Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 29:38 - ಕನ್ನಡ ಸತ್ಯವೇದವು C.L. Bible (BSI)

38 ಬಲಿಪೀಠದ ಮೇಲೆ ಅನುದಿನವೂ ಸಮರ್ಪಿಸಬೇಕಾದುವುಗಳು ಇವು: ಒಂದು ವರ್ಷದ ಎರಡು ಕುರಿಗಳನ್ನು ದಿನಂಪ್ರತಿ ಬಲಿದಾನ ಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

38 ಯಜ್ಞವೇದಿಯ ಮೇಲೆ ನಿತ್ಯವೂ ಸಮರ್ಪಿಸಬೇಕಾದವುಗಳು, ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನವೂ ಹೋಮಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

38 ಯಜ್ಞವೇದಿಯ ಮೇಲೆ ನಿತ್ಯವೂ ಸಮರ್ಪಿಸಬೇಕಾದದ್ದೇನಂದರೆ - ಒಂದು ವರುಷದ ಎರಡು ಕುರಿಗಳನ್ನು ದಿನಂಪ್ರತಿಯೂ ಹೋಮಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

38 “ಯಜ್ಞವೇದಿಕೆಯ ಮೇಲೆ ಪ್ರತಿದಿನ ಯಜ್ಞವನ್ನು ಸಮರ್ಪಿಸಬೇಕು. ಒಂದು ವರ್ಷದ ಎರಡು ಕುರಿಮರಿಗಳನ್ನು ನೀನು ವಧಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

38 “ಬಲಿಪೀಠದ ಮೇಲೆ ನೀನು ಅರ್ಪಿಸಬೇಕಾದದ್ದು ಇದೇ: ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಟ್ಟುಬಿಡದೆ ದಹನಬಲಿಯಾಗಿ ಅರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 29:38
25 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಇಸ್ರಯೇಲರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ಬಲಿಪೀಠದ ಮೇಲೆ ಪ್ರತೀದಿನ ಮುಂಜಾನೆ ಹಾಗು ಸಂಜೆ ದಹನಬಲಿಯರ್ಪಿಸಬೇಕಾಗಿ ಇತ್ತು.


ಅನುದಿನದ ಬಲಿ ನಿಂತುಹೋಗುವುದು. ‘ವಿನಾಶಕರ ವಿಕಟ ಮೂರ್ತಿ’ ಪ್ರತಿಷ್ಠಿತವಾದ ಮೇಲೆ 1290 ದಿನಗಳು ಕಳೆಯಬೇಕು.


ಇದಲ್ಲದೆ, ಅವನು ಸರ್ವೇಶ್ವರನ ಧರ್ಮಶಾಸ್ತ್ರ ವಿಧಿಗನುಸಾರ ಬೆಳಿಗ್ಗೆ, ಸಂಜೆ, ಸಬ್ಬತ್‍ದಿನ, ಅಮಾವಾಸ್ಯೆ ಹಾಗು ಜಾತ್ರೆಗಳಲ್ಲಿ ಸಮರ್ಪಣೆ ಆಗತಕ್ಕ ದಹನ ಬಲಿಗಳಿಗೆ ಬೇಕಾದುದನ್ನೆಲ್ಲಾ ತನ್ನ ಆಸ್ತಿಯಿಂದಲೇ ಸಲ್ಲಿಸಲಾಗುವುದೆಂದು ಸೂಚಿಸಿದನು.


ಈ ಯಾಜಕರು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸರ್ವೇಶ್ವರನಿಗಾಗಿ ದಹನಬಲಿಗಳನ್ನು ಸಮರ್ಪಿಸುತ್ತಾ, ಸುಗಂಧದ್ರವ್ಯಗಳ ಧೂಪಾರತಿ ಎತ್ತುತ್ತಾ, ಚೊಕ್ಕಬಂಗಾರದ ಮೇಜಿನ ಮೇಲೆ ನೈವೇದ್ಯವಾದ ರೊಟ್ಟಿಗಳನ್ನಿಡುತ್ತಾ, ಪ್ರತೀ ಸಾಯಂಕಾಲ ಬಂಗಾರದ ದೀಪಸ್ತಂಭದ ದೀಪಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ನಾವು ನಮ್ಮ ದೇವರಾದ ಸರ್ವೇಶ್ವರನ ಕಟ್ಟಳೆಗಳನ್ನು ಕೈಕೊಳ್ಳುತ್ತೇವೆ; ನೀವಾದರೋ ಅವರನ್ನು ತೊರೆದುಬಿಟ್ಟವರು.


ಈಗ ನಾನು ನನ್ನ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಿಸಬೇಕೆಂದಿದ್ದೇನೆ. ಇಸ್ರಯೇಲರಿಗಿರುವ ಶಾಶ್ವತ ನಿಯಮದ ಪ್ರಕಾರ ಅವರ ಸನ್ನಿಧಿಯಲ್ಲಿ ಸುಗಂಧ ದ್ರವ್ಯಗಳಿಂದ ಧೂಪಾರತಿ ಎತ್ತಬೇಕಾಗಿದೆ. ಪ್ರತಿನಿತ್ಯ ನೈವೇದ್ಯದ ರೊಟ್ಟಿಗಳನ್ನಿಡಬೇಕಾಗಿದೆ; ಬೆಳಿಗ್ಗೆ, ಸಂಜೆ, ಸಬ್ಬತ್‍ದಿನ, ಅಮಾವಾಸ್ಯೆ ಹಾಗೂ ನಮ್ಮ ದೇವರಾದ ಸರ್ವೇಶ್ವರನ ಜಾತ್ರೆಯ ವೇಳೆಗಳಲ್ಲಿ ದಹನಬಲಿಗಳನ್ನು ಅರ್ಪಿಸಬೇಕಾಗಿದೆ. ಇದಕ್ಕಾಗಿ ಒಂದು ಆಲಯವನ್ನು ಅವರಿಗೆ ಪ್ರತಿಷ್ಠಿಸಬೇಕೆಂದಿದ್ದೇನೆ.


ಆ ರಾಜನು ಏಳು ವರ್ಷ ಗಳ ಮಟ್ಟಿಗೆ ಬಹುಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ಈ ಅವಧಿಯ ಅರ್ಧಭಾಗದಲ್ಲಿ ಬಲಿನೈವೇದ್ಯಗಳನ್ನು ನಿಲ್ಲಿಸಿಬಿಡುವನು. ದೇವಾಲಯದ ರೆಕ್ಕೆಯ ಮೇಲೆ ಅಸಹ್ಯವಾದುದನ್ನು ಸ್ಥಾಪಿಸಲಾಗುವುದು. ಅವನ್ನು ಅಲ್ಲಿ ಇಟ್ಟು ಅಶುದ್ಧಗೊಳಿಸಿದ ಘಾತುಕನು ನಿಶ್ಚಿತ ಪ್ರಳಯದಲ್ಲಿ ಮುಳುಗುವ ತನಕ ಅವು ಅಲ್ಲೇ ಇರುವುವು.”


ಸುತ್ತಮುತ್ತಲಿನ ಜನರಿಗೆ ಅವರು ಹೆದರಿದರು. ಈ ಕಾರಣ ಪೀಠವನ್ನು ಅದರ ಸ್ಥಳದಲ್ಲೇ ಕಟ್ಟಿ, ಅದರ ಮೇಲೆ ಸರ್ವೇಶ್ವರನಿಗೆ, ಬೆಳಿಗ್ಗೆ ಹಾಗು ಸಂಜೆ ವೇಳೆಯ ದಹನಬಲಿ ದಾನಗಳನ್ನು ಅರ್ಪಿಸಿದರು.


ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ.


ಇವರು ಮಿಕ್ಕ ಪ್ರಧಾನಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು.


ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು, “ಇಗೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ.


ಹೀಗೆ ಪ್ರಾರ್ಥನೆ ಮಾಡುತ್ತಿರುವಾಗಲೇ, ಮೊದಲು ನನ್ನ ಕನಸಿನಲ್ಲಿ ಕಂಡ ಗಬ್ರಿಯೇಲೆಂಬ ವ್ಯಕ್ತಿ ಅಸುರುಸುರಾಗಿ ಹಾರಿಬಂದು, ಸಂಧ್ಯಾನೈವೇದ್ಯ ಸಮಯದಲ್ಲಿ ನನ್ನನ್ನು ಸೇರಿ, ನನ್ನೊಂದಿಗೆ ಮಾತಾಡಿ, ಹೀಗೆಂದು ಉಪದೇಶ ಮಾಡಿದನು:


ಹೋಗುತ್ತಾ ಇದ್ದಾಗ ಇಸಾಕನು ತಂದೆ ಅಬ್ರಹಾಮನನ್ನು, “ಅಪ್ಪಾ” ಎಂದು ಕರೆದ; “ಏನು ಮಗನೇ?” ಎಂದ ಅಬ್ರಹಾಮ. ಇಸಾಕನು, “ಬೆಂಕಿ-ಕಟ್ಟಿಗೆಯೇನೋ ಇದೆ; ಆದರೆ ದಹನಬಲಿಗೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದ.


ಸರ್ವೇಶ್ವರ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠವನ್ನಿಟ್ಟು ಅದರ ಮೇಲೆ ದಹನಬಲಿಯನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು.


ಆರೋನನ ವಂಶಜರಾದ ಯಾಜಕರು ಅದನ್ನು ಬಲಿಪೀಠದಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ದಹನಬಲಿಪದಾರ್ಥಗಳೊಡನೆ ಹೋಮಮಾಡಬೇಕು. ಅದು ಸರ್ವೇಶ್ವರನಿಗೆ ಪ್ರಿಯವಾದ ಸುಗಂಧ ಬಲಿಯಾಗಿರುವುದು.


“ನೀನು ಆರೋನನಿಗೂ ಅವನ ವಂಶದವರಿಗೂ ಈ ಕೆಳಕಂಡ ದಹನ ಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನ ಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು.


ಅಮಾವಾಸ್ಯೆಯಲ್ಲೂ ಪ್ರತಿದಿನವೂ ಸಲ್ಲಿಸುವ ದಹನಬಲಿಗಳ ಹಾಗು ಅವುಗಳಿಗೆ ಸಂಬಂಧಿಸಿದ ಧಾನ್ಯ-ಪಾನ ನೈವೇದ್ಯಗಳ ಜೊತೆಗೆ ಮೇಲೆ ಹೇಳಿದ ಬಲಿಗಳನ್ನು ಕೂಡ ಸಮರ್ಪಿಸಬೇಕು. ಅವು ಸರ್ವೇಶ್ವರನಿಗೆ ಸುಗಂಧಕರವಾದ ದಹನಬಲಿಯಾಗಿರುವುವು.


ಮೋಶೆಯ ಆಜ್ಞೆಯಂತೆ, ಸಬ್ಬತ್‍ದಿನ, ಅಮಾವಾಸ್ಯೆ, ಇವುಗಳಲ್ಲೂ ಹುಳಿರಹಿತ ರೊಟ್ಟಿಗಳ ಜಾತ್ರೆ, ಪಂಚಾಶತ್ತಮ ದಿನದ ಜಾತ್ರೆ, ಪರ್ಣಕುಟೀರಗಳ ಜಾತ್ರೆ ಎಂಬೀ ಮೂರು ವಾರ್ಷಿಕ ಜಾತ್ರೆಗಳಲ್ಲೂ ಆಯಾ ದಿವಸಗಳಿಗೆ ನೇಮಕವಾದ ದಹನಬಲಿಗಳನ್ನು ಸಮರ್ಪಿಸುತ್ತಿದ್ದನು.


ಅಂದಿನಿಂದ ನಿತ್ಯ ದಹನಬಲಿ ಮತ್ತು ಅಮಾವಾಸ್ಯೆ ಬಲಿ, ಸರ್ವೇಶ್ವರನ ಎಲ್ಲ ಉತ್ಸವದಿನಗಳಿಗೆ ನೇಮಕವಾದ ದಹನಬಲಿ ಹಾಗು, ಜನರು ಸ್ವಂತ ಇಚ್ಛೆಯಿಂದ ತಂದುಕೊಟ್ಟ ಬಲಿದಾನಗಳು, ಇವು ಸರ್ವೇಶ್ವರನಿಗೆ ಸಮರ್ಪಣೆಯಾಗುತ್ತಾ ಬಂದವು.


ಜನರು ತಂದ ನೈವೇದ್ಯ ದ್ರವ್ಯಗಳಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಬೆಳಿಗ್ಗೆಯ ದಹನಬಲಿಯ ಜೊತೆಗೆ ಅದನ್ನು ಪೀಠದ ಮೇಲೆ ಹೋಮಮಾಡಿದನು.


ಇದಲ್ಲದೆ, ಟೈರಿನ ಅರಸ ಹೂರಾಮನಿಗೆ ದೂತರ ಮುಖಾಂತರ, “ನನ್ನ ತಂದೆ ದಾವೀದ ತಮ್ಮ ವಾಸಕ್ಕೆ ಅರಮನೆಯನ್ನು ಕಟ್ಟಿಸಿಕೊಳ್ಳುವುದಕ್ಕಾಗಿ ನೀನು ದೇವದಾರು ಮರಗಳನ್ನು ಕಳುಹಿಸಿದೆ.


ಅದರ ಮಂಟಪದ ಬಾಗಿಲುಗಳನ್ನು ಮುಚ್ಚಿ, ದೀಪಗಳನ್ನು ನಂದಿಸಿದರು; ಇಸ್ರಯೇಲ್‍ದೇವರ ಪವಿತ್ರಸ್ಥಾನದಲ್ಲಿ ಧೂಪಾರತಿ ಎತ್ತುವುದನ್ನೂ ದಹನಬಲಿ ಸಮರ್ಪಿಸುವುದನ್ನೂ ನಿಲ್ಲಿಸಿಬಿಟ್ಟರು.


“ನೀನು ಕಳಂಕರಹಿತವಾದ ಒಂದು ವರ್ಷದ ಕುರಿಯನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ದಿನಂಪ್ರತಿ ಅರ್ಪಿಸಬೇಕು; ಪ್ರತಿದಿನ ಬೆಳಿಗ್ಗೆ ಅದನ್ನು ಅರ್ಪಿಸತಕ್ಕದ್ದು.


ಯಾಜಕರು ಕುರಿಯನ್ನೂ ಧಾನ್ಯನೈವೇದ್ಯವನ್ನೂ ಎಣ್ಣೆಯನ್ನೂ ನಿತ್ಯದಹನ ಬಲಿಯಾಗಿ ಪ್ರತಿದಿನ ಬೆಳಿಗ್ಗೆ ಸಮರ್ಪಿಸಬೇಕು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು