ಪಿಸಲು ಯಜ್ಞವೇದಿಕೆಯ ಹತ್ತಿರಕ್ಕೆ ಬರುವಾಗ ಅವರು ನೀರಿನಿಂದ ತೊಳೆದುಕೊಳ್ಳಬೇಕು. ಆಗ ಅವರು ಸಾಯುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು. ಅಧ್ಯಾಯವನ್ನು ನೋಡಿ |