Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 15:8 - ಕನ್ನಡ ಸತ್ಯವೇದವು C.L. Bible (BSI)

8 ಸಿಟ್ಟಿನಿಂದ ನೀ ಮುಸುಗೆರೆದಾಗಲೆ ಸಮುದ್ರವಾಯಿತು ನೀರೊಡ್ಡಿನಂತೆ ಪ್ರವಾಹ ನಿಂತಿತು ಗೋಡೆಯಂತೆ ಸಾಗರ (ಗರ್ಭ) ದೊಳಗಿನ ಜಲ ಗಟ್ಟಿಯಾಯಿತು ನೆಲದಂತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಿನ್ನ ಮೂಗಿನ ಶ್ವಾಸದಿಂದ ಸಮುದ್ರದ ನೀರು ಒಟ್ಟುಗೂಡಿದವು; ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು; ಸಾಗರದಾಳದೊಳಗಿನ ನೀರು ಗಟ್ಟಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನೀನು ಸಿಟ್ಟಿನಿಂದ ಮುಸುಗರೆದಾಗ ಸಮುದ್ರದ ನೀರು ಒಡ್ಡಿನಂತಾಯಿತು. ಪ್ರವಾಹವು ಗೋಡೆಯೋಪಾದಿಯಲ್ಲಿ ನಿಂತುಕೊಂಡಿತು. ಸಾಗರ ಗರ್ಭದೊಳಗಣ ಜಲವು ಗಟ್ಟಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀನು ಊದಿದ ಮಹಾಗಾಳಿಯಿಂದ ನೀರು ಒತ್ತಟ್ಟಿಗೆ ಸೇರಿತು. ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು. ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನೀವು ಬೀಸಿದ ಬಿರುಸಾದ ಗಾಳಿಯಿಂದ ನೀರು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು. ಜಲರಾಶಿಗಳು ಸಮುದ್ರದ ಮಧ್ಯದಲ್ಲಿ ಗಟ್ಟಿಯಾದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 15:8
13 ತಿಳಿವುಗಳ ಹೋಲಿಕೆ  

ಅಂಥವರು ದೇವರ ಉಸಿರಿನಿಂದಲೆ ನಾಶವಾಗುವರು ಆತನ ಸಿಟ್ಟಿನಿಂದಲೆ ಸತ್ತುಹೋಗುವರು.


ದಾಟಿಸಿದನವರನು ಸಮುದ್ರವನೆ ಭೇದಿಸಿ I ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ II


ಆಮೇಲೆ ಆ ಅಧರ್ಮಿ ಕಾಣಿಸಿಕೊಳ್ಳುವನು. ಅವನನ್ನು ಪ್ರಭು ಯೇಸು ತಮ್ಮ ಬಾಯುಸಿರಿನಿಂದಲೇ ಕೊಂದುಹಾಕುವರು; ತಮ್ಮ ಪ್ರತ್ಯಕ್ಷತೆಯ ತೇಜಸ್ಸಿನಿಂದಲೇ ತರಿದುಬಿಡುವರು.


ನಿನ್ನ ನೋಡಿ ತಳಮಳಗೊಳ್ಳುತ್ತವೆ ಬೆಟ್ಟಗಳು ಹರಿಯುತ್ತವೆ ಆಗಸದಿಂದ ಪ್ರವಾಹಗಳು ಕೈಯೆತ್ತಿ ಭೋರ್ಗರೆಯುತ್ತವೆ ಸಾಗರಗಳು.


ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ.


ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.


ಅವನ ಮೇಲೆ ಭಯಾತ್ಮನನ್ನು ಬರಮಾಡುವೆನು, ಅವನ ಒಂದು ಸುದ್ದಿಯನ್ನು ಕೇಳಿ ಸ್ವದೇಶಕ್ಕೆ ಹಿಂದಿರುಗಿ ಅಲ್ಲೆ ಕತ್ತಿಗೆ ತುತ್ತಾಗುವಂತೆ ಮಾಡುವೆನು.”


ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು.


ಸರ್ವಲೋಕದ ಒಡೆಯನಾದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ತಮ್ಮ ಕಾಲುಗಳನ್ನು ಜೋರ್ಡನ್ ನದಿಯ ನೀರಿನಲ್ಲಿ ಇಡುತ್ತಲೇ ಮೇಲಿಂದ ಹರಿದುಬರುವ ನೀರು ಮುಂದೆ ಸಾಗದೆ ಅಲ್ಲೇ ರಾಶಿಯಾಗಿ ನಿಂತುಕೊಳ್ಳುವುದು,” ಎಂದು ತಿಳಿಸಿದನು.


ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ ಕುಡಿಕೆಯಲಿ I ಕೂಡಿಟ್ಟಿಹನು ಜಲಾಶಯಗಳನು ಬುವಿಯುಗ್ರಾಣದಲಿ II


ಅಶ್ವಗಳನ್ನೇರಿ ನೀ ಸಮುದ್ರವನು ದಾಟಿದೆ ನೊರೆಗರೆಯುವ ಜಲರಾಶಿಯನು ಹಾದುಹೋದೆ.


ಮೇಲಿಂದ ಬರುತ್ತಿದ್ದ ನೀರು ಬಹು ದೂರದಲ್ಲಿದ್ದ ಚಾರೆತಾನಿನ ಬಳಿಯಿರುವ ಆದಾಮ್ ಊರಿನ ತನಕ ರಾಶಿಯಾಗಿ ನಿಂತುಕೊಂಡಿತು. ಕೆಳಗಿನ ನೀರು ಅರಾಬಾ ತಗ್ಗಿನಲ್ಲಿರುವ ಲವಣಸಮುದ್ರಕ್ಕೆ ಹರಿದುಹೋಯಿತು. ಜನರು ಜೆರಿಕೋವಿನ ಎದುರಿನಲ್ಲಿ ನದಿ ದಾಟಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು