Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 18:24 - ಕನ್ನಡ ಸತ್ಯವೇದವು C.L. Bible (BSI)

24 ಮೋಶೆ ತನ್ನ ಮಾವನ ಸಲಹೆಯನ್ನು ಒಪ್ಪಿಕೊಂಡನು. ಅವನು ಹೇಳಿದಂತೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಮೋಶೆ ತನ್ನ ಮಾವನ ಮಾತಿಗೆ ಒಪ್ಪಿಕೊಂಡು ಅವನು ಹೇಳಿದಂತೆಯೇ ಎಲ್ಲವನ್ನು ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಮೋಶೆ ತನ್ನ ಮಾವನ ಮಾತಿಗೆ ಒಪ್ಪಿಕೊಂಡು ಅವನು ಹೇಳಿದಂತೆಯೇ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಮೋಶೆಯು ತನ್ನ ಮಾವನಾದ ಇತ್ರೋನನು ಹೇಳಿದಂತೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಮೋಶೆಯು ತನ್ನ ಮಾವನ ಮಾತನ್ನು ಕೇಳಿ, ಅವನು ಹೇಳಿದ್ದನ್ನೆಲ್ಲಾ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 18:24
10 ತಿಳಿವುಗಳ ಹೋಲಿಕೆ  

ಹೀಗಿರಲಾಗಿ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕೈಗೆ, ಕಣ್ಣು ಹೇಳಲಾಗದು. ಅಂತೆಯೇ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕಾಲುಗಳಿಗೆ ತಲೆ ಹೇಳಲಾಗದು.


ಇವುಗಳನ್ನು ಕೇಳಿ ಜಾಣನು ಇನ್ನೂ ಜಾಣ ನಾಗುವನು, ವಿವೇಕಿಯು ಮತ್ತಷ್ಟು ಜ್ಞಾನಸಂಪನ್ನನಾಗುವನು.


ಆಗ ಎಜ್ರನು ಎದ್ದು, ಯಾಜಕರ ಮತ್ತು ಲೇವಿಯರ ಮುಖ್ಯಸ್ಥರಿಗೂ ಎಲ್ಲ ಇಸ್ರಯೇಲರಿಗೂ ಈ ಪ್ರಕಾರ ನಡೆಯುವುದಾಗಿ ಪ್ರಮಾಣ ಮಾಡಬೇಕೆಂದು ಹೇಳಿದನು. ಅವರು ಹಾಗೆಯೇ ಪ್ರಮಾಣ ಮಾಡಿದರು.


ಆಗ ಏಲಾಮ್ ಸಂತಾನದ ಯೆಹೀಯೇಲನ ಮಗ ಶೆಕನ್ಯನು ಎಜ್ರನಿಗೆ, “ಇಸ್ರಯೇಲರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧ ದ್ರೋಹಮಾಡಿದ್ದರೂ ನಮ್ಮನ್ನು ನಾವು ತಿದ್ದಿಕೊಳ್ಳುವ ನಿರೀಕ್ಷೆ ಇನ್ನೂ ಉಂಟು.


ಆದ್ದರಿಂದ ನನ್ನ ಮಾತನ್ನು ಕೇಳು; ನಾನು ಕೊಡುವ ಸಲಹೆಯನ್ನು ಗಮನಿಸು, ದೇವರು ನಿನ್ನೊಡನೆ ಇರುವರು. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಮುಂದೆ ತರುವುದೇನೋ ಸರಿ.


ಹೀಗೆ ಮಾಡಲು ದೇವರು ನಿನಗೆ ಅಪ್ಪಣೆ ಕೊಡಲಿ; ಮಾಡಿದರೆ ಈ ಹೊಣೆಯನ್ನು ನಿರ್ವಹಿಸಲು ಶಕ್ತನಾಗುವೆ; ಈ ಜನರೂ ಕೂಡ ಸಂತುಷ್ಟರಾಗಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವರು,” ಎಂದನು.


ಇಸ್ರಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ, ನೂರು, ಐವತ್ತು ಹಾಗು ಹತ್ತು ಮಂದಿಗಳ ಮೇಲೆ ಅಧಿಪತಿಗಳನ್ನು ನೇಮಿಸಿದನು.


“ಆ ಕಾಲದಲ್ಲಿ ನಾನು ನಿಮ್ಮನ್ನು ಸಂಬೋಧಿಸಿ, ‘ನಿಮ್ಮ ಭಾರವನ್ನು ನಾನೊಬ್ಬನೇ ಹೊರುವುದು ಅಸಾಧ್ಯ;


ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು