Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 19:18 - ಕನ್ನಡ ಸತ್ಯವೇದವು C.L. Bible (BSI)

18 ಸೀನಾಯಿ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತ್ತು. ಏಕೆಂದರೆ ಸರ್ವೇಶ್ವರ ಸ್ವಾಮಿ ಬೆಂಕಿಯ ರೂಪದಲ್ಲಿ ಆ ಬೆಟ್ಟದ ಮೇಲೆ ಇಳಿದುಬಂದಿದ್ದರು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದೂ ಅಲ್ಲದೆ ಬೆಟ್ಟವೆಲ್ಲ ಬಹಳವಾಗಿ ಕಂಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದನು. ಆದುದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು. ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಯೆಹೋವನು ಬೆಂಕಿಯೊಳಗೆ ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದು ಬಂದದರಿಂದ ಆ ಬೆಟ್ಟವೆಲ್ಲಾ ಹೊಗೆಯಿಂದ ಆವರಿಸಿಕೊಂಡಿತು. ಆ ಹೊಗೆ ಆವಿಗೆಯ ಹೊಗೆಯಂತೆ ಏರಿತು; ಅದಲ್ಲದೆ ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯೆಹೋವ ದೇವರು ಅಗ್ನಿಯೊಳಗೆ ಬೆಟ್ಟದ ಮೇಲೆ ಇಳಿದಿದ್ದರಿಂದ ಸೀನಾಯಿ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 19:18
41 ತಿಳಿವುಗಳ ಹೋಲಿಕೆ  

ಕರಗಿಹೋದವು ಬೆಟ್ಟಗುಡ್ಡಗಳು ಆ ಸರ್ವೇಶ್ವರನ ಮುಂದೆ ನೀರಾಗಿ ಹೋಯಿತು ಸೀನಾಯಿ ಪರ್ವತವು ಇಸ್ರಯೇಲರ ದೇವನೆದುರಿಗೆ.


ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು I ಬೆಟ್ಟಗಳನು ನೀ ಮುಟ್ಟಲು, ಹೊಗೆ ಹೊರಹೊಮ್ಮುವುದು II


ದೇವರ ಸಾನ್ನಿಧ್ಯದ ತೇಜಸ್ಸು ಮತ್ತು ಪ್ರಭಾವಗಳು ದೇವಾಲಯವನ್ನು ಧೂಮದಿಂದ ತುಂಬಿದವು. ಇದರಿಂದಾಗಿ, ಆ ಏಳು ದೇವದೂತರು ತಂದ ಏಳು ವಿಪತ್ತುಗಳು ಮುಗಿಯುವ ತನಕ ಆ ದೇವಾಲಯವನ್ನು ಪ್ರವೇಶಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.


ಅಲ್ಲಿ ಮುಳ್ಳಿನ ಪೊದೆಯೊಂದರ ಒಳಗೆ ಉರಿಯುವ ಬೆಂಕಿಯಲ್ಲಿ ಸರ್ವೇಶ್ವರನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆ ನೋಡಿದನು. ಆ ಮುಳ್ಳಿನ ಪೊದೆ ಉರಿಯುತ್ತಲೇ ಇತ್ತು; ಆದರೆ ಸುಟ್ಟುಹೋಗದೆ ಇತ್ತು.


ಬೆಟ್ಟಗಳನ್ನು ನೋಡಿದೆ, ಅವು ನಡುನಡುಗುತ್ತಿದ್ದವು. ಗುಡ್ಡ ದಿಣ್ಣೆಗಳೂ ಅಲ್ಲೋಲಕಲ್ಲೋಲವಾಗಿದ್ದವು.


ಸೊದೋಮ್ - ಗೊಮೋರ ಹಾಗೂ ಆ ಬಯಲುಸೀಮೆಯತ್ತ ಅವನು ಕಣ್ಣುಹಾಯಿಸಿದಾಗ, ಇಗೋ, ಆ ಪ್ರದೇಶದಿಂದ ಹೊಗೆ, ದೊಡ್ಡ ಆವಿಗೆಯ ಹೊಗೆಯಂತೆ ಭುಗಿಲೇರುತ್ತಿತ್ತು.


ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II


ಸರ್ವೇಶ್ವರ ಸೀನಾಯ್ ಬೆಟ್ಟದಿಂದ ಬಂದರು, ಸೇಯೀರ್ ಎಂಬ ಸೀಮೆಯೊಳಗಿಂದ ಉದಯಿಸಿದರು, ಪಾರಾನ್ ಎಂಬ ಪರ್ವತದಿಂದ ಪ್ರಜ್ವಲಿಸಿದರು, ಲಕ್ಷಾಂತರ ಸಂತರ ಮಧ್ಯೆಯಿಂದ ದಯಮಾಡಿದರು. ಅಗ್ನಿಸದೃಶವಾದ ಧರ್ಮಶಾಸ್ತ್ರ ಅವರ ಬಲಪಾರ್ಶ್ವದಲ್ಲಿತ್ತು.


“ಈ ಮಾತುಗಳನ್ನು ಸರ್ವೇಶ್ವರ ಆ ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು, ಇವುಗಳ ಮಧ್ಯೆ ನಿಮ್ಮ ಸರ್ವಸಮೂಹಕ್ಕೆ ಕೇಳಿಸುವಂತೆ ಮಹಾಸ್ವರದಿಂದ ನುಡಿದರು; ಬೇರೆ ಏನನ್ನೂ ಕೂಡಿಸದೆ, ಈ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಬರೆದು ನನಗೆ ಕೊಟ್ಟರು.


ಸರ್ವೇಶ್ವರನ ತೇಜಸ್ಸು ಬೆಟ್ಟದ ಶಿಖರದ ಮೇಲೆ ಪ್ರಜ್ವಲಿಸುವ ಬೆಂಕಿಯೋಪಾದಿಯಲ್ಲಿ ಇಸ್ರಯೇಲರಿಗೆ ಕಾಣಿಸಿತು.


ಅಂದು ದೇವರ ಧ್ವನಿಗೆ ಭೂಮಿಯು ನಡುಗಿತು. ಇಂದಾದರೋ, “ಇನ್ನೂ ಒಂದು ಸಾರಿ ನಾನು ಭೂಮಿಯನ್ನಷ್ಟೇ ಅಲ್ಲ, ಆಕಾಶವನ್ನೂ ನಡುಗಿಸುತ್ತೇನೆ,” ಎಂದು ಪ್ರತಿಜ್ಞೆಮಾಡಿರುತ್ತಾರೆ.


ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು.


ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಿಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು.


ಪ್ರಭುವಿನ ದಿನ ಬಂದೇ ತೀರುವುದು. ಅದು ಕಳ್ಳನಂತೆಯೇ ಬರುವುದು. ಆಗ, ಆಕಾಶಮಂಡಲವು ಸಿಡಿಲ ಗರ್ಜನೆಯೊಂದಿಗೆ ಅಳಿದುಹೋಗುವುದು. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಸುಟ್ಟು ಲಯವಾಗಿ ಹೋಗುವುವು. ಭೂಮಿಯೂ ಅದರಲ್ಲಿರುವ ಸಮಸ್ತವೂ ಉರಿದು ಭಸ್ಮವಾಗುವುವು.


ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು;


ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು.


ನೀವು ಆ ಗುಡ್ಡಗಳ ನಡುವೆ ಉಂಟಾಗುವ ಕಣಿವೆಯ ಮೂಲಕ ಪಲಾಯನಗೈಯುವಿರಿ. ಆ ಕಣಿವೆ ಆಚೆಲಿನವರೆಗೆ ಹಬ್ಬಿರುವುದು. ಜುದೇಯದ ಅರಸನಾದ ಉಜ್ಜೀಯನ ಕಾಲದಲ್ಲಿ ಭೂಕಂಪವಾದಾಗ ನೀವು ಮಾಡಿದಂತೆ ಪಲಾಯನ ಗೈಯುವಿರಿ. ಆಗ ನನ್ನ ದೇವರಾದ ಸರ್ವೇಶ್ವರ ತಮ್ಮ ದೂತರ ಸಮೇತ ಬರುವರು.


ನಡುಗು ಭೂಲೋಕವೇ, ಪ್ರಭುವಿನ ಮುಂದೆ I ನಡುನಡುಗು ಯಕೋಬ ದೇವರ ಮುಂದೆ II


ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ I ಹೊಳೆಯಿತು ನಿನ್ನ ಮಿಂಚು ಇಡೀ ಲೋಕದಲಿ I ಕಂಪಿಸಿತೀ ಭೂಮಂಡಲ ನಡುನಡುಗಿ II


ಆ ಗುಡುಗು ಮಿಂಚನ್ನು, ತುತೂರಿ ಧ್ವನಿಯನ್ನು ಹಾಗು ಬೆಟ್ಟದಿಂದ ಹೊರಡುತ್ತಿದ್ದ ಹೊಗೆಯನ್ನು ಜನರೆಲ್ಲರು ನೋಡಿದರು. ನೋಡಿ ನಡುಗುತ್ತಾ ದೂರದಲ್ಲೇ ನಿಂತುಕೊಂಡರು.


ಅಂಥವನನ್ನು ಯಾರೂ ಕೈಯಿಂದ ಮುಟ್ಟದೆ ಕಲ್ಲೆಸೆದು ಅಥವಾ ಬಾಣಬಿಟ್ಟು ಕೊಲ್ಲಬೇಕು. ಬೆಟ್ಟವನ್ನು ಮುಟ್ಟಿದವರು ಮನುಷ್ಯನಾಗಿರಲಿ, ಪಶುಪ್ರಾಣಿಯಾಗಲಿ ಉಳಿಯಬಾರದು.’ ಕೊಂಬಿನ ಧ್ವನಿ ಕೇಳಿಸಿದಾಗ ಬೆಟ್ಟವನ್ನೇರಿ ಬರಬೇಕೆಂದು ಹೇಳು.”


ಪ್ರಭು ಯೇಸು ತಮ್ಮ ಪ್ರಭಾವಯುತ ದೂತರೊಂದಿಗೆ ಸ್ವರ್ಗದಿಂದ ಪ್ರತ್ಯಕ್ಷರಾಗುವಾಗ, ಬೆಂಕಿಯ ಜ್ವಾಲೆಗಳು ಕಂಡುಬರುವುವು; ದೇವರನ್ನು ಅರಿತು ಅಲ್ಲಗಳೆದವರಿಗೂ ನಮ್ಮ ಪ್ರಭು ಯೇಸುವಿನ ಶುಭಸಂದೇಶಕ್ಕೆ ಅವಿಧೇಯರಾಗಿ ವರ್ತಿಸಿದವರಿಗೂ ತಕ್ಕ ಪ್ರತೀಕಾರವಾಗುವುದು.


ಅವನು ಆ ಕೂಪದ ಮುಚ್ಚಳವನ್ನು ತೆರೆದನು. ಅದರೊಳಗಿಂದ ದಟ್ಟಹೊಗೆ ದೊಡ್ಡ ಕುಲುಮೆ ಒಂದರಿಂದ ಬರುತ್ತಿರುವಂತೆ ಮೇಲೇರಿತು. ಇದರಿಂದಾಗಿ ಸೂರ್ಯನೂ ವಾಯುಮಂಡಲವೂ ಕಪ್ಪಾದವು.


ನರಮಾನವರು ಕಟ್ಟುತ್ತಿದ್ದ ಆ ಪಟ್ಟಣವನ್ನು ಹಾಗೂ ಗೋಪುರವನ್ನು ನೋಡಲು ಸರ್ವೇಶ್ವರ ಸ್ವಾಮಿ ಇಳಿದು ಬಂದರು.


ದೇವದರ್ಶನಕ್ಕಾಗಿ ಮೋಶೆ ಜನರನ್ನು ಪಾಳೆಯದ ಹೊರಕ್ಕೆ ಬರಮಾಡಿದನು. ಅವರು ಬಂದು ಬೆಟ್ಟದ ಬುಡದಲ್ಲಿ ನಿಂತರು.


ಬೆಳಿಗ್ಗೆ ನೀನು ಸಿದ್ಧವಾಗಿದ್ದು, ಸೀನಾಯಿ ಬೆಟ್ಟವನ್ನು ಹತ್ತಿ, ಅಲ್ಲಿ ಬೆಟ್ಟದ ತುದಿಯ ಮೇಲೆ ನನ್ನ ಸನ್ನಿಧಿಯಲ್ಲಿ ನಿಂತಿರು.


ಸರ್ವೇಶ್ವರ ಆ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ಮುಖಾಮುಖಿಯಾಗಿ ನಮ್ಮೊಂದಿಗೆ ಮಾತಾಡಿದರು.


(ಸ್ವಾಮೀ) ಆಕಾಶವನ್ನು ಸೀಳಿ ಇಳಿದು ಬರಲಾರಿರಾ? ನಿಮ್ಮ ದರ್ಶನವನ್ನು ಕಂಡು ಬೆಟ್ಟಗುಡ್ಡಗಳು ಗಡಗಡನೆ ನಡುಗಬಾರದೆ?


ನೀವು ಕಲಿತುಕೊಳ್ಳಬೇಕೆಂದೇ ಸರ್ವೇಶ್ವರ ಆಕಾಶದಿಂದ ತಮ್ಮ ಸ್ವರ ನಿಮಗೆ ಕೇಳಿಸುವ ಹಾಗೆ ಮಾಡಿದರು; ತಾವಿದ್ದ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ನೀವು ನೋಡುವಂತೆ ಮಾಡಿದರು; ಆ ಅಗ್ನಿಜ್ವಾಲೆಯ ಒಳಗಿಂದ ಅವರು ಆಡಿದ ಮಾತುಗಳನ್ನು ನೀವು ಕೇಳಿದಿರಿ.


ಸೀನಾಯಿ ಬೆಟ್ಟದ ಮೇಲೆ ಇಳಿದುಬಂದು ಆಕಾಶದ ಕಡೆಯಿಂದ ಅವರೊಡನೆ ಮಾತಾಡಬಂದು ಅವರಿಗನುಗ್ರಹಿಸಿದಿರಿ ನೀತಿನಿಯಮಗಳನು ಸತ್ಯಧರ್ಮೋಪದೇಶವನು, ಶ್ರೇಷ್ಠ ಆಜ್ಞಾವಿಧಿಗಳನು.


ಆಕಾಶವನೆ ಬಾಗಿಸಿ ಆತನಿಳಿದು ಬರಲು I ಸೇರಿತು ಆತನ ಕಾಲಡಿ ಕಾರ್ಮುಗಿಲು II


ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ I ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ II


ಸಾಗರವನೆ ನೀ ತುಳಿದು ನಡೆದೆ I ಮಹಾಸಾಗರವನೆ ನೀ ದಾಟಿದೆ I ಹೆಜ್ಜೆಯ ಗುರುತನೂ ಕಾಣಬಿಡದೆ II


ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ I ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ II


ಕಂಪಿಸುತ್ತದೆ ಭೂಮಿ ಆತ ನಿಂತಾಗ ಅದರುತ್ತದೆ ಲೋಕ ಆತ ದಿಟ್ಟಿಸಿದಾಗ ಸೀಳಿಹೋಗುತ್ತವೆ ಪುರಾತನಪರ್ವತಗಳು ಕುಸಿದುಬೀಳುತ್ತವೆ ಸನಾತನ ಗಿರಿಗಳು ಅನಾದಿಯಿಂದ ಹಾಗೆಯೆ ಆತನ ಆಗಮನಗಳು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು