Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ವಿಮೋಚನಕಾಂಡ 13:22 - ಕನ್ನಡ ಸತ್ಯವೇದವು C.L. Bible (BSI)

22 ಹಗಲಿನಲ್ಲಿ ಮೇಘಸ್ತಂಭ, ರಾತ್ರಿಯಲ್ಲಿ ಅಗ್ನಿಸ್ತಂಭ ತಪ್ಪದೆ ಕಾಣಿಸುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಹಗಲಿನಲ್ಲಿ ಮೇಘಸ್ತಂಭವಾಗಿ, ರಾತ್ರಿಯಲ್ಲಿ ಅಗ್ನಿಸ್ತಂಭವಾಗಿ ಜನರನ್ನು ಬಿಟ್ಟು ಹೋಗದೆ ಅಲ್ಲಿಯೇ ಇರುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಹಗಲಲ್ಲಿ ಮೇಘಸ್ತಂಭವೂ ರಾತ್ರಿಯಲ್ಲಿ ಅಗ್ನಿಸ್ತಂಭವೂ ಜನರ ಮುಂದೆ ತಪ್ಪದೆ ಕಾಣಿಸಿದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ವಿಮೋಚನಕಾಂಡ 13:22
9 ತಿಳಿವುಗಳ ಹೋಲಿಕೆ  

ನಾನು ಮತ್ತೊಂದು ದೃಶ್ಯವನ್ನು ಕಂಡೆ. ಒಬ್ಬ ಬಲಿಷ್ಠ ದೇವದೂತನು ಸ್ವರ್ಗದಿಂದ ಇಳಿದುಬಂದನು. ಅವನು ಮೇಘಾಂಬರನಾಗಿದ್ದನು. ಅವನ ತಲೆಯ ಮೇಲೆ ಮುಗಿಲು ಬಿಲ್ಲೊಂದು ಇತ್ತು. ಮುಖವು ಸೂರ್ಯನಂತೆ ಇತ್ತು. ಕಾಲುಗಳು ಅಗ್ನಿಸ್ತಂಭಗಳಂತಿದ್ದವು.


ಸರ್ವೇಶ್ವರ ಸ್ವಾಮಿ ಮೋಶೆಗೆ ಹೀಗೆಂದರು:


ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು.


ಇಸ್ರಯೇಲರು ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದಾಗ ಮೇಘವೊಂದು ಅದರ ಮೇಲೆ ಆವರಿಸಿಕೊಂಡಿತು. ಸಂಜೆಯಿಂದ ಮುಂಜಾನೆಯವರೆಗೂ ಅದು ಬೆಂಕಿಯಂತೆ ಕಾಣಿಸಿತು.


ಹಗಲಲಿ ಅವರ ಮುಂದೆ ಸಾಗಿದಿರಿ ಮೇಘಸ್ತಂಭದಂತೆ ಇರುಳಲಿ ದಾರಿತೋರಿದಿರಿ ಬೆಳಕನೀವ ಅಗ್ನಿಸ್ತಂಭದಂತೆ.


ಹೀಗಿದ್ದರು ನೀವಾದಿರಿ ಅವರಿಗೆ ಕರುಣಾನಿಧಿ ತೊರೆದುಬಿಡಲಿಲ್ಲ ನೀವವರನು ಮರುಭೂಮಿಯಲಿ. ಬಿಟ್ಟುಹೋಗಲಿಲ್ಲ ದಾರಿತೋರಿದಾ ಮೇಘಸ್ತಂಭ ಹಗಲಲಿ ಮುನ್ನಡೆಯಿತು ಬೆಳಕನೀಯುತಾ ಅಗ್ನಿಸ್ತಂಭ ಇರುಳಲಿ.


ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.


ಇಸ್ರಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣ ಮುಂದೆ ಹಗಲುಹೊತ್ತಿನಲ್ಲಿ ಸರ್ವೇಶ್ವರನ ಮೇಘವು ಗುಡಾರದ ಮೇಲೆ ಇತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು