Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 29:9 - ಕನ್ನಡ ಸತ್ಯವೇದವು C.L. Bible (BSI)

9 ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕ ಸೇವೆಗೆ ಸೇರಿಸು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತ ನಿಯಮವಾಗಿ ಪ್ರಾಪ್ತಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಇಡಬೇಕು. ಅಂದಿನಿಂದ ಯಾಜಕತ್ವವು ಅವರಿಗೆ ಶಾಶ್ವತವಾದ ಹಕ್ಕಾಗಿರುವುದು. ಹೀಗೆ ಆರೋನನೂ ಅವನ ಮಕ್ಕಳೂ ಯಾಜಕ ಸೇವೆಗೆ ಪ್ರತಿಷ್ಠಿತರಾಗಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆರೋನನಿಗೂ ಅವನ ಮಕ್ಕಳಿಗೂ ನಡುಕಟ್ಟುಗಳನ್ನು ಕಟ್ಟಿಸಿ ಮುಂಡಾಸಗಳನ್ನು ಸುತ್ತಿಸಬೇಕು. ಆ ಹೊತ್ತಿನಿಂದ ಯಾಜಕತ್ವವು ಶಾಶ್ವತವಾದ ನಿಯಮದಿಂದ ಅವರಿಗೆ ಉಂಟಾಗುವದು. ಹೀಗೆ ಆರೋನನನ್ನೂ ಅವನ ಮಕ್ಕಳನ್ನೂ ಯಾಜಕೋದ್ಯೋಗಕ್ಕೆ ಸೇರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಬಳಿಕ ಅವರ ಸೊಂಟಗಳಿಗೆ ನಡುಕಟ್ಟುಗಳನ್ನು ಸುತ್ತಿಸು. ಅಂದಿನಿಂದ ಅವರು ಯಾಜಕರಾಗಿರುವರು. ವಿಶೇಷವಾದ ಈ ಕಟ್ಟಳೆಯು ಶಾಶ್ವತವಾಗಿರುವುದರಿಂದ ಅವರು ಯಾಜಕರಾಗಿರುವರು. ಹೀಗೆ ಆರೋನನನ್ನೂ ಅವನ ಪುತ್ರರನ್ನೂ ನೀನು ಯಾಜಕರನ್ನಾಗಿ ಮಾಡುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಆರೋನನಿಗೂ ಅವನ ಪುತ್ರರಿಗೂ ಮುಂಡಾಸುಗಳನ್ನು ಇಟ್ಟು ನಡುಕಟ್ಟುಗಳನ್ನು ಕಟ್ಟಬೇಕು, ಅವರಿಗೆ ಹೀಗೆ ಅವರಿಗೆ ಯಾಜಕತ್ವ ಸೇವೆಯು ಶಾಶ್ವತ ಕಟ್ಟಳೆಯಾಗಿರುವುದು. “ಈ ರೀತಿಯಾಗಿ ಆರೋನನನ್ನೂ ಅವನ ಪುತ್ರರನ್ನೂ ನೀನು ಪ್ರತಿಷ್ಠೆ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 29:9
22 ತಿಳಿವುಗಳ ಹೋಲಿಕೆ  

ನೀನು ಮತ್ತು ನಿನ್ನ ಸಂತತಿಯವರು ಯಾಜಕ ಕರ್ತವ್ಯಗಳನ್ನು ಕೈಗೊಂಡು ಬಲಿಪೀಠದ ಮತ್ತು ಗರ್ಭಗುಡಿಯ ಸೇವೆಯನ್ನು ನಡೆಸಬೇಕು. ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು. ಯಾಜಕ ಪದವಿಯನ್ನು ನಿಮಗೆ ಅನುಗ್ರಹಿಸಿದ್ದೇನೆ. ಇತರರು ಅದಕ್ಕೆ ಕೈಹಾಕಬಾರದು. ಹಾಕಿದರೆ ಅಂಥವರಿಗೆ ಮರಣಶಿಕ್ಷೆಯಾಗಬೇಕು.”


ನಿಮ್ಮ ದೇವರಾದ ಸರ್ವೇಶ್ವರ ನಿಮ್ಮ ಎಲ್ಲ ಕುಲಗಳಲ್ಲಿ ಲೇವಿಯನನ್ನು, ಇವನ ತರುವಾಯ ಇವನ ಸಂತತಿಯವರನ್ನು, ತಮ್ಮ ಸನ್ನಿಧಿಯಲ್ಲಿ ಶಾಶ್ವತವಾಗಿ ಸೇವೆಮಾಡುವುದಕ್ಕೆ ತಾವೇ ನೇಮಿಸಿಕೊಂಡು ಇದ್ದಾರಲ್ಲವೆ?


ಆ ಒಪ್ಪಂದವೇನೆಂದರೆ ಅವನಿಗೂ ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ವಾಗ್ದಾನ ಮಾಡುತ್ತೇನೆ. ಅವನು ತನ್ನ ದೇವರ ಗೌರವದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾನೆ; ಇಸ್ರಯೇಲರ ದೋಷಕ್ಕಾಗಿ ಪ್ರಾಯಶ್ಚಿತ್ತ ಮಾಡಿದ್ದಾನೆ. ಆದ್ದರಿಂದ ಅವನಿಗೇ ಈ ವಾಗ್ದಾನ ಮಾಡಿದ್ದೇನೆ.”


ಆರೋನನ ಸಂತತಿಯವರಲ್ಲದೆ ಇತರರು ಸರ್ವೇಶ್ವರನ ಸನ್ನಿಧಿಗೆ ಬಂದು ಧೂಪವನ್ನು ಅರ್ಪಿಸಬಾರದು; ಅರ್ಪಿಸಿದರೆ ಕೋರಹನಿಗೂ ಅವನ ಪಂಗಡದವರಿಗೂ ಆದ ಗತಿಗೆ ಗುರಿಯಾಗುವರು ಎಂದು ಇಸ್ರಯೇಲರಿಗೆ ಎಚ್ಚರಿಕೆ ನೀಡುವ ಚಿನ್ಹೆಯಾಯಿತು.


ಸರ್ವೇಶ್ವರನ ಬಳಿಯಿಂದ ಬೆಂಕಿ ಹೊರಟು ಧೂಪಾರತಿಯನ್ನು ಅರ್ಪಿಸುತ್ತಿದ್ದ ಆ 250 ಮಂದಿಯನ್ನು ಭಸ್ಮಮಾಡಿತು.


ಇದು ಕೋರಹನಾದ ನಿನಗೂ ನಿನ್ನ ಸ್ವಕುಲದವರಾದ ಲೇವಿಯರಿಗೂ ಕೇವಲ ಅಲ್ಪಕಾರ್ಯವೆಂದು ತೋರಿತೇ? ಯಾಜಕ ಪದವಿ ನಿಮಗಾಗಬೇಕೆಂದು ಕೋರುತ್ತೀರೋ?


ಯಾಜಕ ಸೇವಾವೃತ್ತಿಯನ್ನು ಕೈಗೊಳ್ಳುವುದಕ್ಕೆ ಆರೋನನನ್ನು ಹಾಗೂ ಅವನ ಮಕ್ಕಳನ್ನು ನೇಮಿಸು. ಬೇರೆ ಯಾರಾದರು ಆ ವೃತ್ತಿಗೆ ಕೈ ಹಾಕಿದರೆ ಅಂಥವನಿಗೆ ಮರಣ ಶಿಕ್ಷೆಯಾಗಬೇಕು.


ಇದಲ್ಲದೆ, ಈ ನಿಮ್ಮ ಯಾಜಕ ಸೇವಾವೃತ್ತಿಯ ದೀಕ್ಷೆಯನ್ನು ಪೂರೈಸುವುದಕ್ಕೆ ಏಳು ದಿವಸ ಹಿಡಿಯುವುದರಿಂದ ಆವರೆಗೂ ನೀವು ದೇವದರ್ಶನದ ಗುಡಾರದ ಬಾಗಿಲಿನ ಆಚೆಗೆ ಹೋಗಬಾರದು.


ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನು ಕೂಡ ಅಭಿಷೇಕಿಸು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು,” ಎಂದು ಹೇಳಿದರು.


ಅಲ್ಲದೆ, ದೇವರಿಂದ, “ಮೆಲ್ಕಿಸದೇಕನ ಪರಂಪರೆಗೆ ಸೇರಿದ ಪ್ರಧಾನಯಾಜಕ,” ಎನಿಸಿಕೊಂಡರು.


ಮೋಶೆ ಆ ಲೇವಿಯರಿಗೆ, “ಈದಿನ ನಿಮ್ಮಲ್ಲಿ ಪ್ರತಿಯೊಬ್ಬನು ಮಗನನ್ನಾದರೂ ಅಣ್ಣತಮ್ಮಂದಿರನ್ನಾದರೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ನಿಮ್ಮನ್ನೇ ಸರ್ವೇಶ್ವರನ ಸೇವೆಗೆ ಪ್ರತಿಷ್ಠಾಪಿಸಿಕೊಂಡಿದ್ದೀರಿ. ಆದ್ದರಿಂದ ಅವರು ಈ ದಿನ ನಿಮ್ಮನ್ನು ಆಶೀರ್ವದಿಸಿರುವರು,” ಎಂದು ಹೇಳಿದನು.


:ನನಗೆ ಯಾಜಕಸೇವೆ ಮಾಡಲು ನೀನು ನಿನ್ನ ಅಣ್ಣ ಆರೋನನನ್ನು ಮತ್ತು ಅವನ ಮಕ್ಕಳಾದ ನಾದಾಬ್, ಅಬೀಹು, ಎಲ್ಲಾಜಾರ್ ಹಾಗು ಈತಾಮಾರ್ ಎಂಬುವರನ್ನು ಇಸ್ರಯೇಲರ ಮಧ್ಯೆಯಿಂದ ನನ್ನ ಬಳಿಗೆ ಕರೆದುಕೊಂಡು ಬಾ.


ದೇವದರ್ಶನದ ಗುಡಾರದಲ್ಲಿ, ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಮುಂಜಾನೆಯವರೆಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವನ್ನು ಇಸ್ರಯೇಲರು ಮತ್ತು ಅವರ ಸಂತತಿಯವರು ತಲತಲಾಂತರದವರೆಗೂ ಅನುಸರಿಸಬೇಕು.


ಸರ್ವೇಶ್ವರ ಸ್ವಾಮಿ ಮೋಶೆಗೆ:


ಅನಂತರ ಸರ್ವೇಶ್ವರ ಆಜ್ಞಾಪಿಸಿದಂತೆ ಮೋಶೆ ಆರೋನನ ಮಕ್ಕಳನ್ನು ಹತ್ತಿರಕ್ಕೆ ಕರೆದು, ಅವರಿಗೆ ನಿಲುವಂಗಿಗಳನ್ನು ತೊಡಿಸಿ, ನಡುಕಟ್ಟುಗಳನ್ನು ಸುತ್ತಿ, ಪೇಟಗಳನ್ನು ತೊಡಿಸಿದನು.


ನಿನ್ನ ಗೋತ್ರದವರೂ ಸಂತಾನದವರೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಯೇಲರ ದೇವರಾದ ಸರ್ವೇಶ್ವರನೆಂಬ ನಾನು ಈಗ ತಿಳಿಸುವುದನ್ನು ಕೇಳು: ಇನ್ನು ಇದೆಲ್ಲ ನನ್ನಿಂದ ದೂರ ತೊಲಗಲಿ; ನನ್ನನ್ನು ಸನ್ಮಾನಿಸುವವನನ್ನು ನಾನು ಸನ್ಮಾನಿಸುವೆನು; ನನ್ನನ್ನು ಉಪೇಕ್ಷಿಸುವವನನ್ನು ನಾನು ತಿರಸ್ಕರಿಸುವೆನು.


ಈ ಮೀಕನು ‘ಏಫೋದ’ನ್ನೂ ವಿಗ್ರಹಗಳನ್ನೂ ಮಾಡಿಸಿ ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು ತನ್ನ ಕುಮಾರರಲ್ಲೊಬ್ಬನನ್ನು ಅರ್ಚಕ ಸೇವೆಗೆ ಪ್ರತಿಷ್ಠಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು