Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 14:13 - ಕನ್ನಡ ಸತ್ಯವೇದವು C.L. Bible (BSI)

13 ಅದಕ್ಕೆ ಮೋಶೆ ಆ ಜನರಿಗೆ, “ಅಂಜಬೇಡಿ, ಸುಮ್ಮನಿರಿ, ಈ ದಿನ ಸರ್ವೇಶ್ವರ ನಿಮ್ಮನ್ನು ಹೇಗೆ ರಕ್ಷಿಸುತ್ತಾರೆಂದು ನೋಡಿ! ಈ ದಿನ ನೀವು ನೋಡುವ ಈಜಿಪ್ಟಿನವರನ್ನು ಇನ್ನೆಂದಿಗೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದರೆ ಮೋಶೆ ಆ ಜನರಿಗೆ, “ನೀವು ಅಂಜಬೇಡಿರಿ. ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆದರೆ ಮೋಶೆ ಆ ಜನರಿಗೆ - ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಆದರೆ ಮೋಶೆ ಆ ಜನರಿಗೆ, “ಭಯಪಡಬೇಡಿರಿ! ಓಡಿಹೋಗಬೇಡಿರಿ! ಇಲ್ಲೇ ಇದ್ದು ಯೆಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನೆಂದಿಗೂ ಈ ಈಜಿಪ್ಟಿನವರನ್ನು ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅದಕ್ಕೆ ಮೋಶೆಯು ಜನರಿಗೆ, “ನೀವು ಭಯಪಡಬೇಡಿರಿ, ದೃಢವಾಗಿ ನಿಲ್ಲಿರಿ. ಯೆಹೋವ ದೇವರು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಈಜಿಪ್ಟಿನವರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 14:13
36 ತಿಳಿವುಗಳ ಹೋಲಿಕೆ  

ಈ ಸಾರಿ ನೀವು ಯುದ್ಧಮಾಡುವುದು ಅವಶ್ಯವಿಲ್ಲ. ಯೆಹೂದ್ಯರೇ, ಜೆರುಸಲೇಮಿನವರೇ, ಸುಮ್ಮನೆ ನಿಂತುಕೊಂಡು ಸರ್ವೇಶ್ವರ ನಿಮಗಾಗಿ ನಡೆಸುವ ರಕ್ಷಣಾಕಾರ್ಯವನ್ನು ನೋಡಿರಿ; ಹೆದರಬೇಡಿ, ಕಳವಳಗೊಳ್ಳಬೇಡಿ. ನಾಳೆ ಅವರೆದುರಿಗೆ ಹೊರಡಿರಿ; ಸರ್ವೇಶ್ವರ ನಿಮ್ಮೊಂದಿಗೆ ಇರುವರು!” ಎಂದು ಹೇಳಿದನು.


ಅವನು , “ಜುದೇಯದ ಹಾಗು ಜೆರುಸಲೇಮಿನ ಎಲ್ಲ ಜನರೇ, ಅರಸ ಯೆಹೋಷಾಫಾಟನೇ, ಸರ್ವೇಶ್ವರ ಸ್ವಾಮಿ ಹೇಳುವುದನ್ನು ಕೇಳಿರಿ: ಈ ಮಹಾಸೈನ್ಯಸಮೂಹದ ನಿಮಿತ್ತ ಕಳವಳಗೊಳ್ಳಬೇಡಿ; ಹೆದರಬೇಡಿ. ಈ ಯುದ್ಧ ನಿಮ್ಮದಲ್ಲ, ದೇವರದೇ.


ಆ ದಿನ ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು.


ಆಗ ಎಲೀಷನು, “ಹೆದರಬೇಡ; ಅವರ ಕಡೆ ಇರುವವರಿಗಿಂತಲೂ ನಮ್ಮ ಕಡೆ ಇರುವವರು ಹೆಚ್ಚಾಗಿದ್ದಾರೆ,” ಎಂದು ಹೇಳಿ,


ಚಂಚಲ ಹೃದಯರಿಗೆ ಹೀಗೆಂದು ಹೇಳಿ : “ಭಯಪಡಬೇಡಿ; ಎದೆಗುಂದಬೇಡಿ; ಬರುವನು ಆ ದೇವನು ಮುಯ್ಯಿತೀರಿಸಲು ಬರುವನು ಆ ದೇವನು ಪ್ರತೀಕಾರವೆಸಗಲು ತಾನೇ ಬರುವನು ನಿಮ್ಮನ್ನು ರಕ್ಷಿಸಲು.”


ಸರ್ವೇಶ್ವರನು ನಮ್ಮನ್ನು ಉದ್ಧರಿಸುವನೆಂದು ಎದುರುನೋಡುತ್ತಾ ತಾಳ್ಮೆಯಿಂದಿರುವುದು ಒಳಿತು.


ಸರ್ವೇಶ್ವರ ಇಂತೆನ್ನುತ್ತಾರೆ: “ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಲಿಂದ ನಾನೇ ನಿನ್ನ ಸರ್ವೇಶ್ವರನಾದ ದೇವರು. ನಾನಲ್ಲದೆ ಬೇರೆ ದೇವರುಗಳು ನಿನಗಿಲ್ಲ. ನಾನಲ್ಲದೆ ನಿನಗೆ ಬೇರೆ ಉದ್ಧಾರಕರಿಲ್ಲ.


ಹೊರಟಿರುವೆ ನಿನ್ನ ಪ್ರಜೆಗಳ ರಕ್ಷಣೆಗೆ ನಿನ್ನ ಅಭಿಷಿಕ್ತನ ಜೀವೋದ್ಧಾರಕೆ. ಬಡಿದುಹಾಕಿರುವೆ ದುರುಳನ ಬುರುಡೆಯನು ನೆಲಸಮಮಾಡಿರುವೆ ಅವನ ಮನೆಯನು.


“ನಾನು, ನಾನೇ ಸರ್ವೇಶ್ವರ, ನನ್ನ ಹೊರತು ಇಲ್ಲ ಬೇರೆ ಉದ್ಧಾರಕ.


ಆದ್ದರಿಂದ ಸರ್ವೇಶ್ವರನಿಗೆ ವಿರುದ್ಧ ದಂಗೆ ಏಳಬೇಡಿ. ಆ ನಾಡಿನ ಜನರಿಗೆ ದಿಗಿಲುಪಡಬೇಡಿ. ಅವರು ನಮಗೆ ತುತ್ತಾಗುವರು. ನಾವು ಪುಷ್ಠಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ. ಸರ್ವೇಶ್ವರ ನಮ್ಮ ಕಡೆ ಇದ್ದಾರೆ. ಅವರಿಗೆ ಭಯಪಡಬೇಡಿ”


ಸರ್ವೇಶ್ವರಾ, ಎದುರುನೋಡುತ್ತಿರುವೆನು ನಿನ್ನಿಂದ ಬರುವಾ ಸಂರಕ್ಷಣೆಯನು.


ಜನರು : “ಇಗೋ, ನಿಮಗೆ ಅಭಿಮುಖರಾಗಿ ಬಂದಿದ್ದೇವೆ. ನೀವೇ ನಮ್ಮ ಸರ್ವೇಶ್ವರ, ನಮ್ಮ ದೇವರು. ನಿಶ್ಚಯವಾಗಿ ಬೆಟ್ಟಗುಡ್ಡಗಳಿಂದಲೂ ಜಾತ್ರೆಜಂಗುಳಿಯಿಂದಲೂ ನಮಗೆ ಮೋಸವಾಯಿತು. ಇಸ್ರಯೇಲಿನ ಉದ್ಧಾರ ಇರುವುದು ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಯ ಕೈಯಲ್ಲೇ, ಇದು ಸತ್ಯಕ್ಕೂ ಸತ್ಯ.


ನೋಡಿದಿರಿ ಈಜಿಪ್ಟಿನಲಿ ನಮ್ಮ ಪಿತೃಗಳು ಪಟ್ಟ ಕಷ್ಟವನು ಆಲಿಸಿದಿರಿ ಕೆಂಪುಸಮುದ್ರದ ಬಳಿ ಅವರಿಟ್ಟ ಮೊರೆಯನು.


ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯದರ್ಶನ ಆಯಿತು. ಅದರಲ್ಲಿ ಸರ್ವೇಶ್ವರ ಸ್ವಾಮಿಯ ಈ ವಾಣಿ ಕೇಳಿಸಿತು: “ಅಬ್ರಾಮನೇ ಭಯಪಡಬೇಡ, ನಿನ್ನನ್ನು ರಕ್ಷಿಸುವ ಕವಚ ನಾನೇ, ಘನವಾದ ಬಹುಮಾನ ಸಿಗುವುದು ನಿನಗೆ".


ಜಯ ವಿಜಯ ಲಭಿಸುವುದು ಪ್ರಭುವಿನಿಂದಲೆ I ನಿನ್ನಾಶೀರ್ವಾದವಿರಲಿ, ಪ್ರಭು, ಪ್ರಜೆಯ ಮೇಲೆ II


ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.


ಆಗ ದೂತನು ಆ ಮಹಿಳೆಯರಿಗೆ, “ಹೆದರಬೇಡಿ, ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ;


ಪರಮಪಾವನವಾಗಿರುವ ಇಸ್ರಯೇಲಿನ ಸರ್ವೇಶ್ವರ ಸ್ವಾಮಿಯಾದ ನಾನು ನಿಮಗೆ ಹೇಳುವುದೇನೆಂದರೆ : “ನೀವು ಪಶ್ಚಾತ್ತಾಪಪಟ್ಟು ನನಗೆ ಅಭಿಮುಖವಾಗಿ ನೆಮ್ಮದಿಯಿಂದಿದ್ದರೆ ಉದ್ಧಾರವಾಗುವಿರಿ. ಶಾಂತಿಸಮಾಧಾನ ಮತ್ತು ಭಕ್ತಿಭರವಸೆಯಲ್ಲೇ ಶಕ್ತಿಯನ್ನು ಪಡೆಯುವಿರಿ.” ಆದರೆ ನೀವು ಒಪ್ಪಿಕೊಂಡಿಲ್ಲ.


ಆಗ ಅವನೂ ಅವನ ಸಂಗಡಿಗರೂ ಹೊಲದ ಮಧ್ಯದಲ್ಲಿ ನಿಂತುಕೊಂಡು ಫಿಲಿಷ್ಟಿಯರಿಗೆ ವಿರೋಧವಾಗಿ ಕಾದಾಡಿದರು. ಸರ್ವೇಶ್ವರ ಅವನಿಗೆ ಮಹಾಜಯವನ್ನು ದಯಪಾಲಿಸಿದರು.


ಮೋಡಗಳ ಮೇಲೆ ನೀ ಆಗಮಿಸಿದೆ ಏಕೆ? ಜಯರಥಗಳಲ್ಲಿ ಆಸೀನನಾಗಿ ಬಂದೆ ಏಕೆ? ಸರ್ವೇಶ, ನಿನಗೆ ರೌದ್ರವೇ ನದಿಗಳ ಮೇಲೆ? ಸಿಟ್ಟುಸಿಡುಕವೇ ಹೊಳೆಗಳ ಮೇಲೆ? ರೋಷಾವೇಷವೇ ಸಮುದ್ರದ ಮೇಲೆ?


“ಇಸ್ರಯೇಲ್, ನಿನ್ನನ್ನು ನಾಶಮಾಡುವೆನು, ನಿನಗೆ ನೆರವಾಗಬಲ್ಲವರು ಯಾರು?


ಆಗ ದೇವರು, “ನಾನೇ ದೇವರು, ನಿನ್ನ ತಂದೆ ಆರಾಧಿಸಿದ ದೇವರು, ನೀನು ಈಜಿಪ್ಟ್ ದೇಶಕ್ಕೆ ಹೋಗಲು ಅಂಜಬೇಡ; ಅಲ್ಲಿ ನಿನ್ನಿಂದ ಮಹಾಜನಾಂಗ ಉತ್ಪನ್ನವಾಗುವಂತೆ ಮಾಡುವೆನು;


ಅದಕ್ಕೆ ಮೋಶೆ, “ಭಯಪಡಬೇಡಿ; ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಬಂದಿದ್ದಾರೆ; ಹೀಗೆ ದೈವಭೀತಿ ನಿಮ್ಮ ಕಣ್ಮುಂದಿದ್ದು ನೀವು ಪಾಪಮಾಡದೆ ಇರುವಿರಿ,” ಎಂದನು.


“ಸರ್ವೇಶ್ವರ ಈ ದಿನ ಇಸ್ರಯೇಲರಿಗೆ ಜಯವನ್ನುಂಟುಮಾಡಿರುವರು. ಆದ್ದರಿಂದ ಯಾರನ್ನೂ ಕೊಲ್ಲಬಾರದು,” ಎಂದು ಹೇಳಿದನು.


ಈಗ ಸರ್ವೇಶ್ವರ ನಿಮ್ಮ ಕಣ್ಮುಂದೆಯೇ ಮಾಡುವ ಮಹತ್ಕಾರ್ಯವನ್ನು ಹತ್ತಿರಬಂದು ನೋಡಿರಿ.


ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ.


ಆ ರಾತ್ರಿ ಸರ್ವೇಶ್ವರ ಅವನಿಗೆ ದರ್ಶನವಿತ್ತು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ ಅಂಜಬೇಡ, ನಿನ್ನ ಸಂಗಡ ನಾನಿರುವೆ. ಆ ನನ್ನ ದಾಸ ಅಬ್ರಹಾಮನ ನಿಮಿತ್ತ ನಿನ್ನ ಹರಸಿ ನಾ ಹೆಚ್ಚಿಸುವೆ ನಿನ್ನ ಸಂತಾನವ” ಎಂದರು.


ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II


ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ I ಶತ್ರುಗಳನೋ ಆವರಿಸಿತು ಸಮುದ್ರವು ನುಂಗಿ II


ನೀನಿದನು ಕಣ್ಣಾರೆ ಕಾಣುವೆ I ದುರುಳರ ದಂಡನೆಯನು ನೋಡುವೆ II


ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು