Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 26:1 - ಕನ್ನಡ ಸತ್ಯವೇದವು C.L. Bible (BSI)

1 “ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ತಾನು ಬಟ್ಟೆಗಳಿಂದ ಮಾಡಿಸಬೇಕು. ಅವು ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ ಊದ ಹಾಗು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮಾತ್ಕಾರವಾಗಿ ಕಸೂತಿ ಹಾಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನನ್ನ ನಿವಾಸಕ್ಕಾಗಿ ಒಂದು ಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಅವು ನಯವಾಗಿ ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರದಿಂದ ಕೆರೂಬಿಗಳನ್ನು ನೇಯ್ಗೆಯಿಂದ ಕಸೂತಿ ಹಾಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 [ನನ್ನ ನಿವಾಸಕ್ಕಾಗಿ] ಒಂದು ಗುಡಾರವನ್ನು ಹತ್ತು ತಾನು ಬಟ್ಟೆಗಳಿಂದ ಮಾಡಿಸಬೇಕು. ಅವು ಹೊಸೆದ ನಾರಿನ ಬಟ್ಟೆಗಳಾಗಿರಬೇಕು. ಅವುಗಳಲ್ಲಿ ನೀಲಿ ಧೂಮ್ರ ರಕ್ತವರ್ಣಗಳ ದಾರದಿಂದ ಕೆರೂಬಿಗಳನ್ನು ಚಮತ್ಕಾರವಾಗಿ ಕಸೂತಿಹಾಕಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನು ಮೋಶೆಗೆ, “ಪವಿತ್ರಗುಡಾರವನ್ನು ಹತ್ತು ಪರದೆಗಳಿಂದ ಮಾಡಿಸಬೇಕು. ಈ ಪರದೆಗಳನ್ನು ನಾರುಬಟ್ಟೆ ಮತ್ತು ನೀಲಿ, ನೇರಳೆ ಮತ್ತು ಕೆಂಪು ದಾರದಿಂದ ಮಾಡಿಸಬೇಕು. ನುರಿತ ಕೆಲಸಗಾರನು ಪರದೆಗಳಲ್ಲಿ ರೆಕ್ಕೆಗಳಿರುವ ಕೆರೂಬಿಗಳ ಚಿತ್ರವನ್ನು ಕಸೂತಿ ಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 “ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಮಾಡಿದ ಕೆರೂಬಿಗಳುಳ್ಳವುಗಳಾಗಿಯೂ ಇರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 26:1
29 ತಿಳಿವುಗಳ ಹೋಲಿಕೆ  

ಡೇರೆಯ ಬಾಗಲಿಗೆ ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ, ಹಾಗು ಕಡುಗೆಂಪು ವರ್ಣಗಳುಳ್ಳ ದಾರದಿಂದ ವಿಚಿತ್ರವಾಗಿ ಕಸೂತಿಹಾಕಿ ತೆರೆಯನ್ನು ಮಾಡಿಸಬೇಕು.


ಹುರಿನಾರಿನ ಬಟ್ಟೆಯಲ್ಲಿ ನೀಲಿ, ಊದ ಹಾಗು ಕಡುಗೆಂಪುವರ್ಣಗಳುಳ್ಳ ದಾರದಿಂದ ಕೆರೂಬಿಗಳ ಚಿತ್ರವನ್ನು ಚಮತ್ಕಾರವಾಗಿ ಕಸೂತಿ ಹಾಕಿ ಒಂದು ತೆರೆಯನ್ನು ಮಾಡಿದರು.


ಹುರಿನಾರಿನ ಬಟ್ಟೆಯಲ್ಲಿ ನೀಲಿ, ಧೂಮ್ರ, ರಕ್ತವರ್ಣಗಳುಳ್ಳ ದಾರದಿಂದ ಕೆರೂಬಿಗಳನ್ನು ಕಲಾತ್ಮಕವಾಗಿ ಕಸೂತಿಹಾಕಿ ಒಂದು ತೆರೆಯ ಚಿತ್ರವನ್ನು ಮಾಡಿಸಬೇಕು.


ಕೃಪಾಸನದ ಎರಡು ಕೊನೆಗಳಲ್ಲಿ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು.


ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು : ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ.


ದಿವ್ಯವಾದುವು, ಭವ್ಯವಾದುವು, ಮೌಲ್ಯವಾದುವು, ಆಕೆಗಿತ್ತ ಉಡುಗೆತೊಡುಗೆಗಳು; ಸತ್ಕಾರ್ಯಗಳೇ ದೇವಜನರು ಧರಿಸುವ ಅಮೂಲ್ಯ ಉಡುಗೆತೊಡುಗೆಗಳು.”


ಇವೆಲ್ಲವೂ ಈ ಕಾಲದ ಪರಿಸ್ಥಿತಿಗೆ ಒಂದು ನಿದರ್ಶನವಾಗಿವೆ. ಈ ವ್ಯವಸ್ಥೆಯ ಪ್ರಕಾರ ಸಮರ್ಪಣೆಯಾಗುತ್ತಿದ್ದ ಕಾಣಿಕೆಗಳೂ ಬಲಿಗಳೂ ಆರಾಧಕನ ಅಂತರಂಗವನ್ನು ಪೂರ್ಣವಾಗಿ ಶುದ್ಧಗೊಳಿಸಲು ಅಸಮರ್ಥವಾಗಿದ್ದವು.


ಅಲ್ಲಿ, ಆ ಪವಿತ್ರಸ್ಥಾನದಲ್ಲಿ ಮನುಷ್ಯರಿಂದಲ್ಲ, ದೇವರಿಂದಲೇ ನಿರ್ಮಿತವಾದ ನಿಜವಾದ ಗರ್ಭಗುಡಿಯಲ್ಲಿ, ಅವರು ಯಾಜಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು.


ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.


ಆದರೂ ದಾವೀದನು ಸರ್ವೇಶ್ವರನ ದೂತ ಹಿಡಿದಿದ್ದ ಕತ್ತಿಗೆ ಹೆದರಿ, ದೇವದರ್ಶನಕ್ಕಾಗಿ ಅಲ್ಲಿಗೆ ಹೋಗಲಾರದೆ, ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಬಲಿಯರ್ಪಿಸಿದನು.


ಆಗ ಅರಸ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದನು.


“ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ನೀನು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸು.


ಶಿಲ್ಪಿಗಳು, ಚಮತ್ಕಾರವಾದ ಕೆಲಸ ನಿಯೋಜಿಸುವವರು ಹಾಗು ನೀಲಿ, ಊದ ಹಾಗು ಕಡುಗೆಂಪು ವರ್ಣದ ದಾರದಿಂದಲೂ ನಯವಾದ ನಾರುಬಟ್ಟೆಯಿಂದಲೂ ಕಸೂತಿ ಕೆಲಸ ಮಾಡುವವರು, ನೇಯುವವರು, ಅಂತೂ ಎಲ್ಲ ಕಸುಬುದಾರರು ನಡೆಸುವ ಕೆಲಸಗಳನ್ನು ನಿಯೋಜಿಸುವುದಕ್ಕೂ ಹಾಗು ಕಾರ್ಯಗತ ಮಾಡುವುದಕ್ಕೂ ಸರ್ವೇಶ್ವರ ಅವರಿಗೆ ಜ್ಞಾನವನ್ನು ಪೂರ್ತಿಯಾಗಿ ಅನುಗ್ರಹಿಸಿದ್ದಾರೆ.


ನಯವಾದ ನಾರುಬಟ್ಟೆಗಳು, ಆಡುಕೂದಲಿನ ಬಟ್ಟೆಗಳು,


ನಾನು ಜನರ ಮಧ್ಯೆ ವಾಸಿಸುವುದಕ್ಕೆ ನನಗೊಂದು ಗುಡಾರವನ್ನು ಕಟ್ಟಿಸಬೇಕು.


ನೀಲಿ, ಊದ ಕಡುಗೆಂಪು ವರ್ಣಗಳುಳ್ಳ ದಾರಗಳು, ನಾರುಮಡಿಗಳು, ತುಪ್ಪಟದ ಬಟ್ಟೆಗಳು,


ಅಂದರೆ, ಒಂದು ಗುಡಾರವನ್ನು ಕಟ್ಟುತ್ತಿದ್ದರು. ಅದರಲ್ಲಿ ಎರಡು ಭಾಗಗಳು ಇದ್ದವು. ಮೊದಲನೆಯ ಭಾಗಕ್ಕೆ ಪವಿತ್ರಸ್ಥಳ ಎಂದು ಹೆಸರು. ಅಲ್ಲಿ, ಒಂದು ದೀಪಸ್ತಂಭ ಮತ್ತು ಒಂದು ಮೇಜು ಇದ್ದವು. ಆ ಮೇಜಿನ ಮೇಲೆ ಅರ್ಪಣೆಯ ನೈವೇದ್ಯ ರೊಟ್ಟಿಗಳನ್ನು ಇಡುತ್ತಿದ್ದರು.


ಒಂದೊಂದು ತಾನು ಬಟ್ಟೆ ಇಪ್ಪತ್ತೆಂಟು ಮೊಳ ಉದ್ದ ಹಾಗು ನಾಲ್ಕು ಮೊಳ ಅಗಲವಾಗಿರಬೇಕು.


ಅವರು ಮಾಡಬೇಕಾದುವುಗಳು ಇವು: ದೇವದರ್ಶನದ ಗುಡಾರ,


ದೇವದರ್ಶನದ ಗುಡಾರದ ಉಪಕರಣಗಳಲ್ಲಿ ಗೇರ್ಷೋನನ ವಂಶದವರು ನೋಡಿಕೊಳ್ಳಬೇಕಾಗಿದ್ದವುಗಳು ಇವು - ಗುಡಾರ, ಅದರ ಮೇಲಿದ್ದ ಡೇರೆಯ ಬಟ್ಟೆ, ಅದರ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಲ್ಲಿರುವ ಪರದೆ


ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು.


ದೇವದರ್ಶನದ ಗುಡಾರ, ಆಜ್ಞಾಶಾಸನಗಳಿರುವ ಮಂಜೂಷ, ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲ ಉಪಕರಣಗಳು;


ನೀಲಿ, ಊದ ಹಾಗು ಕಡುಗೆಂಪು ವರ್ಣಗಳುಳ್ಳ ದಾರದೊಡನೆ ಮತ್ತು ನಾರಿನ ಬಟ್ಟೆಯೊಡನೆ ಕಲಾತ್ಮಕ ಕೆಲಸದವರ ಪದ್ಧತಿಯ ಮೇರೆಗೆ ಕಸೂತಿ ಕೆಲಸ ಮಾಡುವುದಕ್ಕಾಗಿ ಬಂಗಾರವನ್ನು ತಟ್ಟಿ ತಗಡುಗಳನ್ನು ಮಾಡಿ, ಸಣ್ಣ ಸಣ್ಣ ಎಳೆಗಳಾಗಿ ಕತ್ತರಿಸಿದರು


ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು - ಅಂದರೆ; ಗುಡಾರ ಅದರ ಹೊದಿಕೆ ಅದರ ಮೇಲಿನ ಹಸನಾದ ತೊಗಲಿನ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಿನ ಪರದೆ,


ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಒಳಗೂ ಕೆರೂಬಿ, ಖರ್ಜೂರವೃಕ್ಷ, ಹೂವು, ಇವುಗಳ ಚಿತ್ರಗಳನ್ನು ಕೆತ್ತಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು