ವಿಮೋಚನಕಾಂಡ 18:12 - ಕನ್ನಡ ಸತ್ಯವೇದವು C.L. Bible (BSI)12 ಅದೂ ಅಲ್ಲದೆ ಮೋಶೆಯ ಮಾವ ಇತ್ರೋ ದೇವರಿಗೆ ದಹನ ಬಲಿಯನ್ನು ಹಾಗು ಇತರ ಬಲಿಗಳನ್ನು ಸಮರ್ಪಿಸಿದನು. ಆರೋನನು ಹಾಗು ಇಸ್ರಯೇಲರ ಹಿರಿಯರೆಲ್ಲರು ಬಂದು ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನ ಮಾಡಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಇದಲ್ಲದೆ ಮೋಶೆಯ ಮಾವನಾದ ಇತ್ರೋವನು ದೇವರಿಗೆ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದನು. ಆರೋನನು, ಇಸ್ರಾಯೇಲರ ಹಿರಿಯರೆಲ್ಲರೂ ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನವನ್ನು ಮಾಡುವುದಕ್ಕೆ ಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಅದಲ್ಲದೆ ಮೋಶೆಯ ಮಾವನಾದ ಇತ್ರೋವನು ದೇವರಿಗೆ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಲಾಗಿ ಆರೋನನೂ ಇಸ್ರಾಯೇಲ್ಯರ ಹಿರಿಯರೆಲ್ಲರೂ ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನವನ್ನು ಮಾಡುವದಕ್ಕೆ ಬಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 ಇತ್ರೋನನು ದೇವರಿಗೆ ಯಜ್ಞಗಳನ್ನು, ಕಾಣಿಕೆಗಳನ್ನು ಸಮರ್ಪಿಸಿದನು. ಆಗ ಆರೋನನು ಮತ್ತು ಇಸ್ರೇಲರ ಎಲ್ಲಾ ಹಿರಿಯರು ಮೋಶೆಯ ಮಾವನಾದ ಇತ್ರೋನನೊಡನೆ ದೇವರ ಸನ್ನಿಧಿಯಲ್ಲಿ ಊಟಮಾಡಲು ಬಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ಮೋಶೆಯ ಮಾವ ಇತ್ರೋವನು ದಹನಬಲಿಯನ್ನೂ, ಯಜ್ಞಗಳನ್ನೂ ದೇವರಿಗಾಗಿ ತೆಗೆದುಕೊಂಡು ಬಂದನು. ಆರೋನನೂ, ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನವನ್ನು ಮಾಡುವುದಕ್ಕೆ ಬಂದರು. ಅಧ್ಯಾಯವನ್ನು ನೋಡಿ |
ಆದುದರಿಂದ ನೀವು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸ ಯೋಬನ ಬಳಿಗೆ ಬನ್ನಿರಿ; ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ. ನನ್ನ ದಾಸ ಯೋಬ ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು; ನಾನು ಅವನ ವಿಜ್ಞಾಪನೆಯನ್ನು ಆಲಿಸಿ ನಿಮ್ಮ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ವಿಧಿಸುವುದಿಲ್ಲ. ನನ್ನ ದಾಸ ಯೋಬನು ನನ್ನ ವಿಷಯದಲ್ಲಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ,” ಎಂದರು.