Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 21:20 - ಕನ್ನಡ ಸತ್ಯವೇದವು C.L. Bible (BSI)

20 “ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಅಲ್ಲೇ ಸಾಯುವಂತೆ ಮಾಡಿದ್ದರೆ ಅವನಿಗೆ ತಕ್ಕ ಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಒಬ್ಬನು ತನ್ನ ದಾಸನನ್ನಾಗಲಿ, ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಹೊಡೆದರೆ, ಅವನಿಗೆ ತಕ್ಕ ಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಒಬ್ಬನು ತನ್ನ ದಾಸನನ್ನಾಗಲಿ ದಾಸಿಯನ್ನಾಗಲಿ ಕೋಲಿನಿಂದ ಹೊಡೆದು ಸಾಯುವಂತೆ ಮಾಡಿದರೆ ಅವನಿಗೆ ತಕ್ಕ ಶಿಕ್ಷೆ ಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 “ಕೆಲವು ಸಲ ಯಜಮಾನರು ಗುಲಾಮನನ್ನಾಗಲಿ ಗುಲಾಮಳನ್ನಾಗಲಿ ಹೊಡೆಯುತ್ತಾರೆ. ಹೊಡೆದಾಗ ಆ ವ್ಯಕ್ತಿಯು ಸತ್ತರೆ, ಯಜಮಾನನಿಗೆ ಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 “ಒಬ್ಬನು ದಾಸನನ್ನಾಗಲಿ, ದಾಸಿಯನ್ನಾಗಲಿ ಸಾಯುವಂತೆ ಕೋಲಿನಿಂದ ಹೊಡೆದಾಗ, ಹೊಡೆದವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 21:20
12 ತಿಳಿವುಗಳ ಹೋಲಿಕೆ  

ಆತನು ನಿನ್ನ ಹಿತಕ್ಕಾಗಿ ದೇವರಿಂದ ನೇಮಕಗೊಂಡ ದಾಸನಾಗಿದ್ದಾನೆ. ಆದರೆ ನೀನು ಕೆಟ್ಟದ್ದನ್ನು ಮಾಡಿದೆ ಆದರೆ ಭಯಪಡಲೇಬೇಕು. ಏಕೆಂದರೆ, ಆತನ ಕೈಯಲ್ಲಿರುವ ಅಧಿಕಾರದಂಡವು ವ್ಯರ್ಥವಾದುದೇನೂ ಅಲ್ಲ. ದೇವರ ದಾಸನಾಗಿರುವ ಆತನು ಕೆಟ್ಟದ್ದನ್ನು ಮಾಡುವವರಿಗೆ ದೇವರದಂಡನೆಯನ್ನು ವಿಧಿಸುತ್ತಾನೆ.


ಮಾತಿನಿಂದ ಮಾತ್ರ ಸೇವಕನನ್ನು ತಿದ್ದಲಾಗದು; ಮಾತು ಕಿವಿಗೆ ಬಿದ್ದರೂ ಅದನ್ನು ಗ್ರಹಿಸಲಾರದು.


ನೀವು ಅಂಥವರನ್ನು ಕನಿಕರಿಸಬಾರದು; ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು, ಕಣ್ಣಿಗೆ ಪ್ರತಿಯಾಗಿ ಕಣ್ನನ್ನು, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು, ಕೈಗೆ ಪ್ರತಿಯಾಗಿ ಕೈಯನ್ನು, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.


ನರಹತ್ಯ ಮಾಡಿದವನನ್ನು ಕಂಡೊಡನೆ ಕೊಲ್ಲಬೇಕಾದವನು ಹತನಾದವನ ಸಮೀಪ ಬಂಧುವೇ.


"ನಿರ್ಮಿಸಿಹರು ದೇವರು ತಮ್ಮ ಸ್ವರೂಪದಲ್ಲಿ ನರನನ್ನು ಎಂತಲೆ ನರನನ್ನು ಕೊಲ್ಲುವವನು ನರನಿಂದಲೇ ಹತನಾಗುವನು.


ಕಾಯಿನನನ್ನು ಕೊಂದವನಿಗೆ ಆಗುವುದಾದರೆ ಪ್ರತೀಕಾರ ಏಳ್ಮಡಿ ಲೆಮೆಕನನ್ನು ಕೊಂದವನಿಗೆ ಆಗುವುದು ಪ್ರತೀಕಾರ ಎಪ್ಪತ್ತೇಳ್ಮಡಿ.


ಅದಕ್ಕೆ ಸರ್ವೇಶ್ವರ, “ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು,"ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು.


ಇಂಥ ಸಂದರ್ಭಗಳಲ್ಲಿ ಹೊಡೆದವನಿಗೆ ಶಿಕ್ಷೆಯಾಗಬಾರದು. ಆದರೆ ಗಾಯಗೊಂಡವನು ಕೆಲಸ ಮಾಡಲಾರದೆ ಹೋದ ಕಾಲಕ್ಕೆ ತಕ್ಕಷ್ಟು ಹಣ ಕೊಡಬೇಕು. ಹಾಗು ಅವನು ಪೂರ್ಣ ಸ್ವಸ್ಥನಾಗುವ ವರೆಗೂ ನೋಡಿಕೊಳ್ಳಬೇಕು.


ಆ ಆಳು ಒಂದೆರಡು ದಿನ ಜೀವದಿಂದ ಉಳಿದಿದ್ದರೆ ಯಜಮಾನನಿಗೆ ಶಿಕ್ಷೆ ವಿಧಿಸಬಾರದು. ಆ ದಾಸದಾಸಿಯರು ಅವನ ಸೊತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು