Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 28:9 - ಕನ್ನಡ ಸತ್ಯವೇದವು C.L. Bible (BSI)

9 ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಮತ್ತು ನೀನು ಎರಡು ಗೋಮೇಧಕ ಅಮೂಲ್ಯರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಮತ್ತು ನೀನು ಎರಡು ಗೋಮೇಧಕರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಾಯೇಲ್ಯರ ಕುಲಗಳ ಹೆಸರುಗಳನ್ನು ಕೆತ್ತಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ಎರಡು ಗೋಮೇಧಕ ರತ್ನಗಳನ್ನು ತೆಗೆದುಕೊ. ಈ ರತ್ನಗಳ ಮೇಲೆ ಇಸ್ರೇಲನ ಹನ್ನೆರಡು ಗಂಡುಮಕ್ಕಳ ಹೆಸರನ್ನು ಬರೆಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ನೀನು ಎರಡು ಗೋಮೇಧಿಕ ರತ್ನಗಳನ್ನು ತೆಗೆದುಕೊಂಡು ಇಸ್ರಾಯೇಲರ ಮಕ್ಕಳ ಹೆಸರುಗಳನ್ನು ಅವುಗಳ ಮೇಲೆ ಕೆತ್ತಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 28:9
16 ತಿಳಿವುಗಳ ಹೋಲಿಕೆ  

ನೀನಿದ್ದೆ ದೇವರ ಉದ್ಯಾನವನದ ಏದೆನಿನೊಳು ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ಬೆರುಲ್ಲ, ವೈಡೂರ್ಯ, ನೀಲ, ಕೆಂಪರಲು, ಸ್ಫಟಿಕವೆಂಬ ನವರತ್ನಗಳಿಂದ ಭೂಷಿತನಾಗಿದ್ದೆ ನೀನು. ನಿನ್ನ ಕಿವಿಯೋಲೆ ಆಭರಣಗಳು ಸುವರ್ಣಖಚಿತವಾಗಿದ್ದವು. ನಿನ್ನ ಸೃಷ್ಟಿಯ ದಿನದಂದೇ ಸಿದ್ಧವಾಗಿದ್ದವವು.


ನೋಡು, ನಿನ್ನ ಚಿತ್ರ ಕೊರೆದಿದೆ ನನ್ನ ಅಂಗೈಗಳಲೆ ನಿನ್ನ ಪೌಳಿಗೋಡೆಗಳು ಇವೆ ಸದಾ ನನ್ನ ಕಣ್ಣೆದುರಿನಲೆ.


ನಿನ್ನ ವೃಕ್ಷದಲಿ, ನಿನ್ನ ಹಸ್ತಗಳಲಿ ಧರಿಸಿಕೊ ನನ್ನನ್ನು ಪ್ರೇಮ ಮುದ್ರೆಯಾಗಿ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ ! ಮತ್ಸರ ಪಾತಾಳದಷ್ಟು ಕ್ರೂರಿ ಅದರ ಜ್ವಾಲೆ ಬೆಂಕಿಯ ಉರಿ ಧಗಧಗಿಸುವ ಕೋಪಾಗ್ನಿ.


ಓಫೀರ್ ದೇಶದ ಅಪರಂಜಿಯಿಂದಲೂ ಅಮೂಲ್ಯ ಗೋಮೇಧಿಕ-ಇಂದ್ರನೀಲದಿಂದಲೂ ಸುಜ್ಞಾನದ ಮೌಲ್ಯವನ್ನು ಗೊತ್ತುಮಾಡಲಾಗದು.


ಹೀಗಿರಲು, ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ ಇವುಗಳ ಕೆಲಸಮಾಡುವುದರಲ್ಲಿ, ಊದಾ, ಕೆಂಪು, ನೀಲವರ್ಣಗಳ ಬಟ್ಟೆಯನ್ನು ನೇಯುವುದರಲ್ಲಿ ಹಾಗೂ ಚಿತ್ರ ಕೆತ್ತುವುದರಲ್ಲಿ ನಿಪುಣನಾದ ಒಬ್ಬ ವ್ಯಕ್ತಿಯನ್ನು ನನ್ನ ಬಳಿಗೆ ಕಳುಹಿಸು; ನನ್ನ ತಂದೆ ಗೊತ್ತುಮಾಡಿದಂಥ ಮತ್ತು ನನ್ನೊಡನೆ ಜುದೇಯದಲ್ಲೂ, ಜೆರುಸಲೇಮಿನಲ್ಲೂ ಇರುವಂಥ ಕಲಾಕುಶಲರೊಂದಿಗೆ ಅವನು ಕೆಲಸಮಾಡಲಿ.


ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ, ವೈಢೂರ್ಯಗಳೂ ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಲಾಗಿದ್ದವು.


ಮುದ್ರಾರತ್ನವನ್ನು ಕೆತ್ತುವ ರೀತಿಯಲ್ಲಿ ಎರಡು ಗೋಮೇಧಕ ರತ್ನಗಳಲ್ಲಿ ಇಸ್ರಯೇಲರ ಹನ್ನೆರಡು ಕುಲಗಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಕಟ್ಟಿದರು.


“ಚೊಕ್ಕ ಬಂಗಾರದ ಪಟ್ಟಿಯೊಂದನ್ನು ಮಾಡಿಸಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರ ಮೇಲೆ ‘ಸರ್ವೇಶ್ವರನಿಗೆ ಮೀಸಲು’ ಎಂಬ ಲಿಪಿಯನ್ನು ಕೆತ್ತಿಸಬೇಕು.


ನಾಲ್ಕನೆಯ ಸಾಲಿನಲ್ಲಿ ಪೀತರತ್ನ, ಬೆರುಲ್ಲ ಹಾಗು ವೈಢೂರ್ಯಗಳನ್ನು ಚಿನ್ನದ ಜವೆಯ ಕಲ್ಲುಗಳಲ್ಲಿ ಸೇರಿಸಬೇಕು.


‘ಬದೋಲಖ’ ಎಂಬ ವಿಶೇಷ ಸಾಂಬ್ರಾಣಿ, ‘ಗೋಮೇಧಿಕ’ ಎಂಬ ರತ್ನವೂ ಅಲ್ಲಿ ದೊರಕುತ್ತವೆ.


ಕವಚದ ಮೇಲಿರುವ ಕಸೂತಿ ಕೆಲಸದ ನಡುಕಟ್ಟು ಕವಚದ ಅಂಗವಾಗಿರಬೇಕು. ಅದರಂತೆಯೇ ಹುರಿನಾರಿನ ಬಟ್ಟೆಯಿಂದ ಮಾಡಿರಬೇಕು. ಚಿನ್ನದ ದಾರದಿಂದಲೂ ನೀಲಿ, ಊದ, ಕಡುಗೆಂಪು ವರ್ಣಗಳುಳ್ಳ ದಾರದಿಂದಲೂ ಅಲಂಕೃತವಾಗಿರಬೇಕು.


ಒಂದು ರತ್ನದಲ್ಲಿ ಆರು ಹೆಸರುಗಳನ್ನು ಮತ್ತೊಂದು ರತ್ನದಲ್ಲಿ ಮಿಕ್ಕ ಆರು ಹೆಸರುಗಳನ್ನು ಅವರವರ ಜನನದ ಕ್ರಮಾನುಸಾರ ಕೆತ್ತಿಸು.


ಪ್ರಧಾನ ಯಾಜಕನ ಕವಚಕ್ಕೆ ಬೇಕಾದ ಗೋಮೇಧಕ ರತ್ನಗಳು, ಮತ್ತು ಪದಕದ ಚೀಲದಲ್ಲಿ ಕೆತ್ತಬೇಕಾದ ನಾನಾ ರತ್ನಗಳು.


ರತ್ನಗಳನ್ನು ಕೆತ್ತಿ ಮರದಲ್ಲಿ ವಿಚಿತ್ರವಾದ ಕೆತ್ತನೆ ಕೆಲಸವನ್ನು ಮಾಡುವನು; ಇವೇ ಮೊದಲಾದ ಸಮಸ್ತ ಶೃಂಗಾರ ಕೆಲಸವನ್ನು ಮಾಡುವನು.


ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ, ಇವುಗಳನ್ನೂ ಗೋಮೇಧಕ ರತ್ನ ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪುಹರಳು, ವಿವಿಧ ವರ್ಣದ ಕಲ್ಲು, ತರತರದ ಮಣೆ, ಚಂದ್ರಕಾಂತ ಇವುಗಳನ್ನೂ ನನ್ನ ದೇವರ ಮಂದಿರಕ್ಕಾಗಿ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ.


ಸ್ವಜನರನು ದೇವ ಸರ್ವೇಶ್ವರ ಕಾಪಾಡುವನು ಮೇಷಪಾಲನಂತೆ ನಾಡಿನೊಳು ಥಳಥಳಿಸುವರವರು ಕಿರೀಟದ ರತ್ನಗಳಂತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು